ಜಾತ್ರಾ ಮಹೋತ್ಸವದ ನಿಮಿತ್ಯ ಮುದೇನೂರು ಗ್ರಾಮದಲ್ಲಿ ಎತ್ತುಗಳಿಂದ ಬಾರಕಲ್ಲು ಎಳೆಯುವ ಸ್ಪರ್ಧೆ ಉದ್ಘಾಟಿಸಿದ ಪೂಜ್ಯರು..

Spread the love

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಸುಕ್ಷೇತ್ರ ಮೂದೇನೂರು ಗ್ರಾಮದ ಶ್ರೀ ಉಮಾ ಚಂದ್ರಮೌಳೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮದ ಗುರುಹಿರಿಯರು ಯುವ ಮಿತ್ರರು ಪ್ರತಿ ವರ್ಷದಂತೆ ಈ ವರ್ಷವೂ ಎತ್ತುಗಳಿಂದ ಅಪಾರ ಬಾರವಿರುವ 1.2 ಟನ್ ಕಲ್ಲು ಎಳೆಯುವ ಸ್ಪರ್ಧೆಯನ್ನು ಆಯೋಜಿಸಿದ್ದರು. ಈ ಕಲ್ಲು ಎಳೆಯುವ ಸ್ಪರ್ಧೆಯನ್ನು ಪೂಜ್ಯರಾದ ಶ್ರೀ ಮಠದ ಮರುಳು ಸಿದ್ದ ದೇವರು ಹಾಗೂ ಕುಷ್ಟಗಿ ಮತಕ್ಷೇತ್ರದ ಯುವ ನಾಯಕ  ದೊಡ್ಡಬಸವನಗೌಡ ಬಯ್ಯಾಪುರ ಚಾಲನೆ ನೀಡಿದರು. ಬಾರೆಳೆಯುವ ಸ್ಪರ್ದೆಯಲ್ಲಿ ನಾಡಿನ ಬೆರೆ ಬೆರೆ ಕಡೆಯಿಂದ ಸ್ಪರ್ದಾಳುಗಳು ತಮ್ಮ ತಮ್ಮ ಎತ್ತಿನೊಂದಿಗೆ ಆಗಮಿಸಿದ್ದರು‌.
ಪ್ರಥಮ ತಾವರಗೇರಿಯ ಸಪ್ತರಸಾಬ್ ಮುಲ್ಲಾ ,ಆಕಳಕುಂಪಿ, ಇರಬಗೇರಾ ಗ್ರಾಮದವರು ಅನುಕ್ರಮವಾಗಿ ಪ್ರಶಸ್ತಿ ಪಡೆದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು, ಎಸ್‌ಡಿಎಂಸಿಯ ಅಧ್ಯಕ್ಷರು ಸದಸ್ಯರು, ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಯುವ ಮಿತ್ರರು ಉಪಸ್ಥಿತರಿದ್ದರು. (ಅಲ್ಲದೇ ಶ್ರೀ ಮಠದ ಆವರಣದಲ್ಲಿ ಮಕ್ಕಳಿಂದ ಗೌರಿ ರಥೋತ್ಸವ ಅದ್ದೂರಿಯಾಗಿ ಜರುಗಿತು.ಅಲ್ಲದೇ ಕಡುಬಿನ ಕಾಳಗ ನಡೆಯಿತು.)

ವರದಿ-ಚಂದ್ರುಶೇಖರ ಕುಂಬಾರ ಮುದೇನೂರ.

Leave a Reply

Your email address will not be published. Required fields are marked *