ರೈತರ ವಿರುದ್ಧ ಸರ್ಕಾರದ ನಡೆ ಜೈ ಕ ರ ಸೇನೆ ರಾಜ್ಯಧ್ಯಕ್ಷ ಚನ್ನಬಸವರಾಜ ಕಳ್ಳಿಮರದ ಆಗ್ರಹ.

Spread the love

ರೈತರ ವಿರುದ್ಧ ಸರ್ಕಾರದ ನಡೆ ಜೈ ಸೇನೆ ರಾಜ್ಯಧ್ಯಕ್ಷ ಚನ್ನಬಸವರಾಜ ಕಳ್ಳಿಮರದ ಆಗ್ರಹ.

ಇಡಿ ರಾಜ್ಯದ ತುಂಬೆಲ್ಲಾ ಕರೋನ ಮಹಾಮಾರಿ ಬೆಂಬಿಡದೆ ಕಾಡುತ್ತಿರುವದು ರಾಜ್ಯಕ್ಕೆ ನುಂಗಲಾರದ ಬಿಸಿ ತುಪ್ಪ ಆಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕರೋನ ರೋಗ ಒಬ್ಬರಿಂದ ಒಬ್ಬರಿಗೆ ಹರಡುಬಾರದು ಈ ರೋಗವು ಅತ್ಯಂತ ಅಪಾಯಕಾರಿ ಆಗಿದ್ದು ಈ ರೋಗದ ವಿರುದ್ಧ ಹೋರಾಡಬೇಕಾದರೆ ಸಾಮಾಜಿಕ ಅಂತರ ಹಾಗೂ ಪ್ರತಿಯೊಬ್ಬರು ಮಾಸ್ಕ ಧರಿಸಲೆಬೇಕು. ಹಾಗೆ ಸೊಂಕಿತರ ಸಂಖ್ಯೆ ಕಡಿಮೆ ಆಗಬೇಕಾದರೆ ತಜ್ಞರು ಹೆಳಿದ ಹಾಗೆ ಲಾಕಡೌನ್ ಮೋರೆ ಹೋಗಿದ್ದಾರೆ. ಜನರ ಜೀವಗೊಸ್ಕರ ಸರ್ಕಾರ ತೆಗೆದುಕೊಂಡಿರುವ ಈ ನಿಲುವಿನ ಬಗ್ಗೆ ಎರಡು ಮಾತಿಲ್ಲ ಲಾಕಡೌನ್ ನಿಯಮದಲ್ಲಿ ಸರ್ಕಾರ ನಿಡಿರುವ ಗೈಡಲೈನ್ ನಿಯಮದಂತೆ. ವಿಶೇಷವಾಗಿ ರೈತರಿಗೆ  ಗೊಬ್ಬರ ಬೀಜ ತರಲು ಅವಕಾಶ ಕಲ್ಪಿಸಿ ಕೊಟ್ಟಿದೆ ಆದರೂ ಈ ಪೊಲೀಸ್ ಇಲಾಖೆ ಅತಿ ಹೆಚ್ಚು ರೈತರ ಗಾಡಿ ಗಳನ್ನು ಸೀಜ್ ಮಾಡಿದ್ದು ಹಾಗೆ ರೈತರ ಮೇಲೆ ಕಾನೂನಿನ ಉಲ್ಲಂಘನೆ ಕೆಸ್ ದಾಖಲಾಗಿರುವ ಘಟನೆಗಳು ಸಹ ಬೆಳಕಿಗೆ ಬಂದಿದ್ದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೈತರ ಮೇಲೆ ಪೋಲಿಸ್ ಇಲಾಖೆ ಅತಿಹೆಚ್ಚು ನಿಯಮ ಉಲ್ಲಂಘನೆ ಅಂತ ಕಂಪ್ಲೇಂಟ್ ದಾಖಲಿಸಿಕೊಂಡು ರೈತರ ವಾಹನ ಜಪ್ತಿ ಮಾಡಿಕೊಂಡಿರುವ ಹಾಗೂ ರೈತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆಗಳು ಬೆಳಕಿಗೆ ಬಂದಿದ್ದು, ಇದಕ್ಕೆಲ್ಲಾ ಸರ್ಕಾರ ಸರಿಯಾದ ಕ್ರಮ ಕೈಗೊಂಡು ರೈತರಿಗೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆ ಮಾಡಲು ಹಾಗೂ ರೈತರಿಗೆ ಬೇಕಾಗುವ ಸಾಮಾಗ್ರಿಗಳು, ರಾಸಾಯನಿಕ ಗೊಬ್ಬರಗಳನ್ನು. ಬಿತ್ತುವ ಬೀಜಗಳನ್ನು ಖರೀದಿಸಲು ಮುಕ್ತ ಅವಕಾಶ ನೀಡಬೇಕೆಂದು ಹಾಗೂ ರೈತರ ವಾಹನಗಳನ್ನು ಜಪ್ತಿ ಮಾಡಬಾರದೆಂದು ಪೋಲಿಸ್ ಇಲಾಖೆಗೆ ಆದೇಶಿಸಬೇಕೆಂದು ಜೈ ಕರುನಾಡು ರಾಜ್ಯಧ್ಯಕ್ಷರಾದ ಚನ್ನಬಸವರಾಜ ಕಳ್ಳಿಮರದ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *