ಲಾಕ್ ಡೌನ್ ಮರೆತ ತಾವರಗೇರಾ ಹೋಬಳಿಯ ಜನತೆ.

Spread the love

ಲಾಕ್ ಡೌನ್ ಮರೆತ ತಾವರಗೇರಾ ಹೋಬಳಿಯ ಜನತೆ.

ಇಡೀ ರಾಜ್ಯವೆ ಈ ಕೊರೊನಾದ ಅಲೆಗೆ ತುತ್ತಾಗುತ್ತಿರು ದೃಶ್ಯ ಮಾಧ್ಯಮಗಳು ಕ್ಷಣ ಕ್ಷಣಕ್ಕೂ ಸುದ್ದಿ ಬಿಸ್ತಾರವಾಗುತ್ತಿದೆ. ಇಷ್ಟೆಲ್ಲಾ ಆದರೂ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಬೆಳಗಿನ ಜಾವ್ ಸುಮಾರು 4 ಘಂಟೆಯಿಂದ ಮಾರ್ಕೇಟ್ ಲೈನ್ ಓಪನ್ ಆಗುವ ಸದ್ಯತೆ ಇದೆ. ಹಳ್ಳಿ ಭಾಗದ ಜನರು ಹಾಗೂ ತಾವರಗೇರಾ ಪಟ್ಟಣದ ಜನರು ವ್ಯವಾಹರ ಮಾಡಲು ಕಿರಾಣಿ, ಕಾಯಿಪಲ್ಲೆ, ಬಟ್ಟೆ ವ್ಯಾಪಾರಿ ಇತರೆ ದಿನಸಿ ವಸ್ತುಗಳಲ್ಲದೆ ಬೇರೆ ವಸ್ತುಗಳಿಗೆ ಖರೀಧಿಗೆ ಬರುವ ಜನತೆ. ಈ ಕೋರೋನಾ ಮಹಾಮಾರಿ ರೋಗವು  ಅತ್ಯಂತ ಅತೀ ವೇಗದಲ್ಲಿ ಹರಡುವದರಿಂದ  ಜನರು ಹೆಚ್ಚೆತ್ತುಕೊಳ್ಳದೆ ಇಂದು ಬೆಳಂ ಬೆಳಗ್ಗೆ ಮಾರ್ಕೇಟ ಮಾಡಲು ಬಂದ ಜನತೆ, ಪ್ರತಿ ದಿನ, ಪ್ರತಿ ಕ್ಷಣ ಪೊಲೀಸರು ಮತ್ತು ಗೃಹ ರಕ್ಷಕ ಧಳದವರು ಬಂದು ಹೇಳಬೇಕೆಂದರೆ ಹೇಗೆ? ಪ್ರಜ್ಞಾವಂತವರು ನಾವುಗಳೇ ಸರ್ಕಾರ ಕೈಗೊಂಡ ನಿರ್ಣಯಕ್ಕೆ ನಾವೆಲ್ಲ ಕೈ ಜೋಡಿಸಬೇಕು.  ದಯವಿಟ್ಟು  ಅನಾವಶ್ಯಕವಾಗಿ ಬಿದಿ ಬಿದಿಗೆ ಬರಬೇಡಿ, ಕಾರಣವಿಲ್ಲದೆ ರಸ್ತೆಗೆ ಇಳಿಯಬೇಡಿ ನಿಮ್ಮೇಲ್ಲರ ಆರೋಗ್ಯವೆ ನಮಗೆ ಅಂತೀಮ ರಕ್ಷೆ ಎನ್ನುತ್ತ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿರುವ ಪೊಲೀಸ್ ಅಧಿಕಾರಿಗಳು, ಗೃಹ ರಕ್ಷಕ ಧಳದವರು, ಆರೋಗ್ಯ ಇಲಾಖೆಯವರು, ಇತರೆ ಸಂಬಂಧಿಸಿದ ಅಧಿಕಾರಿಗಳತ್ತ ಒಂದೆ ಒಂದು ಸಾರಿ ಯೋಚಿಸಿ. ಅವರಿಗೂ ತಮ್ಮದೇಯಾದ ಕುಟುಂಬವಿದೆ. ಮಾಹಾಮಾರಿ ಕೊರೋನಾ ರೋಗದ ಹಾವಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದಕಾರಣ ಇದನ್ನು ತಡೆಗಟ್ಟಲು ಸರಕಾರದ ಮಟ್ಟದಲ್ಲಿ ಅನೇಕ ಕಾರ್ಯಕ್ರಮಗಳು ಸೂಸುತ್ರವಾಗಿ ನಡೆಯುತ್ತಿವೆ.ಆದರೂ ಸಹ ಇದನ್ನು ತಹಬದಿಗೆ ತರುವ ಪ್ರಯತ್ನ ಕಷ್ಟಕರವಾಗುತ್ತಿದೆಂದು ಹೇಳಬಹುದು. ಕೊವೀಡ್ 19ರ ವಿರುದ್ದ ಸರ್ಕಾರವು ನಾನಾ ರೀತಿಯಿಂದ ಹರ ಸಹಾಸ ಪಡುತ್ತಿದೆ, ದಿನದಿಂದ ದಿನಕ್ಕೆ ಮಹಾಮಾರಿ ಕೋರನಾದ ವಿರುದ್ದ, ಸರ್ಕಾರ ಏನೇಲ್ಲಾ ಪ್ಲ್ಯಾನ್ ಮಾಡಿದರು ಈ ಮಹಾ ಮಾರಿ ಕರೋನಾ ಹತ್ತೋಟಿಗೆ ಬರುತ್ತಿಲ್ಲ. ಕೊರೊನಾದ ಎರಡನೇ ಅಲೆಗೆ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ತತ್ತರಿಸಿ ಹೋಗುತ್ತಿದೆ. ಈ ಬಾರಿ ಕೊರೊನಾ ಸೋಂಕಿತರ ಸಾವು ನೋವು ಅಧಿಕವಾಗಿದ್ದು, ಸರ್ಕಾರ ಸೋಂಕು ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದೆ. ಈ ಮಧ್ಯೆಯೇ ತಜ್ಞರು ದೇಶದಲ್ಲಿ ಕೊರೊನಾ ಮೂರನೇ ಅಲೆಯ ಬಗ್ಗೆ ಎಚ್ಚರಕೆ ನೀಡಿದ್ದಾರೆ.  ಇಷ್ಟೇಲ್ಲ ಇದ್ದರೂ ಕಿರಾಣಿ ಅಂಗಡಿ ಹಾಗೂ ಬಟ್ಟೆ ಅಂಗಡಿ ಮಾಲೀಕರು ಇತರೆ (ಬೇರೆ/ಬೇರೆ) ಅಂಗಡಿ ಮಾಲೀಕರು ಖದ್ದು/ಮುಚ್ಚಿ ವ್ಯವಹಾರ ಮಾಡುತ್ತಿರುವ ದೃಶ್ಯ ಕಂಡು ಬಂತ್ತು,  ಸದ್ಯ ಸರ್ಕಾರವು ತಗೆದುಕೊಂಡ ನಿರ್ಣಯಕ್ಕೆ ಸಾರ್ವಜನಿಕರು ಸ್ಪಂಧಿಸದೆ ಹೋದಲ್ಲಿ ಮುಂದೊಂದು ದಿನ ಅನುಭವಿಸುವುದು ನಾವೇ ಎಚ್ಚರ ವಿರಲಿ. ದಿನದಿಂದ ದಿನಕ್ಕೆ ಕೋರೋನದ ವಿರುದ್ದ ಹೋರಾಟ ಮಾಡಿ ಸಾವಿನ ಮೇಲೆ ಸಾವುಗಳು ಸಂಭವಿಸುವ ದೃಶ್ಯಗಳು ಕಣ್ಣಿಗೆ ಕಾಣುತ್ತಿದ್ದರು ನಾವುಗಳು ಎಚ್ಚೆತ್ತುಕೊಳ್ಳದೆ ಬೇಕಾಬಿಟ್ಟಿಯಾಗಿ ಅಲೆದಾಡುತ್ತಿರುವುದನ್ನು ಬಿಟ್ಟು ನಾವು/ನಿವೇಲ್ಲ ಎಚ್ಚೆತ್ತುಕೊಳ್ಳಬೇಕಾಗಿದೆ. ನಮ್ಮ ನಿಮ್ಮೆಲ್ಲರ ಆರೋಗ್ಯಕ್ಕಾಗಿ ಸರ್ಕಾರ ಕೈಗೊಂಡ ನಿರ್ಣಾಯಕ್ಕೆ ನಾವುಗಳು ಕೈ ಜೋಡಿಸಬೇಕಾಗಿದೆ. ಜಿಲ್ಲಾಡಳಿತದ ಮಾರ್ಗಸೂಚಿಯಂತೆ ತಾವರಗೇರಾ ಪಟ್ಟಣದಲ್ಲಿ ಪೋಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಇಲಾಖೆಯವರು ವಾಣಿಜ್ಯ ವ್ಯವಾಹರ ಮಾಲೀಕರಿಗೆ, ಕಿರಾಣಿ, ಬಟ್ಟೆ, ಇತರೆ ಅಂಗಡಿ ಮಾಲೀಕರಿಗೆ ಹಲವು ಭಾರಿ ಜಾಗೃತಿ ಮೂಡಿಸಿ ಹಾಗೂ ಕಠಿಣ ಕ್ರಮ ತೆಗೆದುಕೊಂಡರು ಸಹ ಬೆಳಗಿನ ಜಾವದಲ್ಲಿ ಅಂಗಡಿ ತೆರೆಯುವುದು ಜೊತೆಗೆ ಸಾರ್ವಜನಿಕರು ಸೇರುತ್ತಿರುವದು ಎಷ್ಟರಮಟ್ಟಿಗೆ ಸರಿ ಎನ್ನುವುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ.

Leave a Reply

Your email address will not be published. Required fields are marked *