ಮುದೇನೂರಿನ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಪುಷ್ಪಗುಚ್ಛ ನೀಡುವ ಮೂಲಕ  ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ…

Spread the love

ಮುದೇನೂರಿನ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಪುಷ್ಪಗುಚ್ಛ ನೀಡುವ ಮೂಲಕ  ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ

ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ  ಬುಧವಾರ ಶಾಲಾ ಪುನರಾರಂಭೋತ್ಸವ ಕಾರ್ಯಕ್ರಮ ಜರುಗಿತು. 2023 24 ನೇ ಸಾಲಿನ ಶಾಲಾ ಪ್ರಾರಂಭ ದಿನದ ಮೊದಲ ದಿನ  ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಪ್ರೌಢಶಾಲೆಯ  ಎಸ್‌ಡಿಎಂಸಿ ಅಧ್ಯಕ್ಷರು ಸದಸ್ಯರು ಹಾಗೂ ಮುಖ್ಯ ಗುರುಗಳು  ಗಣ್ಯರು ಗುಲಾಬಿ ಹೂ ಹಾಗೂ ಪುಸ್ತಕ ನೀಡುವ   ಮೂಲಕ ಪ್ರೀತಿಯಿಂದ ಸ್ವಾಗತಿಸಿಕೊಂಡರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಲೆಯ ಹಿತ ಚಿಂತಕರಾದ ಯುವ ಪತ್ರಕರ್ತರಾದ ಚಂದ್ರಶೇಖರ್ ಕುಂಬಾರ್ ಮಾತನಾಡಿ ಶಾಲೆ ಎನ್ನುವುದು ವಿದ್ಯಾ ದೇಗುಲವಿದು, ಆ ವಿದ್ಯಾ ದೇಗುಲಕ್ಕ  ನಿಷ್ಕಲ್ಮಶ ಮನಸ್ಸಿನ ವಿದ್ಯಾರ್ಥಿಗಳು ಇಂದು  ಪ್ರೌಢಶಾಲೆಗೆ ಆಗಮಿಸಿದ್ದಾರೆ, ಹೀಗಾಗಿ ಅವರಿಗೆ ಹೃತ್ಪೂರ್ವಕವಾದ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಮುದೇನೂರು ಪ್ರೌಢಶಾಲೆ ಮುಖ್ಯ ಗುರುಗಳಾದ ವಸಂತ್ ಮಾಧವ್ ಸೋಮಲಿಂಗಪ್ಪ ಗುರಿಕಾರ್ ಗುರಾಜ್ ಶಾವಿ ಇತರೆ ಶಿಕ್ಷಕರು ಮತ್ತು ಪ್ರಸಿದ್ಧರಿದ್ದರು.

ವರದಿ-ಚಂದ್ರುಶೇಖರ ಕುಂಬಾರ ಮುದೇನೂರು.

Leave a Reply

Your email address will not be published. Required fields are marked *