ದೇವದಾಸಿಯರ ಮನವಿಗೆ ಸ್ಪಂದಿಸಿದ –  ಮಾನ್ಯ ಶಾಸಕರಾದ  ಡಾ. ಶ್ರೀನಿವಾಸ್ ಎನ್. ಟಿ. 

Spread the love

ದೇವದಾಸಿಯರ ಮನವಿಗೆ ಸ್ಪಂದಿಸಿದ –  ಮಾನ್ಯ ಶಾಸಕರಾದ  ಡಾ. ಶ್ರೀನಿವಾಸ್ ಎನ್. ಟಿ. 

ಕೂಡ್ಲಿಗಿ ಮತ ಕ್ಷೇತ್ರದ  ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್.‌ ಟಿ. ಅವರು ಮೊದಲ ಬಾರಿಗೆ ಕೂಡ್ಲಿಗಿ ಪಟ್ಟಣಕ್ಕೆ ಆಗಮಸಿದ ಸಂದರ್ಭದಲ್ಲಿ ” ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ  – ಕೂಡ್ಲಿಗಿ ” ವತಿಯಿಂದ ಮಾನ್ಯರಿಗೆ ತಮ್ಮ ಮನವಿ ಮಾಡಿಕೊಂಡರು.  ಮಾನ್ಯ ಶಾಸಕರು ಅವರ  ಮನವಿಗೆ ಸ್ಪಂದಿಸಿ ಡಾ. ಶ್ರೀನಿವಾಸ್ ಎನ್.‌ಟಿ. ಅಭಿಮಾನಿ ಬಳಗಕ್ಕೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದೇವದಾಸಿ ತಾಯಿಯರ ಅಂಕಿ ಸಂಖ್ಯೆ ಅಂಶಗಳನ್ನು ಒಳಗೊಂಡಂತೆ ಪ್ರಾದೇಶಿಕ ಹಾಗೂ ಸಾಮುದಾಯಿಕವಾರು  ಸಮಗ್ರವಾಗಿ ಮಾಹಿತಿಯನ್ನು ಸಂಗ್ರಹಿಸಲು ಸೂಚಿಸಿದರು.  ಹೀಗಾಗಿ ಮರುದಿನವೇ ಹೆಚ್ಚೆತ್ತುಕೊಂಡ ಡಾ. ಶ್ರೀನಿವಾಸ್ ಎನ್. ಟಿ.‌ ಅಭಿಮಾನಿ ಬಳಗದವತಿಯಿಂದ ಡಾ. ಸಿದ್ದೇಶ ಕಾತ್ರಿಕೆಹಟ್ಟಿ ಹಾಗೂ ಮಾರಪ್ಪ ನರಸಿಂಹಗಿರಿ  ಅವರು ಸೇರಿ ವಿವಿಧ ವಿದ್ವಾಂಸರ ಮಾರ್ಗದರ್ಶನ ಹಾಗೂ ಸಂಘಟನೆಯ ಕಾರರ ಸಹಕಾರದಿಂದ ಈ ದಿನ ಸಂಜೆ ಕೂಡ್ಲಿಗಿ ಪಟ್ಟಣದ 12 ಹಾಗೂ 14 ನೇ ವಾಡ್೯ ಕೆಲವು   ದೇವದಾಸಿ ತಾಯಿಯರನ್ನು  ಭೇಟಿ ಮಾಡಿ ಸಮೀಕ್ಷೆ ಮಾಡಲು ಪ್ರಾರಂಭಿಸಿದರು.  ದೇವದಾಸಿ ಮಹಿಳೆಯರಾದ ರತ್ನಮ್ಮ ,  ಗೌರಮ್ಮ ಜಿ, ಸುಮ ಎಂ, ಗೀತಾ ಬಿ , ಅವರು ಇದೇ ಮೊದಲ ಬಾರಿಗೆ ತಮ್ಮ ಬಗ್ಗೆ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು  ಸಮೀಕ್ಷೆ ಮಾಡಿಸುತ್ತಿರುವುದನ್ನು  ಕಂಡು ಸಂತಸ ವ್ಯಕ್ತಪಡಿಸಿದರು. 🌱💐🙏.

ವರದಿ-ವಿ.ಜಿ.ವೃಷಭೇಂದ್ರ ಕೂಡ್ಲಿಗಿ-

Leave a Reply

Your email address will not be published. Required fields are marked *