ಉತ್ತಮ ಸಾಧನೆ ಮಾಡಿ ತಂದೆ ತಾಯಿಯ ಕೀರ್ತಿ ತನ್ನಿ ವಸಂತ್ ಮಾಧವ್.

Spread the love

ಕುಷ್ಟಗಿ ತಾಲೂಕಿನ ಮುದೇನೂರು ಸರ್ಕಾರಿ ಪ್ರೌಢಶಾಲೆಯಲ್ಲಿ  ನಡೆದ  ಎಸ್ ಎಸ್ ಎಲ್ ಸಿ ಮಕ್ಕಳ ಬಿಳ್ಕೊಡುಗೆ ಸಮಾರಂಭದ ಕುರಿತು ಅಲಂಕರಿಸಿ  ವಸಂತ್ ಮಾಧವ್ ಮಾತನಾಡಿದರು.ಮುದೇನೂರು ಸರ್ಕಾರಿ ಪ್ರೌಢಶಾಲೆಯಲ್ಲಿ   2023 24ನೇ ಸಾಲಿನ ಎಸ್ ಎಸ್ ಎಲ್ ಸಿ ಮಕ್ಕಳ ಬೀಳ್ಕೊಡುಗೆ ಸಮಾರಂಭ ಸಂಭ್ರಮದಿಂದ ನಡೆಯಿತು. ಈ ಬಿಳ್ಕೊಡುವ ಸಮಾರಂಭವನ್ನು ಸರಸ್ವತಿ ಪೂಜೆ ಮಾಡುವ ಮೂಲಕ ಸಮಾರಂಭವನ್ನು ಎಸ್ ಡಿ ಎಮ್ ಸಿ ಅಧ್ಯಕ್ಷರು ಸದಸ್ಯರು ಗ್ರಾಮ ಪಂಚಾಯಿತಿಯ ಸದಸ್ಯರು, ಗ್ರಾಮದ ಗಣ್ಯರು,ಶಾಲೆಯ ಗುರುಗಳು  ಉದ್ಘಾಟಿಸಿದರು. ನಂತರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ  ತಾವು ಕಲಿತ ಶಾಲೆಯ ಬಗ್ಗೆ ಕಲಿಸಿದ ಗುರುಗಳ ಬಗ್ಗೆ ತಮ್ಮ ತಮ್ಮ ಅನಿಸಿಕೆಗಳನ್ನ ಸ್ನೇಹಿತರೊಡನೆ ವೇದಿಕೆ ಮೇಲೆ ಹಂಚಿಕೊಂಡರು. ಸಮಾರಂಭದ ಕುರಿತು ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ವಸಂತ್ ಮಾಧವ್ ಮಕ್ಕಳ ಜೀವನ ಎಂಬುದು ಕಲಿಕೆಯ ಜೀವನ ಅದಕ್ಕೆ ನಿಮಗೆ ಮಕ್ಕಳ ಎಂದು ಕರೆಯುತ್ತಾರೆ. ಹುಡುಗುತನ ಸಹಜವಾಗಿ ಅದು ಇರುತ್ತದೆ, ಅದರ ಜೊತೆ ಜೊತೆಗೆ ಅಭ್ಯಾಸದ  ಹವ್ಯಾಸ ಇದ್ದಾಗ ಮಾತ್ರ ಸಾಧಿಸಲು ಸಾಧ್ಯ. ಮನೆಯಲ್ಲಿ ತಂದೆ ತಾಯಿಗಳ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ, ಶಾಲೆಯಲ್ಲಿ ನಾವು ಅಂದರೆ ಶಿಕ್ಷಕ ಬಳಗ ಹಾಕಿಕೊಟ್ಟ  ವಿದ್ಯೆಯೆಂಬ ದಾರಿಯಲ್ಲಿ ನೀವು ನಡೆಯಬೇಕು. ಎಲ್ಲಾ ಮಕ್ಕಳು ನೀವು ಜಾಣರಿದ್ದೀರಿ, ಇನ್ನೂ ಚೆನ್ನಾಗಿ ಓದಿ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕವನ್ನು ಪಡೆದು ಶಾಲೆಗೆ ಕೀರ್ತಿ ತರುವುದಲ್ಲದೆ ಇಡೀ ನಿಮ್ಮ ಗ್ರಾಮಕ್ಕೆ ತಾಲೂಕಿಗೆ ಜಿಲ್ಲೆಗೆ ಕೀರ್ತಿ ತರುವಂತರಾಗಿ ಎಂದರು. ಅಲ್ಲದೆ ತಂದೆ ತಾಯಿಗೆ ಮೊದಲು ನೀವು ಗೌರವ ಕೊಡುವುದನ್ನು ಕಲಿಯಿರಿ. ಉತ್ತಮ ಸಾಧನೆ ಮಾಡಿ ತಂದೆ ತಾಯಿಗೆ ಕೀರ್ತಿ ತನ್ನಿರಿ ಎಂದು ಶುಭ ಹಾರೈಸಿದರು. ಇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಹುಸೇನಪ್ಪ ಈ ಹಿರೇಮನಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಭೀಮನಗೌಡ ಬರಗೂರು ಹಾಗೂ ಸದಸ್ಯರಾದ ಶೇಖಣ್ಣ ಹಡಪದ್ ಚಂದ್ರಪ್ಪ ಹಿರೇಮನಿ ಮುಖ್ಯೋಪಾಧ್ಯಯರಾದ ವಸಂತ್ ಮಾದವ್ ಪಿ ವಿ ಹಳೆಗೌಡರ್ ಗುರುರಾಜ್ ಶಾವಿ ಶರಣಪ್ಪ ಹಾವಿನಾಳ್  ವೀರೇಶ್ ಶಿಕ್ಷಕಿಯಾದ ಪ್ರೇಮ ಇಟಗಿ ಈರಮ್ಮ ಹಳೆಗೌಡ್ರು ಸುಜಾತ ಮೇಡಂ ಹಾಗೂ ಊರಿನ ಗಣ್ಯಮಾನ್ಯರು ಉಪಸ್ಥಿತರಿದ್ದರು.

ವರದಿ-ಚಂದ್ರುಶೇಖರ ಕುಂಬಾರ ಮುದೇನೂರ

Leave a Reply

Your email address will not be published. Required fields are marked *