ಕಲ್ಯಾಣ ಕರ್ನಾಟಕ ಕೃಷ್ಣ ಕಾಡಾದ ಹಸನಾಪುರ‌ ವಿಭಾಗ ಹಾಗೂ ಉಪ ವಿಭಾಗ ಕಛೇರಿಗಳು ಸ್ಥಳಾಂತರಿಸಿ ಆದೇಶ ಮಾಡಿದ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ 21ರಂದು  ಪ್ರತಿಭಟನೆ.

Spread the love

ಬೆಂಗಳೂರು :  ಹೈದ್ರಾಬಾದ್ ಕರ್ನಾಟಕವು ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕೃಷ್ಣಾ-ಕಾಡಾದ ಹಸನಾಪುರ ವಿಭಾಗ ಮತ್ತು ಉಪ ವಿಭಾಗದ ಕಚೇರಿಗಳನ್ನು ಮುಂಬೈ ಕರ್ನಾಟಕ್ಕೆ ಸ್ಥಳಾಂತರಿಸುತ್ತಿರಿಸ ಬಾರದೆಂದು ಆಗ್ರಹಿಸಿ ಫೆ.೨೧ರಂದು ಫ್ರೀಡಂ ಪಾರ್ಕ್ನಲ್ಲಿ ಪತ್ರಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ 371(j)ಕಲಂ ಕಾನೂನು ತಿದ್ದುಪಡಿ ಹೋರಾಟ ಸಮಿತಿ ತಿಳಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷರಾದ ಸೈಬಣ್ಣ ಜಮಾದಾರ ಮಾತನಾಡಿ, ಹೈದ್ರಾಬಾದ್ ಕರ್ನಾಟಕವು ಕರ್ನಾಟಕ ರಾಜ್ಯದಲ್ಲಿ ಅತಿ ಹಿಂದುಳಿದ ಪ್ರದೇಶವಾಗಿದ್ದು, ಹುದ್ದೆ ಸಮೇತ ಕಚೇರಿಗಳನ್ನು ಸ್ಥಳಾಂತರ ಮಾಡುವುದರಿಂದ ಲಕ್ಷಾಂತರ ರೈತರು ಹಾಗೂ ೧೫೦ಕ್ಕೂ ಹೆಚ್ಚು ಹೈದ್ರಾಬಾದ್ ಕರ್ನಾಟಕದ ಸರ್ಕರಿ ನೌಕರಿಗಳು ಕಳೆದುಕೊಂಡು ತೊಂದರೆ ಅನುಭವಿಸುತ್ತಾರೆ. ಈ ಭಾಗದಲ್ಲಿ ಇರುವ ಉದ್ಯೋಗ ಬೇರೆ ಕಡೆ ಹೋಗುವದರಿಂದ  ನೀರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ ಆದ್ದರಿಂದ ಸ್ಥಳಾಂತರಕ್ಕೆ  ಹೊರಡಿಸಿರುವ ಈ ಆದೇಶವನ್ನು ಸರ್ಕಾರ ಹಿಂಪಡೆದು ಹಸನಾಪುರ ದಲ್ಲಿ ವಿಭಾಗ ಕಚೇರಿಯನ್ನು ಹಾಗೂ ಉಪ ವಿಭಾಗ ಕಛೇರಿಗಳನ್ನು ಮೂಲ ಸ್ಥಳದಲ್ಲೆ ಮುಂದುವರೆಸುವಂತೆ ಒತ್ತಾಯಿಸಿದರು.  ಹಸನಾಪೂರ ಕಾರ್ಯಪಾಲಕ ಇಂಜಿನಿಯರ್ ಹೊಲಗಾಲುವ ವಿಭಾಗ-೨, ಮತ್ತು ಕೃಷ್ಣಾ-ಕಾಡಾ ಭೀಮನರಾಯನಗುಡಿ ಅಧೀನದಲ್ಲಿ ಬರುವ ವಿಭಾಗ ಮತ್ತು ಉಪ ವಿಭಾಗ ಕಾರ್ಯಾಲಯ ಹಾಗೂ ಉಪ ವಿಭಾಗ ಕಚೇರಿ ಬಾತಾಂಬ್ರ ಬೀದರ್ ಜಿಲ್ಲೆಯ ಹುದ್ದೆ ಸಮೇತ ಸ್ಥಳಾಂತರ ಮಾಡಲು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಇಲ್ಲವಾದಲ್ಲಿ ಕಲ್ಯಾಣ ಕರ್ನಾಟದ ಎಲ್ಲಾ ಜಿಲ್ಲಾ-ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ಶಾಸಕ-ಸಚಿವರ ಮನೆಯ ಮುಂದೆ ಉಗ್ರಹೋರಾಟ ಮಾಡಲಾಗುವುದು ಎಂದು ಸೈಬಣ್ಣ ಜಮಾದರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಹಿಂದ ಚಿಂತಕ ವೇದಿಕೆ  ಹಾಗೂ ಕಲ್ಯಾಣ ಕರ್ನಾಟಕ 371(j) ಕಲಂ ಕಾನೂನು ತಿದ್ದುಪಡಿ ಹೋರಾಟ ಸಮಿತಿ ಸದಸ್ಯರಾದ ಶಿವಲಿಲಾ, ಚನ್ನವೀರ ತಂಗ,ಶಿವು ರಾಠೋಡ್,ಸಂಜು ಹೊಡಲ್ಕರ್,ಡಿ.ಎಸ್.ಹಡಲಗಿ ಇದ್ದರು.

Leave a Reply

Your email address will not be published. Required fields are marked *