“ಮಹಾದಾನ ಮತದಾನ”

Spread the love

“ಮಹಾದಾನ ಮತದಾನ”

ಮತದಾನ ಮಾಡುವುದು ನಮ್ಮ ನಾಗರಿಕ ಜವಾಬ್ದಾರಿ. ಅತ್ಯಮೂಲ್ಯವಾದ ಬಹುದೊಡ್ಡ ಜವಾಬ್ದಾರಿಯ ಹಕ್ಕು ಇದಾಗಿದೆ. ಸಂವಿಧಾನ ಬದ್ಧವಾಗಿ ಮಹದಾನ ಮತದಾನ ಮಾಡುವ ಹಕ್ಕನ್ನು ಪಡೆದಿರುವುದು ನಮ್ಮ ಅದೃಷ್ಟ ಜವಾಬ್ದಾರಿ. ಆದರೆ ಇದನ್ನು ಲಘುವಾಗಿ ಪರಿಗಣಿಸುತ್ತಿರುವುದು ಬೇಜವಾಬ್ದಾರಿತನವನ್ನು ಸೂಚಿಸುತ್ತದೆ.ದೇಶದ ಪ್ರತಿಯೊಬ್ಬ ಪ್ರಜೆಯ ಪ್ರಜೆಯೂ ಮತದಾನದ ಮಹತ್ವದ ಅರಿವು ಹೊಂದಬೇಕು. ಯೋಗ್ಯ ಅಭ್ಯರ್ಥಿಗೆ ಮತವನ್ನು ಚಲಾಯಿಸುವುದರ ಮೂಲಕ ಭಾರತದ ಪ್ರಜಾಪ್ರಭುತ್ವದ ರಕ್ಷಣೆ, ಶುಭದ್ರ ಹಾಗೂ ಅಭಿವೃದ್ಧಿಯ ಪತದೆಡೆಗೆ ಸರ್ಕಾರ ರಚನೆಗೆ ಮುಂದಾಗುವಂತೆ ಮಾಡುವ ಶಕ್ತಿ ನಮ್ಮಲ್ಲಿದೆ. ಆಗಾದರೆ ಬನ್ನಿ ಮಹದಾನದ ಮತದಾನವನ್ನು ನಾಡಿನ ಹಬ್ಬವನ್ನಾಗಿ ಆಚರಿಸೋಣ. ಈ ಸಡಗರವನ್ನು ಮತದಾನದ ಜಾಗೃತಿಯ ಮೂಲಕ ನಾಡಿನ ಜನತೆಗೆ ತಪ್ಪದೆ ಮತಗಟ್ಟೆಗೆ ಹೋಗಿ ಮತವನ್ನು ಹಾಕುವಂತೆ ಪ್ರೆರೇಪಿಸುವುದರ ಜೋತೆಯಲ್ಲಿ ನಾವು ಕೂಡ ಮತದಾನದ ಸ್ವಾಭಿಮಾನದ ಹಕ್ಕನ್ನು ಚಲಾಯಿಸೋಣ. ಬನ್ನಿ ಮಹದಾನ ಮತದಾನವನ್ನು ಮಾಡೋಣ.

Leave a Reply

Your email address will not be published. Required fields are marked *