ಸೌಹಾರ್ದತೆ ಉಳಿವಿಗಾಗಿ ಮಾನವ ಸರಪಳಿ “ಗಾಂಧಿಜೀ ಹತ್ಯೆ ಮಾಡಿದ ಶಕ್ತಿಗಳೇ ಇಂದು ಶಾಂತಿ ಕದಡುತ್ತಿವೆ”

Spread the love

ಲಿಂಗಸ್ಗೂರು: ಹಲವು ದಶಕಗಳಿಂದಲೂ ಕರ್ನಾಟಕವನ್ನು`ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು. ಜನರನ್ನು ಮತಾಂಧತೆಯ ಆಧಾರದಲ್ಲಿ ಜಾತಿ-ಮತ ಧರ್ಮಗಳ ಹೆಸರಿನಲ್ಲಿ ವಿಭಜಿಸುವ ಶಕ್ತಿಗಳಿಂದ ನಮ್ಮ ಸಾಮಾಜಿಕ ಸೌಹಾರ್ದತೆಗೆ ತೀವ್ರವಾದ ಹಾನಿಯಾಗಿದೆ. ಅಂದು ಗಾಂಧಿಜೀ ಹತ್ಯೆ ಮಾಡಿದ ಶಕ್ತಿಗಳೇ ಇಂದು ಶಾಂತಿ ಕದಡುತ್ತಿವೆ.  ಶಾಂತಿ ಸೌಹಾರ್ದತೆ ಉಳಿವಿಗಾಗಿ ನಾವು ಎಲ್ಲಾ ಮನಸುಗಳನ್ನು ಒಗ್ಗೂಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಹೇಳಿದರು. ಮಂಗಳವಾರದಂದು ಪಟ್ಟಣದ ಗಡಿಯಾರ ಚೌಕ್ ನಲ್ಲಿ ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನದ ಅಂಗವಾಗಿ ಶಾಂತಿ ಸೌಹಾರ್ದತೆ ಕಾಪಾಡಲು  ವಿವಿಧ  ಪ್ರಗತಪರ ಮಾನವ ಸರಪಳಿ ನಡೆಸಲಾಯಿತು

ಇಂದು ರಾಜಕೀಯ ಪಕ್ಷಗಳು ಕೋಮುಗಲಭೆ ಸೃಷ್ಠಿಸಿ ಜಾತಿ ಧರ್ಮಗಳ ನಡುವೆ ದ್ವೇಷ ಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿವೆ. ರಾಜ್ಯದಲ್ಲಿ ಬರ ಬಂದು ರೈತರು ಕೂಲಿಕಾರರು ಸಂಕಷ್ಟದಲ್ಲಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಶಿಕ್ಷಕ ಉಪನ್ಯಾಸಕರ ನೇಮಕಾತಿ ಇಲ್ಲದೇ ಬಿಕೊ ಎನ್ನುತ್ತಿವೆ. ಯುವಜನರು ನಿರುದ್ಯೋಗದಿಂದ ಕಂಗೆಟ್ಟಿದ್ದಾರೆ. ಮಹಿಳೆಯರ ಮೇಲೆ ದಿನ ನಿತ್ಯ ದೌರ್ಜನ್ಯ ಆಗುತ್ತಿವೆ. ಜನತೆಗೆ ಕುಡಿಯಲು ನೀರು, ಆರೋಗ್ಯ, ಶಿಕ್ಷಣ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳಿಂದ ನರಳುತ್ತಿದ್ದರೂ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಮುಖಂಡರು ತುಟಿ ಬಿಚ್ಚುತ್ತಿಲ್ಲ ಎಂದು ಹೇಳಿದರು. ದಿನ ನಿತ್ಯ ದ್ವೇಷ ಭಾಷೆಯಿಂದ ನಮ್ಮ ಸಾಮಾಜಿಕ, ಮತೀಯ ದ್ವೇಷದ ಜೊತೆಗೆ ಅಸ್ಪೃಶ್ಯತೆ, ಜಾತೀಯ ದಮನ, ಮಹಿಳೆಯರ ಮೇಲಿನ ದೌರ್ಜನ್ಯ, ಆರ್ಥಿಕ ಅಸಮಾನತೆಗಳ ತೀವ್ರತೆಯೂ ಸೌಹಾರ್ದದ ವಾತಾವರಣವನ್ನು ಮತ್ತಷ್ಟು ಕಲುಷಿತಗೊಳಿಸುತ್ತಿವೆ. ಇಂತಹ ಸಂದರ್ಭದಲ್ಲಿ ಶತ ಶತಮಾನಗಳ ಇತಿಹಾಸವುಳ್ಳ ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಹಾಗೂ ಜನ ಸಂಸ್ಕೃತಿಯನ್ನು ಗುರುತಿಸಿ ಅದನ್ನು ಮುನ್ನೆಲೆಗೆ ತರುವ ಐತಿಹಾಸಿಕ ಅವಶ್ಯಕತೆ ಉಂಟಾಗಿದೆ ಎಂದರು. ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಲಕ್ಷ್ಮಣ್ ಬಾರಿಕಾರ್,  ಅಮರೇಶ್ ಕುಂಬಾರ, ಜಮಿಯಾತೆ ಉಲ್ಮಾಯೆ ಹಿಂದ್  ತಾಲೂಕು ಅಧ್ಯಕ್ಷ ಮುಫ್ತಿ ಸೈಯದ್ ಯೂನಿಸ್ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಸಿಐಟಿಯು ತಾಲೂಕು ಸಂಚಾಲಕ ಮಹ್ಮದ್ ಹನೀಫ್,  ಮುಖಂಡರಾದ  ಬಾಬಾಜಾನಿ, ಫಕ್ರುದ್ದೀನ್, ನಿಂಗಪ್ಪ ಎಂ, ಅಲ್ಲಾ ಭಕ್ಷ ದೇವಪೂರು ಕ್ರಾಸ್, ಡಿವೈಎಫ್ಐ ಜಿಲ್ಲಾ ಸಮಿತಿ ಸದಸ್ಯರಾದ ಕಾಶಿಪತಿ ತವಗ, ಶರಣಬಸವ ಆನೆಹೊಸೂರು, ಚೆನ್ನಬಸವ ವಂದ್ಲಿ ಹೊಸೂರು, ಅಂಜನೇಯ ನಾಗಲಾಪೂರು, ವಿಶ್ವ ಅಂಗಡಿ, ಬಾಬಾ ಖಾಜಿ, ಅನ್ಸರ್ ಸಾರ್, ಉಮರ್ ಅಲಿ, ಸಲಾಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *