ತಾವರಗೇರಾ ಪಟ್ಟಣದ ಪ್ರಮುಖ ಮುಖ್ಯೆ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಹಗೇದು, ಸಾರ್ವಜನಿಕರ ಜೀವನದ ಜೊತೆ ಚೆಲ್ಲಾಟ ಅಡುತ್ತಿರುವ ಜ.ಜೆ.ಎಮ್. ಅಧಿಕಾರಿಗಳು,

Spread the love

ತಾವರಗೇರಾ ಪಟ್ಟಣದ ಮುಖ್ಯ ರಸ್ತೆ ಗಂಗಾವತಿ ಟೂ ಮುದಗಲ್ ಮುಖ್ಯೆ ರಸ್ತೆ ಮತ್ತು ತಾವರಗೇರಾ ಟೂ ಸಿಂಧನೂರು ಸರ್ಕಲ್ ರಸ್ತೆಗೆ(ರೋಡ್)ಗೆ ಹಾದು ಹೋಗುವ ರಸ್ತೆ(ರೋಡ)ನ್ನು ಜೆಸಿಬಿಯಿಂದ ಆಳವಾಗಿ ತಮಗೆ ಮನಬಂದಂತೆ ಹಗೇದು, ನೀರಿನ ಸಂಪರ್ಕ ಕಲ್ಫಿಸುತ್ತಿರುವು ಕಾಮಗಾರಿಯು ಸಂಪೂರ್ಣ ಕಳಪೆ ಮತ್ತು ನಿಷ್ಕಾಳಜಿಯಿಂದ ಕಾಮಗಾರಿಯು ಸಾಗುತ್ತಿದ್ದು, ಮನ ಬಂದಂತೆ ರಸ್ತೆಯಲ್ಲಿ ಆಳವಾಗಿ ಹಗೇದು, ತಮ್ಮ ಪೈಪುಗಳನ್ನು ಅದರ ಹೊಳಗಡೆ ಜೋಡಣೆ ಮಾಡಿದ ನಂತರ ಆ ರಸ್ತೆಯ (ರೋಡ)ನಲ್ಲಿ ಅದೇ ಕಚ್ಚಾ ಮಣ್ಣನ್ನು ಮುಚ್ಚಿ ಕೈ ತೋಳೆದುಕೊಳ್ಳುತ್ತಿದ್ದಾರೆ,  ಇದರಿಂದ ಭೂಮಿಯು ಕುಸಿಯುವ ಸಾದ್ಯತೆ ಹೆಚ್ಚಿದ್ದರಿಂದ. ಈ ರಸ್ತೆಯ ಬದಿಯಲ್ಲಿ ಬಾರವಾದ ವಾಹನಗಳು ಸಿಲುಕಿ, ಅಫಘಾತವಾಗುತ್ತಿದ್ದಾವೆ ಎಂದು ಈ ಹಿಂದೆ ಅಂದರೆ ದಿನಾಂಕ ೨೩/೦೧/೨೦೨೩ ಸಂಬಂದಪಟ್ಟ ಇಲಾಖೆಗಳಿಗೆ ದೂರು ಸಲ್ಲಿಸಿದರೂ, ಇಲ್ಲಿಯವರೆಗೂ ಯಾವುದೇ ಮುನ್ನಚ್ಚರಿಕೆಯ ಕ್ರಮ ಕೈಗೊಳ್ಳದೇ ಇಂದು ಸಾರ್ವಜನಿಕರ (ಅಮಾಯಕರ) ಜೀವನದ ಜೊತೆ ಚೆಲ್ಲಾಟವಾಡಿ, ಒಂದು ಜೀವಕ್ಕೆ ಕುತ್ತು ತಂದಿರುವ ಬಗ್ಗೆ ಈ ಹಿಂದೆ ದೂರು ಸಲ್ಲಿಸಿದ್ದರು ಕ್ಯಾರೆ ಎನ್ನದ ಅಧಿಕಾರಿಗಳು. ಈ ಕಳಪೆ ಕಮಾಗಾರಿಯಿಂದ  ಒಂದು ಜೀವ ಬಲಿಯಾಗಿತ್ತು. ಇಂದು

ಈ ಕಳಪೆ ಕಾಮಗಾರಿಯಿಂದ  ಪಟ್ಟಣದ ಬಸವಣ್ಣ ಕ್ಯಾಪಿನಲ್ಲಿ ಅಂದರೆ ಸಿಂಧನೂರು ಮುಖ್ಯೆ ರಸ್ತೆಯ ಬದುವಿನಲ್ಲಿ ಎರಡು ವಿದ್ಯುತ್ ಕಂಬಗಳು ನೆಲಕ್ಕೆ ಹುರುಳಿದ್ದು, ದೇವರ ದೈಯಯಿಂದ ಯಾವುದೆ ಅಘಾತಗಳು ಆಗಿರುವುದಿಲ್ಲ. ಕೂಡಲೆ ನಿಸ್ಕಾಳಿಜಿವಹಿಸಿದ ಅಧಿಕಾರಿಗಳ ವಿರುದ್ದ ಹಾಗೂ ಈ ಕಾಮಗಾರಿ ಮಾಡುವವರ ವಿರುದ್ದ ಅಂದರೆ ಜೈಗಳು, ಹಾಗೂ ಕಾಂಟ್ರಾಕ್ಟರ್‌ಗಳು, ಮತ್ತು ಮುಖ್ಯೆಧಾರರ ಮೇಲೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ನಿಮ್ಮ ವಿರುದ್ದ ಹಾಗೂ ತಮ್ಮ ಕಾರ್ಯಾಲಯದ ವಿರುದ್ದ ಸೂಕ್ತ  ನ್ಯಾಯಾಲಯದ ಮೋರೆ ಹೋಗಬೇಕಾಗುತ್ತದೆ ಎಂದು ಪಟ್ಟಣದ F.I.T.U. ರಾಜ್ಯ ಕಾರ್ಯಕರಣಿ ಸಮಿತಿ ಸದಸ್ಯರಾದ ರಾಜಾನಾಯಕ ಮತ್ತು ಆಮ್ ಆದ್ಮಿ ಪಾರ್ಟಿಯ ತಾವರಗೇರಾ ಹೋಬಳಿ ಅಧ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡರವರು ಸಂಬಂದಪಟ್ಟ ಇಲಾಖೆಗಳ ವಿರುದ್ದ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *