ಯಾಧವ ಸಮಾಜದವತಿಯಿಂದ ಹಾಲುಗಂಬ ಏರುವ ಕಾರ್ಯಕ್ರವು ಅದ್ದೂರಿಯಾಗಿ ಜರುಗಿತು.
ಕೊಪ್ಪಳ ಜಿಲ್ಲೆಯಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿಂದು ದಸರಾ ಹಬ್ಬದ ನಿಮಿತ್ಯ ಪ್ರತಿ ವರ್ಷದಂತೆ ನಡೆಯುವ ಹಾಲುಗಂಬ ಏರುವ ಕಾರ್ಯಕ್ರಮವು ಯಾದವ್ ಸಮಾಜದವತಿಯಿಂದ ಈ ವರ್ಷವು ಸಹ ಅದ್ದೂರಿಯಾಗಿ ಜರುಗಿತು. ತಾವರಗೇರಾ ಪಟ್ಟಣದ ವ್ಯಾಪ್ತಿಗೆ ಬರುವ ಯಾದವ್ ಸಮಾಜದ ಯುವಕರು ಪ್ರತಿ ಹಳ್ಳಿ ಹಳ್ಳಿಯಿಂದ ಯುವಕರು ಈ ಹಾಲುಗಂಬ ಏರುವ ಕಾರ್ಯಕ್ರಮದಲ್ಲಿ ಪಾಲುಗೊಂಡು ಸತತ ಎರಡು/ಮೂರು ಗಂಟೆಗಳ ಕಾಲ ಹಾಲುಗಂಬ ಏರುವ ಸ್ಪರ್ಧೆಯಲ್ಲಿ ನಿರತರಾದರು. ಈ ಹಾಲುಗಂಬ ಏರುವ ಸ್ಪರ್ದೇ ಕಾರ್ಯಕ್ರಮ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸಾಗರವೆ ಹರಿದು ಬಂದಿತ್ತು. ಕೆಲವು ಯುವಕರು ಹಾಲುಗಂಬ ಏರುವಾಗ ಹರಸಹಾಸ ಪಟ್ಟರು. ಕೊನೇ/ಕೋನೆಯವರೆಗೂ ತಲುಪಿ, ನಿರಾಶೆಯಿಂದ ಜಾರಿ (ಹಿಂದಕ್ಕೆ) ಬಂದರು, ತದ ನಂತರ ಹರ ಸಹಸದಿಂದ ಕೋನೆಗೆ ಯಮನೂರಪ್ಪ ತಂ// ಹಿರೇಮುದಕಪ್ಪ ಪರಶುರಾಮ ಕೇರೆ ಊರಿನವರು ಹಾಲುಗಂಬ ಏರುವ ಸ್ಪರ್ಧೆಯಲ್ಲಿ ವಿಜೇತರಾದರು. ತಾವರಗೇರಾ ಪಟ್ಟಣದ ಊರಿನ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಹಳ್ಳಿ ಜನರ ಸೋಗಡು ಕಣ್ಣುತುಂಬಿಕೊಂಡಿತ್ತು. ಈ ಹಾಲುಗಂಬ ಏರುವ ಸ್ಪರ್ದೇಗೆ ವಿಜೇತರಾದವರಿಗೆ 11 ತೊಲೆಯ ಬೆಳ್ಳಿ ಕಡಗವನ್ನು ಬಹುಮಾನವಾಗಿ ಸ್ವೀಕರಿಸಿದರು. ಜನಪ್ರಿಯ ಶಾಸಕರಾದ ದೊಡ್ಡನಗೌಡ ಎಲ್ ಪಾಟೀಲ್ ಇವರು ಕೋಡುಗೆಯಾಗಿ ನೀಡಿದರು. ಒಟ್ಟಿನಲ್ಲಿ ಈ ಹಾಲುಗಂಬ ಏರುವ ಸ್ಪರ್ದೆಯು ನೋಡುಗರ ಮನದಲ್ಲಿ ಉತ್ಸಹವು ತುಂಬಿತ್ತು. ಪ್ರತಿ ವರ್ಷದಂತೆ ಈ ವರ್ಷವು ಸಹ ಸಂತೋಷದಿಂದ ಈ ಕಾರ್ಯಾಕ್ರಮದ ನಿಮಿತ್ಯ ತಾಯಿ ಚಾಮುಂಡೇಶ್ವರಿ ದೇವಿಯನ್ನು ಆರ್ಶಿವಾದದಿಂದ ಈ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು.
ವರದಿ-ಉಪಳೇಶ ವಿ.ನಾರಿನಾಳ.