ತಾವರಗೇರಾ ಪಟ್ಟಣದ 4 ಮುಖ್ಯ ರಸ್ತೆ (ಹೆದ್ದಾರಿ)ರೋಡ್ ಅಗಲೀಕರಣ  ಹೈಮಾಸ್ಕ್ ಲೈಟ್, & ಸಿ,ಸಿ,ಕ್ಯಾಮೇರಾ ಅಳವಡಿಕೆಗೆ ಬುದ್ದಂ, ಶರಣಂ, ಗಚ್ಛಾಮಿ ಸೇವಾ ಟ್ರಸ್ಟ್ (ರಿ)ವತಿಯಿಂದ ಅಗ್ರಹ,

Spread the love

ತಾವರಗೇರಾ ಪಟ್ಟಣದ 4 ಮುಖ್ಯ ರಸ್ತೆ (ಹೆದ್ದಾರಿ)ರೋಡ್ ಅಗಲೀಕರಣ  ಹೈಮಾಸ್ಕ್ ಲೈಟ್, & ಸಿ,ಸಿ,ಕ್ಯಾಮೇರಾ ಅಳವಡಿಕೆಗೆ ಬುದ್ದಂ, ಶರಣಂ, ಗಚ್ಛಾಮಿ ಸೇವಾ ಟ್ರಸ್ಟ್ (ರಿ)ವತಿಯಿಂದ ಅಗ್ರಹ,

ಬುದ್ದಂ, ಶರಣಂ, ಗಚ್ಛಾಮಿ ಸೇವಾ ಟ್ರಸ್ಟ್ (ರಿ) KSG-4-00126-2023-24 ವತಿಯಿಂದ ಸರ್ಕಾರಕ್ಕೆ ಮತ್ತು ಜನಪ್ರತಿನಿದಿಗಳಿಗೆ ಒತ್ತಾಯ ಮಾಡುವುದೇನಂದರೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣವು ಬಹು ದೊಡ್ಡ ಪಟ್ಟಣವಾಗಿದೆ, 1 ಲಕ್ಷ 40 ಸಾವಿರ ಕ್ಕೂ ಅಧಿಕ ಜನ ಜನಸಂಖ್ಯೆ ಹೊಂದಿದ್ದು. ಸಾಲದ್ದಕ್ಕೆ ಜಿಲ್ಲೆಯಲ್ಲಿಯೇ ನಮ್ಮ ಪಟ್ಟಣವು ವ್ಯಾಪಾರ ವಹಿವಾಟಿಗೆ 2ನೇ ಸ್ಥಾನ ಪಡೆದಿರುವುದು ನಮ್ಮ ಹೆಮ್ಮೆಯಾಗಿದೆ, ದಿನ ನಿತ್ಯ ಕೋಟ್ಯಂತರ ವ್ಯಾಪಾರ, ವೈವಾಟು ನಡೆಯುತ್ತಲೆ ಬಂದಿದೆ. ಸುತ್ತಮುತ್ತಲಿನ ಭಾಗದ ಬಹುತೇಕ ಹಳ್ಳಿ ಜನರು ತಾವರಗೇರಾ ಪಟ್ಟಣಕ್ಕೆ ಅವಲಂಬಿತರಾಗಿದ್ದಾರೆ.

ಕುಷ್ಟಗಿಯಿಂದ ಬರುವ ನೇರಾ ಮುಖ್ಯ ರಸ್ತೆ(ಹೆದ್ದಾರಿ)ಯಿಂದ ಮತ್ತು ಗಂಗಾವತಿಯ ಮುಖ್ಯ ರಸ್ತೆ(ಹೆದ್ದಾರಿ)ಯಿಂದ ಪಟ್ಟಣಕ್ಕೆ ಬರುವ ಮುಖ್ಯ ರಸ್ತೆಗೆ ಒಳಗೊಂಡು ನೇರವಾಗಿ ಸಿಂಧನೂರು ಮುಖ್ಯ ರಸ್ತೆ(ಹೆದ್ದಾರಿ)ಯಿಂದ ಮತ್ತು ಮುದಗಲ್‌ ಮುಖ್ಯ ರಸ್ತೆ(ಹೆದ್ದಾರಿ)ಯಿಂದ ಮದ್ಯ ಭಾಗದಲ್ಲಿ ರೋಡ ಅಗಲಿಕರಣ ಮತ್ತು ಹೈ ಮಾಸ್ಕ್ ಲೈಟ್ ನಿರ್ಮಾಣ ಮಾಡಬೇಕು. ಈ ನೇರಾ ಮುಖ್ಯ ರಸ್ತೆ (ಹೆದ್ದಾರಿ) ಯಲ್ಲಿ ಹೈಮಾಸ್ಕ್ ಲೈಟ್ ಇಲ್ಲದ ಕಾರಣ, ರಸ್ತೆ ಬದಿಯಲ್ಲಿ ಸಾರ್ವಜನಿಕರು ನಡೆದುಕೊಂಡು ಹೋಗುವ ಸಂದರ್ಭದಲ್ಲಿ ವಾಹನ ಚಾಲಕರ ಪ್ರಜ್ಞೆ ತಪ್ಪಿ ಎಷ್ಟೋ ಜನರಿಗೆ ಅಪಘಾತ ಮಾಡಿ ಪರಾರಿಯಾಗಿದ್ದಾರೆ. ಸುಮಾರು 8 ತಿಂಗಳದ ಹಿಂದೆ ಮುದಗಲ್ ಮುಖ್ಯೆ ರಸ್ತೆಯ ಪೋಸ್ಟ್ ಆಫೀಸ್ ಹತ್ತಿರಾ ನಡ ರೊಡಲ್ಲಿ ಅಪರಿಚಿತ ವಾಹನ ಚಾಲಕ ಅಪಘಾತ ಮಾಡಿ ಪರಾರಿ, ಕೆಲವೆ ಕ್ಷಣಗಳಲ್ಲಿ ಮಾರಣ ಹೊಂದಿದ್ದಾರೆ. ಅದೇ ರೀತಿ ದಿನಾಂಕ 17/02/2024 ರಂದು ರಾತ್ರಿ 8 ಗಂಟೆ ಮೆಲ್ಫಟ್ಟ ಸಮಯದಲ್ಲಿ ಸಿಂಧನೂರ ಮುಖ್ಯೆ ರಸ್ತೆಯಲ್ಲಿ ಮಹಿಳೆಗೆ ಅಪರಿಚಿತ ವಾಹನ ಚಾಲಕ ಅಪಘಾತ ಮಾಡಿ ಪರಾರಿಯಾಗಿದ್ದಾರೆ. ಇಂತಹ ಉದಾಹರಣೆಗಳು ಸಾಕಷ್ಟು ಇವೆ. ಜೊತೆಗೆ ಪಟ್ಟಣದ ಮುಖ್ಯ ವೃತ್ತದಲ್ಲಿ ಸಿ.ಸಿ.ಕ್ಯಾಮೆರಾಗಳು ಇದ್ದರು ಇಲ್ಲದಂತಾಗಿದೆ, ಅವುಗಳೆಲ್ಲವು ಕೇವಲ ತೋರಿಕೆಗೆ ಮಾತ್ರ ಕಣ್ಣು ಮುಂದೆ ಇವೆ, ಅವುಗಳು ಅದಿಗೆಟ್ಟು ಹೈದ್ರಾಬಾದ ಹಾಗಿ ಹೋಗಿವೆ, ಇದರಿಂದ ಎಷ್ಟೋ ಅ ಹಿತಕರ ಘಟನೆಗಳು ನಡೆಯುತ್ತಲೆ ಇವೆ. ಹಾಗಾಗಿ ಅಪರಾದ ಮತ್ತು ಅಪಘಾತ ತಡೆಯಿಡಿಯಲು ಮೊದಲಿಗೆ ನಾಲ್ಕು ಮುಖ್ಯೆ ರಸ್ತೆ(ಹೆದ್ದಾರಿ)ಗಳನ್ನ ಇನ್ನೂ ಅಗಲಿಕರಣ ಆಗಬೇಕು ಜೊತೆಗೆ ರಸ್ತೆ (ಹೆದ್ದಾರಿ)ಉದ್ದಕ್ಕೂ ಹೈ ಮಾಸ್ಕ್ ಲೈಟ್ ಹಾಕಿಸಬೇಕು ಮತ್ತು ಪ್ರತಿಯೊಂದು ವೃತ್ತದಲ್ಲಿ ಸಿ.ಸಿ.ಕ್ಯಾಮೆರಾ ಕೂಡಲೆ ಅಳವಡಿಸಬೇಕು.

ಕಾರಣ ತಾವರಗೇರಾ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಸುಮಾರು 5 ಗ್ರಾಮ ಪಂಚಾಯತಿಗಳು ಒಳಪಡುತ್ತವೆ. 1) ಮೆಣೇದಾಳ ಗ್ರಾ.ಪಂ. 2)  ಲಿಂಗದಹಳ್ಳಿ ಗ್ರಾ.ಪಂ. 3) ಸಂಗನಾಳ ಗ್ರಾ.ಪಂ. 4) ಕಿಲ್ಲಾರಹಟ್ಟಿ ಗ್ರಾ.ಪಂ. 5) ಜುಮಲಾಪೂರ ಗ್ರಾ.ಪಂ. ಇದರ ಜೊತೆ ಜೊತೆಗೆ ಪಕ್ಕದ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮ ಪಂಚಾಯತಿಯ ಸಂಪೂರ್ಣ ಹಳ್ಳಿಗಳು, ಮತ್ತು ಬೇರೆ ಜಿಲ್ಲೆ ಅಂದರೆ ಪಕ್ಕದ ಜಿಲ್ಲೆಯಾದ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಕೆಲವೊಂದು ಗ್ರಾಮ ಪಂಚಾಯತಿಗಳು  1) ಉಮಲೂಟಿ ಗ್ರಾ.ಪಂ. 2) ಗುಂಡ ಗ್ರಾ.ಪಂ. ಹಾಗೂ 3) ಕಲಮಂಗಿ ಗ್ರಾ.ಪಂ. ಮತ್ತು ಲಿಂಗಸೂಗೂರು ತಾಲೂಕಿನ ನಾಗಲಾಪೂರ ಗ್ರಾ.ಪಂ.ಗೆ ಸಂಬಂದಿಸಿದ ಪ್ರತಿಯೊಂದು ಹಳ್ಳಿ ಜನರು ಈ ನಮ್ಮ ತಾವರಗೇರಾ ಪಟ್ಟಣಕ್ಕೆ ಅವಲಂಬಿತರಾಗಿದ್ದಾರೆ.

ಅದರಲ್ಲೂ ವಿಶೇಷವಾಗಿ ತಾವರಗೇರಾ ಪಟ್ಟಣದ 14,15,16,ಮತ್ತು 17ನೇ ವಾರ್ಡನ ಮುಖ್ಯ ರಸ್ತೆಯು ಕಗ್ಗತ್ತಲಲ್ಲಿ ಮುಳಿಗಿದರು ಕ್ಯಾರೆ ಇಲ್ಲ. ಸಂಬಂದಪಟ್ಟ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು. ದಿನ ನಿತ್ಯ ಅಧಿಕಾರಿಗಳ ವರ್ಗ ಮತ್ತು ಜನಪ್ರತಿನಿಧಿಗಳು ಇದೆ ಮಾರ್ಗದಲ್ಲಿ ತಿರುಗಾಡಿದರು ಕ್ಯಾರೆ ಇಲ್ಲ. ಹಾಗಾಗಿ ನಮ್ಮ ತಾವರಗೇರಾ ಪಟ್ಟಣಕ್ಕೆ ಅತಿ ಅವಶ್ಯವಾಗಿ ಬೇಕಾಗಿರುವುದು ಕುಷ್ಟಗಿಯಿಂದ ಬರುವ ನೇರಾ ಮುಖ್ಯ ರಸ್ತೆ(ಹೆದ್ದಾರಿ)ಯಿಂದ ಮತ್ತು ಗಂಗಾವತಿಯ ಮುಖ್ಯ ರಸ್ತೆ(ಹೆದ್ದಾರಿ)ಯಿಂದ ಪಟ್ಟಣಕ್ಕೆ ಬರುವ ಮುಖ್ಯ ರಸ್ತೆಗೆ ಒಳಗೊಂಡು ನೇರವಾಗಿ ಸಿಂಧನೂರು ಮುಖ್ಯ ರಸ್ತೆ(ಹೆದ್ದಾರಿ)ಯಿಂದ ಮತ್ತು ಮುದಗಲ್‌ ಮುಖ್ಯ ರಸ್ತೆ(ಹೆದ್ದಾರಿ)ಯಿಂದ ಮದ್ಯ ಭಾಗದಲ್ಲಿ ರೋಡ ಅಗಲಿಕರಣ ಮತ್ತು ಹೈ ಮಾಸ್ಕ್ ಲೈಟ್ ನಿರ್ಮಾಣ ಮಾಡಬೇಕು. ಪ್ರತಿಯೊಂದು ವೃತ್ತದಲ್ಲಿ ಸಿ.ಸಿ.ಕ್ಯಾಮೆರಾ ಕೂಡಲೆ ಅಳವಡಿಸಬೇಕು, ಇಲ್ಲಾಗುವ ಪ್ರತಿಯೊಂದು ಅಪರಾದ ಮತ್ತು ಅಪಘಾತ ತಡೆಯಿಡಿಯಲು ಕೂಡಲೇ ಪ್ರತಿಯೊಂದು ವೃತ್ತದಲ್ಲಿ ಸಿ.ಸಿ.ಕ್ಯಾಮೇರಾ ಅಳವಡಿಸಬೇಕೆಂದು ಬುದ್ದಂ, ಶರಣಂ, ಗಚ್ಛಾಮಿ ಸೇವಾ ಟ್ರಸ್ಟ್ (ರಿ) ತಾವರಗೇರಾವತಿಯಿಂದ ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಒತ್ತಾಯ, ಈ ಸಂದರ್ಭದಲ್ಲಿ ಅಧ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡ, ಕಾರ್ಯಾಧರ್ಶಿಯಾದ ರಾಜಾನಾಯ್ಕ, ಹಾಗೂ ಪ್ರಗತಿಪರ ಚಿಂತಕರು ಹಾಗೂ ಹಿರಿಯ ಹೋರಾಟಗಾರರಾದ ಸಾಗರ್ ಬೇರಿ, ಸರ್ವ ಪಧಾಧಿಕಾರಿಗಳಾದ ಬಾಲರಾಯ ಯಾದವ್, ಉಪಳೇಶ ವಿ.ನಾರಿನಾಳ, ದೇವೇಂದ್ರ ಹುನಗುಂದ, ವಿರೇಶ ನವಲಿ, ರವಿ ಆರೇರ್, ಖಾಜಾಖಾನ್ ಪಠಾಣ, ಯಮನೂರ ಹುನಗುಂದ, ಹುನೇನಪ್ಪ ವಿಭೂತಿ, ಆರ್.ಬಿ.ಅಲಿಆದಿಲ್. ಪಟ್ಟಣ ಪಂಚಾಯತಿಯ ಪ್ರಲಾದ್ ಜೋಶಿ, ಮತ್ತು ಸಿಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ-ಉಪಳೇಶ ವಿ.ನಾರಿನಾಳ.

Leave a Reply

Your email address will not be published. Required fields are marked *