ಕೂಡ್ಲಿಗಿ:ಪತ್ರಕರ್ತರ ಧ್ವನಿ ಸಂಘಟನೆಯಿಂದ ನೀರಿನ ಅರವಟಿಗೆ, ಶ್ಲಾಘನೀಯ- ಮುಖ್ಯಾಧಿಕಾರಿ ಫಿರೋಜ್ ಖಾನ್.

Spread the love

ಕೂಡ್ಲಿಗಿ:ಪತ್ರಕರ್ತರ ಧ್ವನಿ ಸಂಘಟನೆಯಿಂದ ನೀರಿನ ಅರವಟಿಗೆ, ಶ್ಲಾಘನೀಯ- ಮುಖ್ಯಾಧಿಕಾರಿ ಫಿರೋಜ್ ಖಾನ್.

ವಿಜಯನಗರ ಜಿಲ್ಲೆ ಕೂಡ್ಲಿಗಿ: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘದಿಂದ, ಪಟ್ಟಣದ ಅಂಬಾಲಿ ಶುದ್ಧ ಕುಡಿಯೋ ನೀರಿನ ಘಟಕ ಸಹಯೋಗದೊಂದಿಗೆ. ಪಟ್ಟಣದ ಮದಕರಿ ವೃತ್ತ ಹಾಗೂ ಬೆಂಗಳೂರು ರಸ್ಥೆಯ ಪುನೀತ್ ಪುಥ್ಥಳಿ ಬಳಿ, ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರಿನ ಅರವಟಿಗೆ ಸೇವ‍ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. ಶುದ್ಧ ಕುಡಿಯುವ ನೀರಿ ಅರವಟಿಗೆ ಸೇವಾ ಕೇಂದ್ರಗಳನ್ನು, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಫಿರೋಜ್ ಖಾನ್ ಉದ್ಘಾಟನೆ ಮಾಡಿ ಮಾತನಾಡಿದರು. ಕನಾರ್ಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ, ಉತ್ತಮ ಪತ್ರಕರ್ತರನ್ನೊಳಗೊಂಡಿದೆ. ಸಾಮಾಜಿಕ ಕಳಕಳಿ ಹೊಂದಿ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜದಲ್ಲಿನ ಅಂಕು ಡೊಂಕುಗಳನ್ನು ಸರಿಪಡಿಸುವ ಮಹತ್ತರ ಕಾರ್ಯದಲ್ಲಿ ನಿರತವಾಗಿದೆ. ಜೊತೆಗೆ ಬರಗಾಲದ ಬೇಸಿಗೆಯ ಬೇಗೆಯ ಸಂದರ್ಭದಲ್ಲಿ, ಸಾರ್ವಜನಿಕರಿಲ್ಲಿನ ನೀರಿನ ದಾಹ ತೀರಿಸುವ ಸಲುವಾಗಿ. ಪಟ್ಟಣದ ಪ್ರಮುಖ ವೃತ್ತಗಳಾದ ಅತಿ ಹೆಚ್ಚು ಜನ ಸಂಧಿಸುವ ಮದಕರಿ ವೃತ್ತ, ಹಾಗೂ ಶ್ರೀಆಂಜನೇಯ ಪಾದಗಟ್ಟೆ ಹತ್ತಿರದ ಪುನೀತ್ ಪುಥ್ಥಳಿ ಬಳಿ. ಅಂದರೆ ಎರೆಡು ಶುದ್ಧ ಕುಡಿಯುವ ನೀರಿನ ಅರವಟಿಗೆ ಸೇವಾ ಸೇವಾ ಕೇಂದ್ರಗಳನ್ನು, ಪ್ರಾರಂಭಿಸುವ ಮೂಲಕ ಮಾನವೀಯತೆ ಮೆರೆದಿರುವುದು ಶ್ಲಾಘನೀಯವಾಗಿದೆ ಎಂದರು. ಪಟ್ಟಣ ಪಂಚಾಯ್ತಿ ಸದಸ್ಯರಾದ ತಾಳಸ ವೆಂಕಟೇಶ ಸೇರಿದಂತೆ ವಿವಿದ ಸದಸ್ಯರು, ಕ.ಕಾ.ಪ.ಧ್ವನಿ ಸಂಘದ ಅಧ್ಯಕ್ಷ ಬಾಣದ ಮೂರ್ತಿ ಸೇರಿದಂತೆ, ಸಂಘದ ಪದಾಧಿಕಾರಿಗಳು ಹಾಗೂ ಪತ್ರಕರ್ತರಾದ, ಅನಿಲ್ ಕುಮಾರ ನಾಯ್ಡು, ಗುನ್ನಳ್ಳಿ ನಾರ‍ಯಣಪ್ಪ, ಬಿ.ಕೆ.ಜಯಮ್ಮರವರ ರಾಘವೇಂದ್ರ, ಬಾಣದ ಮೂಗಪ್ಪ ಹಾಗೂ ಸರ್ವ ಸದಸ್ಯರು. ಪಟ್ಟಣದ ಅಂಬಾಲಿ ಶುದ್ಧ ಕುಡಿಯುವ ನೀರಿನ ಘಟಕದ ಬಾಣದ ಹನುಮಂತಪ್ಪ, ಆಟೋ ಚಾಲಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು. ಪಟ್ಟಣದ ಹಿರಿಯ ನಾಗರೀಕರು, ವಿವಿದ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.✍️

ವಿಶೇಷ ವರದಿ-ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.

Leave a Reply

Your email address will not be published. Required fields are marked *