ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬೆಂಗಳೂರಿನ ಆಟೋ ರಾಜ ಅನಾಥಾಶ್ರಮಕ್ಕೆ ಸೇರಿಸಿ ಜನರ ಪ್ರಸಂಸೆಗೆ ಪಾತ್ರರಾಗಿದ್ದಾರೆ.

Spread the love

ನಗರೂರು ಗ್ರಾಮದಲ್ಲಿ ಜನರಿಗೆ ತೊಂದರೆ ಕೊಡುತ್ತಿದ್ದ ಮಾನಸಿಕ ಅಸ್ವಸ್ಥತೆ ಮಹಿಳೆಯನ್ನು ಬೇಳೂರು ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬೆಂಗಳೂರಿನ ಆಟೋ ರಾಜ ಅನಾಥಾಶ್ರಮಕ್ಕೆ ಸೇರಿಸಿ ಜನರ ಪ್ರಸಂಸೆಗೆ ಪಾತ್ರರಾಗಿದ್ದೇವೆ ಈ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸೇರಿಸಿಕೊಂಡ ಆಟೋ ರಾಜ ಅನಾಥಾಶ್ರಮಕ್ಕೆ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇವೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬೇಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ನಗರೂರಿನಲ್ಲಿ ಮಾನಸಿಕ ಅಸ್ವಸ್ತೆ ಮಹಿಳೆಯೊಬ್ಬರು ರಸ್ತೆಯಲ್ಲಿ ವಿವಸ್ತ್ರವಾಗಿ ಸುತ್ತುವುದು ಹಾಗೂ ವಾಹನಗಳಿಗೆ ಹಾಗೂ ತಿರುಗಾಡುವ ಜನರಿಗೆ ಮತ್ತು ಶಾಲೆಯ ಮಕ್ಕಳಿಗೆ ಕಲ್ಲು ತೆಗೆದುಕೊಂಡು ಒಡೆಯುವುದು ಇವೆಲ್ಲವನ್ನು ಮಾಡುತ್ತಿದ್ದರು ಇದನ್ನು ಗಮನಿಸಿದ ನಿವೃತ್ತ ಪೊಲೀಸ್ ಸಿಬ್ಬಂದಿ ಅಂತೋನಿ ಡಿಸೋಜ ರವರು ತಕ್ಷಣ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರಿಗೆ ಫೋನ್ ನಲ್ಲಿ ಮಾಹಿತಿ ತಿಳಿಸಿದರು ಆಗ ನಾವುಗಳು ಅವರಿಗೆ ತಿಳಿಸಿದೇನೆಂದರೆ ನೀವು  ಬೇಳೂರು ಗ್ರಾಮ ಪಂಚಾಯಿತಿ ಲಿಖಿತವಾಗಿ ಮನವಿ ಕೊಡಿ ಪಂಚಾಯಿತಿಯಿಂದ ಅನಾಥಾಶ್ರಮ ಲೆಟರ್ ಕೊಟ್ಟರೆ ನಾವು ಕರೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದ ಮೇರೆಗೆ  ನಿವೃತ್ತ ಪೊಲೀಸ್ ಸಿಬ್ಬಂದಿ ಅಂತೋನಿ ಡಿಸೋಜರವರು ಬೇಳೂರು ಗ್ರಾಮ ಪಂಚಾಯಿತಿ ಮನವಿ ಮಾಡಿರುತ್ತಾರೆ ಮನವಿಗೆ ತಕ್ಷಣವೇ ಸ್ಪಂದಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಉಮೇಶ್ ರವರು ತಕ್ಷಣ  ಸ್ಪಂದಿಸಿ ಮಹಿಳೆ ಇರುವ ಜಾಗ ಹಾಗೂ ಮಹಿಳೆಯನ್ನು ನೋಡಿ ಕರ್ನಾಟಕ ರಕ್ಷಣಾ ವೇದಿಕೆಗೆ ಫೋನ್  ಮಾಡಿದರು. ಆಗ  ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಗೆ ಅನಾಥಾಶ್ರಮಕ್ಕೆ ಒಂದು ಲೆಟರ್ ಕೊಟ್ಟರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕರೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದೆ ಹಾಗೆಯೇ ಇಂದು ಲೆಟರನ್ನು ಕೊಟ್ಟಿರುತ್ತಾರೆ ಹಾಗೂ ಈ ಮಹಿಳೆಯನ್ನು ಕರೆದುಕೊಂಡು ಹೋಗಲು ಸೋಮವಾರಪೇಟೆ ಉಪ ನಿರೀಕ್ಷಕರಾದ ಪ್ರಲಾದ್ ರವರು ಸಹ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ತಿಳಿಸಿದರು ಏಕೆಂದರೆ ಈ ಮಾನಸಿಕ ಮಹಿಳೆ ರಸ್ತೆಯಲ್ಲಿ ತಿರುಗಾಡುವವರಿಗೆ ಹಾಗೂ ಬೆಳಗಿನ ಜಾವ ಜಾಗಿಂಗ್ ಹೋಗೋವರಿಗೆ ಹಾಗೂ ಶಾಲಾ ಮಕ್ಕಳಿಗೆ ತೊಂದರೆ ಆಗುತ್ತಿರ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ಜನರಿಂದ ದೂರು ಬಂದಿದ್ದ ಕಾರಣ ಕರ್ನಾಟಕ ರಕ್ಷಣಾ ವೇದಿಕೆಗೆ ಉಪನಿರೀಕ್ಷಕರು ಈ ಮಹಿಳೆಯನ್ನು ಅನಾಥಾಶ್ರಮಕ್ಕೆ ಸಾಗಿಸಲು ಕರ್ನಾಟಕ ರಕ್ಷಣಾ ವೇದಿಕೆಗೆ ಮನವಿ ಮಾಡಿದ್ದರು ಹಾಗೂ ಜಾಗಿಂಗ್ ಹೋಗುತ್ತಿರುವ ದರ್ಶನ್ ರವರು ಸಹ ಕರ್ನಾಟಕ ರಕ್ಷಣಾ ವೇದಿಕೆ ಫೋನ್ ಮುಖಾಂತರ ಈ ಮಹಿಳೆಯ ಬಗ್ಗೆ ತಿಳಿಸಿದರು. ಇದೆಲ್ಲದರ ನಂತರ ಬೇಳೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಉಮೇಶ್ ರವರು ತುಂಬಾ ಕಾಳಜಿಯನ್ನು ತೆಗೆದುಕೊಂಡು ಈ ಮಹಿಳೆಯರನ್ನು ಅನಾಥಾಶ್ರಮಕ್ಕೆ ಸೇರಿಸಲು ಲೆಟರ್  ಸಿದ್ಧಪಡಿಸಿ ಸೋಮವಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪೊಲೀಸ್ ಉಪ ನಿರೀಕ್ಷಕರಿಂದ ಲೆಟರ್ ಸಹಿ ಪಡೆದುಕೊಂಡು ಕರ್ನಾಟಕ ರಕ್ಷಣಾ ವೇದಿಕೆಗೆ ಲೆಟರ್ ಅನ್ನು ಕೊಟ್ಟಿರುತ್ತಾರೆ ಅದೇ ಪ್ರಕಾರ ಇಂದು ಬೆಳಗ್ಗೆ 6:00 ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರದ ಫ್ರಾನ್ಸಿಸ್ ಡಿಸೋಜರವರು  ಹಾಗೂ ನಿವೃತ್ತ ಪೊಲೀಸ್  ಸಿಬ್ಬಂದಿ ಅಂತೋನಿ ಡಿಸೋಜರವರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಉಮೇಶ್ ರವರು ಹಾಗೂ ಸೋಮವಾರಪೇಟೆ ಪೊಲೀಸ್ ಉಪನಿರೀಕ್ಷಕರಾದ ಪ್ರಲಾದ್ ರವರು ಹಾಗೂ ದರ್ಶನ್ ರವರು ಹಾಗೂ ಸಾಗರ್ ಹಾಗೂ ರಮೇಶ್ ಇವರೆಲ್ಲರ ಒಳಗೊಂಡಂತೆ ಮಾನಸಿ ಅಸ್ವಸ್ಥ ಮಹಿಳೆ ಇರುವ  ಜಾಗಕ್ಕೆ ಹೋಗಿ ಮಹಿಳೆಯನ್ನು ಮಾತನಾಡಿಸಿ ಆ ಮಹಿಳೆಯನ್ನು ಕರೆದುಕೊಂಡು ಬಂದು ಕಾರಿನಲ್ಲಿ ಕುಳಿರಿಸಿ ಆ ಮಹಿಳೆಗೆ ಕೈಗೆ ಗಾಯ ಆಗಿ ರಕ್ತ ಸುರಿಯುತ್ತಿತ್ತು ಆ ಗಾಯಕ್ಕೆ ಪ್ರಥಮ ಚಿಕಿತ್ಸೆಗಾಗಿ ಪೊಲೀಸ್ ವಾಹನದಿಂದ ಪೊಲೀಸ್ ಸಿಬ್ಬಂದಿಗಿಯವರು ಚಿಕಿತ್ಸೆ ಪೆಟ್ಟಿಗೆಯನ್ನು ತಂದು ನಿವೃತ್ತ ಪೊಲೀಸ್ ಸಿಬ್ಬಂದಿ ಅಂತೋನಿ ಡಿಸೋಜರವರು ಚಿಕಿತ್ಸೆಯನ್ನು ನೀಡಿದರು ಮತ್ತು ಈ ಮಹಿಳೆಯನ್ನು ಬೆಂಗಳೂರಿ ಆಟೋ ರಾಜ ಅನಾಥಾಶ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ರವರು ಖುದ್ದಾಗಿ ಹೋಗಿ ಕರೆದುಕೊಂಡು ಬಿಟ್ಟು ಬಂದಿರುತ್ತೇವೆ ಇದೇ ಸಂದರ್ಭದಲ್ಲಿ ಬೆಂಗಳೂರಿನ ಅನಾಥಾಶ್ರಮಕ್ಕೆ ಸೇರಿಸಲು ಕಾರಿನ ವ್ಯವಸ್ಥೆಯನ್ನು ಬೇಳೂರು  ಗ್ರಾಮ ಪಂಚಾಯತಿ ಅಧಿಕಾರಿಗಳ ಉಮೇಶ್ ರವರು ಮಾಡಿಕೊಟ್ಟಿದ್ದರು ಹಾಗೆಯೇ ಆಟೋ ರಾಜ ಅನಾಥಾಶ್ರಮಕ್ಕೆ ಅಲ್ಲಿರುವ ಬಡ ರೋಗಿಗಳಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯದ ಉಮೇಶ್ ರವರು ಬ್ರೆಡ್ ಮತ್ತು ಬಿಸ್ಕೆಟ್ ಗಳನ್ನು ಕೊಟ್ಟಿದ್ದರು ಕರವೇಗೆ ಸಂಪೂರ್ಣ ಸಹಕಾರ ನೀಡಿದ್ದಕ್ಕಾಗಿ  ಗ್ರಾಮ ಪಂಚಾಯತಿ ಅಭಿವೃದ್ಧಿ ಉಮೇಶ್ ರವರಿಗೆ  ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ  ಹಾಗೆಯೇ ನಮಗೆ ಸಂಪೂರ್ಣ ಸಹಕಾರ ನೀಡಿದ ನಿವೃತ್ತ ಪೊಲೀಸ್ ಸಿಬ್ಬಂದಿ ಅಂತೋನಿ ಡಿಸೋಜರವರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೂ ನಮಗೆ ಸಹಕಾರ ನೀಡಿದ ಸೋಮವಾರಪೇಟೆ ಉಪನಿರೀಕ್ಷಕರಾದ ಪ್ರಹ್ಲಾದ್ ರವರಿಗೂ  ಹಾಗೂ ಅವರ ಸಿಬ್ಬಂದಿಗಳಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೂ ದರ್ಶನ್ ರವರಿಗೂ ಹಾಗೂ ಸಾಗರ್ ರವರಿಗೂ ಹಾಗೂ ರಮೇಶ್ ಹಾಗೂ  ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಹಾಗೂ ಬೇಳೂರು  ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ನಿಮ್ಮೆಲ್ಲರ ಸಹಕಾರದಿಂದ ಈ ಮಹಿಳೆಯನ್ನು ಕರೆದುಕೊಂಡು ಹೋಗಿರುತ್ತೇವೆ ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೆಯೇ ಈ ಮಾನಸಿಕ ಅಸ್ವಸ್ಥ ಮಹಿಳೆ ದಾರಿಯುವುದಕ್ಕೂ ತುಂಬ ತೊಂದರೆ  ಕೊಡುತ್ತಿದ್ದರು ತುಂಬಾ ಕಷ್ಟದಲ್ಲಿ ಕರೆದುಕೊಂಡು ಹೋಗಿರುತ್ತೇವೆ ಹಾಗೂ ನಮಗೆಲ್ಲರಿಗೂ ದಾರಿ ಉದ್ದಕ್ಕೂ ಹೊಡೆಯಲು ಬರುತ್ತಿದ್ದರು ನಾವು ಈ ಮಹಿಳೆಯನ್ನು ಸಮಾಧಾನಪಡಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿ ಆಟೋ ರಾಜ ಅನಾಥಾಶ್ರಮಕ್ಕೆ ಬಿಟ್ಟು ಬರಲಾಯಿತು ಹಾಗೆಯೇ ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯದ ಉಮೇಶ್ ರವರು ಹಾಗೂ ನಿವೃತ್ತ ಪೊಲೀಸ್ ಸಿಬ್ಬಂದಿ ಅಂತೋನಿ ಡಿಸೋಜರವರು ಹಾಗೂ ಸೋಮವಾರಪೇಟೆ ಉಪ ನಿರೀಕ್ಷಕರಾದ ಪ್ರಲಾದ್ ರವರು ಹಾಗೂ ಅವರ ಸಿಬ್ಬಂದಿಗಳು ಹಾಗೂ ದರ್ಶನ್ ಹಾಗೂ ಸಾಗರ್ ಹಾಗೂ ರವಿ ಹಾಗೂ ಕಾರು ಚಾಲಕರದ ಮಧು ರವರು ಉಪಸ್ಥಿತರಿದ್ದರು ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಕರವೇ ಅಧ್ಯಕ್ಷರು ಪ್ರಾಸಿಸ್ ಡಿಸೋಜ ಫೋನ್ ನಂಬರ್ 9686095831 ಮತ್ತು 9449255831.

ವರದಿ-ಉಪಳೇಶ ವಿ.ನಾರಿನಾಳ

Leave a Reply

Your email address will not be published. Required fields are marked *