ಸಮಾಜ ಸೇವೆಯ ಈಶ ಸೇವೆ ಎಂದು ಮುಂದಾದ ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮಸಂಸ್ಥೆ.

Spread the love

ಸಮಾಜ ಸೇವೆಯ ಈಶ ಸೇವೆ ಎಂದು ಮುಂದಾದ ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮಸಂಸ್ಥೆ.

ಇಡಿ ದೇಶವೇ ಕೋರೊನ ಎಂಬ ಮಹಾಮಾರಿ ಯಿಂದ ಸಂಕಷ್ಟಕ್ಕೆ ಹಿಡಾಗಿರುವ ಸಂಧರ್ಭದಲ್ಲಿ ಬಡಸೊಂಕಿತರಿಗೆ ಕಷ್ಟ ಕಾಲದಲ್ಲಿ  ಅದೆಷ್ಟು ಜನರಿಗೆ ಆರ್ಥಿಕ ಸಹಾಯ ನೀಡಿ,  ಆ ಬಡ ಸೊಂಕಿತರ ಪಾಲಿಗೆ ಮುಂದಾದ ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮಸಂಸ್ಥೆ. ಈ ಕೋರೋನಾ ಮಹಾಮಾರಿ ರೋಗವು  ಅತ್ಯಂತ ಅತೀ ವೇಗದಲ್ಲಿ ಹರಡುವ ದರಿಂದ  ಜನರು ಹೆಚ್ಚೆತ್ತು ಕೊಂಡು  ಪ್ರತಿಯೊಬ್ಬರು ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿ ಕೊಳ್ಳಬೇಕು  ಯಾರು ಈ ರೋಗ ಬಂದಿದೆ ಎಂದು ಆತಂಕ ಪಟ್ಟು ದೃತಿಗೆಡದೆ ಧೈರ್ಯದಿಂದ ಆರೋಗ್ಯ ಇಲಾಖೆಯ ನಿಯದಂತೆ ಎಲ್ಲರೂ ಪಾಲನೆ ಮಾಡಬೇಕು. ಮೊದಲು ಜೀವ ತದನಂತರ ಜೀವನ ಅನ್ನುವುದು ಎಲ್ಲರೂ ಅರಿತು ಕೊಳ್ಳಬೇಕು. 25/05/2021 ರ ಮಂಗಳವಾರ ಇವತ್ತು ಬೆಳಿಗ್ಗೆ ದಾವಣಗೆರೆ ಜಿಲ್ಲೆಯ ಹೊನ್ನಳ್ಳಿ ತಾಲ್ಲೂಕಿನ H.ಕಡದಕಟ್ಟೆ ಎಂಬ ಹಳ್ಳಿಯಲ್ಲಿ ವಾಸವಿರುವ ಅಂಧ ವಿಶೇಷಚೇತನರ ಕುಟುಂಬವೊಂದು ಈ ಲಾಕ್ಡೌನ್ ವಿದಿಸಿದ್ದ ಪರಿಣಾಮದಿಂದ ಜೀವನವನ್ನು ನಡೆಸುವುದಕ್ಕೆ ಆಗದ ಪರಿಸ್ಥಿತಿಯಲ್ಲಿ ಇರುವುದು ನಮ್ಮ ಗಮನಕ್ಕೆ ಕಂಡು ಬಂದಾಗ ನಮ್ಮ ಸಕ್ಷಮ ಸಂಸ್ಥೆ ಶಿವಮೊಗ್ಗ ದ ವತಿಯಿಂದ ಆ ವಿಶೇಷಚೇತನರಿಗೆ ಆಹಾರ ಪದಾರ್ಥಗಳ ಸಾಮಾಗ್ರಿಗಳನ್ನು ಮತ್ತು ವಿಶೇಷಚೇತನರ ಮಾಸಾಶನದ ವೈದ್ಯಕೀಯ ಪ್ರಮಾಣ ಪತ್ರ (UDID) ಕಾರ್ಡ್ ನ್ನೂ ಮಾಡಿಸಿಕೊಡಲಾಯಿತು. ಒಟ್ಟಿನಲ್ಲಿ ನಿಜಕ್ಕೂ ನಿಜವಾದ ಬಡ ಹಾಗೂ ನಿಗರ್ತಿಕ ಕುಟುಂಬಗಳು ಈ ಕೋವಿಡ್ 19 ರ ಲಾಕ್ ಡೌನ್ ಒಡೆತಕ್ಕೆ ನಲುಗಿದ್ದು, ಈ ಕುಟುಂಬಗಳಿಗೆ ಒಣಗಿದ ಸಸ್ಸಿಗಳಿಗೆ ನೀರು ಬಿಟ್ಟಂತ್ತಾಗಿದೆ ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮಸಂಸ್ಥೆಯು ಹಿಗೇ ಬಡವರ ಸೇವೆಗಾಗಿ ಸದಾ ಮುಂದಾಗಲಿ, ಈ ಸಂಸ್ಥೆಗೆ ಇನ್ನೂ ಹೆಚ್ಛಿನ ಶಕ್ತಿ ನೀಡಲೆಂದು ಆರೈಸುವೆವು.

  ವರದಿ – ಮಂಜುನಾಥ.ಎಸ್.ಕೆ.

2 thoughts on “ಸಮಾಜ ಸೇವೆಯ ಈಶ ಸೇವೆ ಎಂದು ಮುಂದಾದ ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮಸಂಸ್ಥೆ.

  1. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರತೆ ಶಿವು 😊🙏 ನೀವು ನಿಜವಾಗಿಯೂ ಮಾದರಿ. ಈ ರಾಜಕೀಯ ಪಕ್ಷದವರಿಗೆ.ನನ್ನ ತಮ್ಮ ಅಂತ ಹೇಳಿಕೊಳ್ಳೋಕೆ ಗೌರವ ಕೂಡ. 😊🙏🇮🇳💛❤️

Leave a Reply

Your email address will not be published. Required fields are marked *