ಅಕ್ಷರ ನಮನ,,,,,,,,
ನೀವು ಮಾಡಿರುವಿರಿ
ನಮ್ಮಯ ಮನಃ ಪರಿವರ್ತನೆ
ಅದಕ್ಕಾಗಿ ನಮ್ಮಿಂದ
ನಿಮಗೀ ಗೌರವ ಸಮರ್ಪಣೆ.
ತರಗತಿಗೆ ಬರುವಿರಿ
ಟಿಪ್-ಟಾಪ್
ನಾವಾಗುವೆವು ಆಗ
ಗಪ್-ಚುಪ್.
ನಿಮ್ಮನ್ನು ನೋಡಿದರೆ
ಗಡಗಡನೆ ನಡುಗುವೆವು
ಒಂದೊಂದು ಬಾರಿ ನಿಮ್ಮೊಂದಿಗೆ
ಲೊಡಲೊಡನೆ ಮಾತಾಡುವೆವು.
ಮಕ್ಕಳಂತೆ
ಮಾತಾಡುವ ಮಾತುಗಾರ
ಮಾತೆಲ್ಲೇ ಗಮನ
ಹಿಡಿದಿಡುವ ಜಾದುಗಾರ.
ಉತ್ತರ ಪತ್ತ್ರಿಕೆ ಹಿಡಿದು
ನೀವಾಗುವಿರಿ ಪೊಲೀಸರಂತೆ
ಸಿಕ್ಕಿ ಬೀಳುವೆವು
ನಾವಾಗ ಕಳ್ಳರಂತೆ.
ಹರಿಸಿರುವಿರಿ ಅನುಭವಮಂಟಪದಿ
ಕನ್ನಡದ ಕಂಪು
ಹರಡುವಿರಿ ಮಕ್ಕಳ ಮನದಿ
ಮಾತಿನ ಇಂಪು.
ನಮಗಾಗಿ ಮಾಡುವಿರಿ
ರಂಜನೆ
ನಿಮಗಾಗಿ ನಮ್ಮಯ
ವಂದನೆ.
ಜಾಹ್ನವಿ ಎಂ ಬಿ
7ನೇ ತರಗತಿ ಐ ವಿಭಾಗ
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.