ತುಮಕೂರು: ಸಿದ್ಧಗಂಗಾ ಶ್ರೀಗಳ ಜಯಂತಿ ಯಲ್ಲಿ ಶಾಸಕರು ಭಾಗಿ.

Spread the love

ತುಮಕೂರು: ನಾಡಿನ ನಡೆದಾಡುವ ದೇವರು, ಹಾಗೂ ಕಾಯಕ ಯೋಗಿ. ಪದ್ಮವಿಭೂಷಣ ಕರ್ನಾಟಕ ರತ್ನ ಪ್ರಶಸ್ಥಿ ಪುರಸ್ಕೃತರಾದ, ಹಾಗೂ ತ್ರಿವಿಧ ದಾಸೋಹಿಗಳಾದ ಲಿಂಗೈಕ್ಯ ಶ್ರೀ ಸಿದ್ಧಗಂಗಾ ಶಿವಕುಮಾರ ಶ್ರೀಗಳ 117ನೇ ಜಯಂತಿ. ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ, ಕೂಡ್ಲಿಗಿ ಶಾಸಕರಾದ ಡಾ”NTಶ್ರೀನಿವಾಸರವರು ಪಾಲ್ಗೊಂಡಿದ್ದರು. ಅವರು ಪ್ರಾರಂಭದಲ್ಲಿ ಮಠದಲ್ಲಿನ ಭವ್ಯ ದೇವಸ್ಥಾನಕ್ಕೆ ತೆರಳಿ, ದೇವರ ದರ್ಶನ ಪಡೆದು ತದನಂತರ. ಹಾಲಿ ಇರುವ ಮಠದ ಶ್ರೀಗಳನ್ನು ಭೇಟಿ ಮಾಡಿ, ಅವರಿಂದ ಆಶೀರ್ವಾದ ಪಡೆದರು. ಅವರು ಸ್ವಾಮೀಜಿಗಳೊಂದಿಗೆ ಸಮಾಲೋಚನೆ ನಡೆಸಿದರು, ಈ ಸಂದರ್ಭದಲ್ಲಿ ಶಾಸಕರು ತಮಗೂ ಮಠಕ್ಕೂ ಇರುವ, ಗುರು-ಶಿಷ್ಯರಂತಹ ಪೂಜ್ಯ ಭಾವನೆ. ಹಾಗೂ ಅವಿನಾಭಾವ ಸಂಬಂಧವನ್ನು ವಿವರಿಸಿದರು. ಲಿಂಗೈ ಶ್ರೀಶಿವಕುಮಾರ ಸ್ವಾಮೀಜಿಯವರು, ತಾವು ನಿರ್ಮಿಸಿರುವ ಅಕ್ಷರ ಐ ಪೌಂಡೇಷನ್, ಹಾಗೂ ಭವ್ಯವಾದ ಸುಸಜ್ಜಿತ ಕಣ್ಣಿನ ಆಸ್ಪತ್ರೆ ಉದ್ಘಾಟಿದಿರುವುದನ್ನು ಶಾಸಕರು ಸ್ಮರಿಸಿ ಭಾವುಕರಾದರು. ನಂತರ ಶಾಸಕರು ಶ್ರಿಶಿವಕುಮಾರ ಸ್ವಾಮೀಜಿರವರ, ಪವಿತ್ರ ಕರ್ಮಭೂಮಿ ಐಕ್ಯ ಸ್ಥಳಕ್ಕೆ ತೆರಳಿ. ಅಲ್ಲಿ ಕೆಲ ಹೊತ್ತು ಧ್ಯಾನದಲ್ಲಿ ತಲ್ಲೀನರಾದರು, ನಂತರ ಗುರು ವಂದನಾ ಮಹೋತ್ಸವದಲ್ಲಿ ಪಾಲ್ಗೊಂಡರು.

ವಿಶೇಷ ವರದಿಗಾರರು ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.

Leave a Reply

Your email address will not be published. Required fields are marked *