ಬುದ್ದಂ,ಶರಣಂ,ಗಚ್ಛಾಮಿ ಸೇವಾ ಟ್ರಸ್ಟ್ (ರಿ) ವತಿಯಿಂದ ನಾಡಿನ ಸಮಸ್ತ ಜನತೆಗೆ 75ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮದ ಶುಭಾಶಯಗಳು.

Spread the love

ಭಾರತೀಯ ಸ್ವಾತಂತ್ರ್ಯ ಚಳುವಳಿ, ಜನವರಿ 26, 1929 ರಂದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯವನ್ನು ಗುರಿಯಾಗಿಸಿಕೊಂಡಿತು. ಲಾಹೋರ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಮತ್ತು ದಿನವನ್ನು ಪೂರ್ಣ ಸ್ವರಾಜ್ ದಿನ ಎಂದು ಘೋಷಿಸಲಾಯಿತು. ಈ ಕಾರಣಕ್ಕಾಗಿಯೇ ಭಾರತದ ಸಂವಿಧಾನವನ್ನು ಸ್ವಾತಂತ್ರ್ಯದ ನಂತರ ಈ ದಿನದಂದು ಜಾರಿಗೆ ತರಲಾಯಿತು. ಗಣರಾಜ್ಯೋತ್ಸವವು ದೇಶಭಕ್ತಿಯ ಸಂದರ್ಭ ಮಾತ್ರವಲ್ಲದೆ ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಆದರ್ಶಗಳು ಮತ್ತು ತತ್ವಗಳ ಜ್ಞಾಪನೆಯಾಗಿದೆ ಮತ್ತು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನೆನಪಿಸುತ್ತದೆ. 1950ರ ಜನವರಿ 26ರಂದು ಭಾರತೀಯ ಸಂವಿಧಾನವನ್ನು ಔಪಚಾರಿಕವಾಗಿ ಅಂಗೀಕರಿಸಲಾಯಿತು. ಹೀಗಾಗಿ ಅಂದಿನಿಂದ ಜನವರಿ 26ನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಭಾರತವು 1947ರ ಆಗಸ್ಟ್​ 15ರಂದು ಬ್ರಿಟೀಷರ ಆಳ್ವಿಕೆಯಿಂದ ಮುಕ್ತಿಯನ್ನು ಪಡೆದ ಭಾರತಕ್ಕಾಗಿ ಸಂವಿಧಾನ ರಚನೆಯ ಕಾರ್ಯ ಆರಂಭಗೊಂಡಿತು. ಸಂವಿಧಾನ ಶಿಲ್ಪಿ ಬಿ. ಆರ್‌.​ ಅಂಬೇಡ್ಕರ್​ ರಚಿಸಿದ ಭಾರತೀಯ ಸಂವಿಧಾನವು 1950ರ ಜನವರಿ 26ರಂದು ಜಾರಿಗೆ ಬಂದಿತು. 1946ರ ಡಿಸೆಂಬರ್​ 9ರಂದು ಭಾರತದ ಮೊಟ್ಟ ಮೊದಲ ಸಂವಿಧಾನ ಸಂಬಂಧಿ ಸಭೆ ನಡೆಸಲಾಯಿತು. 1949ರ ನವೆಂಬರ್​ 26ರಂದು ಅಂತಿಮ ಬಾರಿ ಸಭೆ ಸೇರಿತು. ಈ ದಿನವನ್ನು ಸಂವಿಧಾನ ದಿನವಾಗಿಯೂ ಆಚರಿಸಲಾಗುತ್ತದೆ. 1950ರ ಜನವರಿ 26ರಂದು ಭಾರತವು ಗಣರಾಜ್ಯವಾಗಿದೆ ಎಂಬುದನ್ನು ತಿಳಿಸಲು ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್​​ ಭಾರತದ ಬಾವುಟವನ್ನು ಹಾರಿಸಿದ್ದರು. ಈ ದಿನದಂದು ಭಾರತವು ಗಣರಾಜ್ಯವಾಗಿ ಕರೆಸಿಕೊಂಡ ಹಿನ್ನೆಲೆಯಲ್ಲಿ ಈ ದಿನವನ್ನು ರಾಷ್ಟ್ರೀಯ ಹಬ್ಬದ ದಿನವನ್ನಾಗಿ ಪರಿಗಣಿಸವಂತೆ ನಿರ್ಧರಿಸಲಾಯ್ತು. ಗಣರಾಜ್ಯೋತ್ಸವವು ಕೇವಲ ದೇಶಭಕ್ತಿಯ ಸಂದರ್ಭವಲ್ಲ ಆದರೆ ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಆದರ್ಶಗಳು ಮತ್ತು ತತ್ವಗಳ ಜ್ಞಾಪನೆಯಾಗಿದೆ. ದೇಶವು ಸಾಧಿಸಿರುವ ಪ್ರಗತಿಯನ್ನು ಪ್ರತಿಬಿಂಬಿಸುವ ಮತ್ತು ಪ್ರಜಾಪ್ರಭುತ್ವ, ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ಮೌಲ್ಯಗಳನ್ನು ಎತ್ತಿಹಿಡಿಯುವ ಬದ್ಧತೆಯನ್ನು ನವೀಕರಿಸುವ ದಿನವಾಗಿದೆ. ನಾವು ವಿಕ್ಷಿತ್ ಭಾರತಕ್ಕಾಗಿ ಶ್ರಮಿಸುತ್ತಿರುವಾಗ,ಏಕೀಕೃತ ಮತ್ತು ಅಭಿವೃದ್ಧಿ ಹೊಂದುತ್ತಿರುವ ಭಾರತವನ್ನು ಶಕ್ತಿಯುತಗೊಳಿಸಲು ಶ್ರಮಿಸಬೇಕಾಗಿರುತ್ತದೆ. ನಾಡಿನ ಸಮಸ್ತ ಜನತೆಗೆ ವಿಶೇಷವಾಗಿ ಸೈನಿಕರಿಗೂ, ಪ್ರತಿಯೊಂದು ಹೋರಾಟದ ಮನಸುಗಳಿಗೂ, ವೈಧ್ಯಕೀಯ ಭಾಂದವರಿಗೂ, ರೈತ ಬಾಂದವರಿಗೂ, ಹಾಗೂ ಶಿಕ್ಷಕ ವೃಂದದವರಿಗೂ ಮತ್ತು ಕೂಲಿ ಕಾರ್ಮಿಕರಿಗೂ ಬುದ್ದಂ,ಶರಣಂ,ಗಚ್ಛಾಮಿ ಸೇವಾ ಟ್ರಸ್ಟ್ (ರಿ) ವತಿಯಿಂದ ಶುಭಾಶಯ ಸಮರ್ಪಿಸಲಾಗಿದೆ ಜೈ ಹಿಂದ್! 75ನೇ ಗಣರಾಜ್ಯೋತ್ಸವದ ಶುಭಾಶಯಗಳು!

ವರದಿ-ಸಂಪಾದಕೀಯಾ.

Leave a Reply

Your email address will not be published. Required fields are marked *