ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕುಮಟಾದ ಅನುರಾಧ ದ್ವಿತೀಯ.

Spread the love

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿ ಶಾಲೆಯಲ್ಲಿ 5 ನೆಯ ತರಗತಿಯ ವಿದ್ಯಾರ್ಥಿನಿ ಕುಮಾರಿ ಅನುರಾಧ ಕುಮಟಾ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಕಾರವಾರ  ಕುಮಟಾ ಅಂಕೋಲಾ ಹೊನ್ನಾವರ ಭಟ್ಕಳ ಹೀಗೆ ಐದು ತಾಲೂಕುಗಳಿಂದ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಐದು, ಆರು ಮತ್ತು ಏಳನೆಯ ತರಗತಿಯರನ್ನೊಳಗೊಂಡ ಕಿರಿಯರ ವಿಭಾಗದಲ್ಲಿ ಸಮಬಲದ ಸ್ಪರ್ಧೆ ನೀಡಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು ಪಾಲಕರಿಗೆ, ಶಾಲೆಗೆ ಮತ್ತು ಊರಿಗೆ ಕೀರ್ತಿ ತಂದಿದ್ದಾಳೆ. ಇವಳು ಶಿಕ್ಷಣ ತಜ್ಞರು ಮತ್ತು ಸಲಹೆಗಾರರಾದ ಶ್ರೀಮತಿ ಭಾರತಿ ಜಿ. ಇವರ ಏಕೈಕ ಪುತ್ರಿ ಆಗಿದ್ದು ತಾಯಿಯಂತೆ ಮಗಳು ನೂಲಿನಂತೆ ಸೀರೆ ಎಂಬುದನ್ನು ಸಾಬೀತುಪಡಿಸಿದ್ದಾಳೆ. ಇನ್ನು ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹೆಚ್ಚಿನ ಕೀರ್ತಿ ಗಳಿಸುವಂತಾಗಲಿ ಇವಳ ಸಾಧನೆ ಇನ್ನಷ್ಟು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಲಿ ಎಂದು ಪಾಲಕರು, ಹಿತೈಷಿಗಳು, ಮುಖ್ಯೋಪಾಧ್ಯಾಯರೊಂದಿಗೆ ಶಾಲಾ ಶಿಕ್ಷಕ ವೃಂದ, ಊರ ನಾಗರಿಕರು ಶುಭ ಹಾರೈಸಿದ್ದಾರೆ.

ವರದಿ-ಉಪಳೇಶ ವಿ.ನಾರಿನಾಳ.

Leave a Reply

Your email address will not be published. Required fields are marked *