ಹುರುಳಿಹಾಳು:ಬೃಹತ್ ಆರೋಗ್ಯ ಶಿಬಿರ, 4000ಜನರಿಗೆ ತಾಸಣೆ, 480ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ.

Spread the love

ಹುರುಳಿಹಾಳು:ಬೃಹತ್ ಆರೋಗ್ಯ ಶಿಬಿರ, 4000ಜನರಿಗೆ ತಾಸಣೆ, 480ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ.

ವಿಜಯನಗರ  ಜಿಲ್ಲೆ ಕೂಡ್ಲಿಗಿ ತಾಲೂಕು, ಹುರುಳಿಹಾಳು ಗ್ರಾಮದಲ್ಲಿ ಮಾ26ರಂದು. ಡಾ,ಎನ್.ಟಿ.ಶ್ರೀನಿವಾಸರವರ ಅಭಿಮಾನಿಗಳ ಬಳಗದಿಂದ ಆಯೋಜಿಸಲಾಗಿದ್ದ, ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ. ಗುಂಡುಮುಣುಗು ಹಾಗೂ ಹೂಡೇಂ ಜಿಲ್ಲ‍ಾಪಂಚಾಯ್ತಿ ವ್ಯಾಪ್ತಿಯ, ಎಲ್ಲಾ ಗ್ರಾಮಗಳ ಗ್ರಾಮಸ್ಥರು ಭಾಗಿಯಾಗಿದ್ದರು. ಹಾಗೂ ತಾಲೂಕಿನ ವಿವಿದೆಡೆಯಿಂದ ಆಗಮಿಸಿದ್ದ4000ಕ್ಕೂ ಹೆಚ್ಚು ಜನರು, ವಿವಿದ ಅನಾರೋಗ್ಯ ಸಮಸ್ಯೆಗಳ ನಿವಾರಣೆಗೆ ತಪಾಸಣೆ ಮಾಡಿಸಿಕೊಂಡರು. ಅದರಲ್ಲಿ 480ಜನರು ಕಣ್ಣಿನ ಶಸ್ತ್ರಚಿಕಿತ್ಸೆಗೆ ಸೂಚಿಸಲಾಗಿದ್ದು, ಅವರೆಲ್ಲರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಹಾಗೂ ಔಷಧಿಯ ವ್ಯವಸ್ಥೆಯನ್ನು. ಸಮಾಜ ಸೇವಕ ಹಾಗೂ ನೇತ್ರ ತಜ್ಞರಾದ, ಡಾ,ಎನ್.ಟಿ.ಶ್ರೀನಿವಾಸರು ಮಾಡಿದ್ದಾರೆ. ದಿವಂಗತ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣನರ ಸ್ಮರಣಾರ್ಥವಾಗಿ, ಸಮಾಜ ಸೇವಕ ಹಾಗೂ ನೇತ್ರ ತಜ್ಞರಾದ ಎನ್.ಟಿ.ಶ್ರೀನಿವಾಸರ ಅಭಿಮಾನಿಗಳ ಬಳಗದಿಂದ ಶಿಬಿರ ಆಯೋಜಿಸಲಾಗಿತ್ತು. ಶಿಬರವನ್ನು ಶ್ರೀಮಾ  ನಿರಂಜನಾ ಪ್ರ ಬಸವಲಿಂಗ ಸ್ವಾಮಿ, ಸಿದ್ದಯ್ಯನ ಕೋಟೆ ರವರು ಉದ್ಘಾಟಿಸಿದರು. ವಿವಿದ ಖಾಯಿಲೆಗಳ ತಜ್ಞವೈದ್ಯರು, ವಿವಿದ ಜನಪ್ರತಿನಿಧಿಗಳು, ವಿವಿದ ಗಣ್ಯಮಾನ್ಯರು, ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿದ ಗ್ರಾಮಗಳ ಮುಖಂಡರು ಕಾರ್ಯಕ್ರಮದ ವೇದಿಕೆಯಲ್ಲಿದ್ದರು. ಶಿಬಿರದಲ್ಲಿ ಕಣ್ಣಿನ ಸಮಸ್ಯೆ ಸೇರಿದಂತೆ ಬಹುತೇಕ ಖಾಯಿಲೆಗಳಿಗೆ, ಉಚಿತ ತಪಾಸಣೆ ಹಾಗೂ ಉಚಿತ ಔಷಧ ವ್ಯವಸ್ಥೆಯನ್ನು ಶಿಬಿರದಲ್ಲಿ ಮಾಡಲಾಗಿತ್ತು. ಕಣ್ಣಿನ ಪೊರೆಗೆ ಚಿಕಿತ್ಸೆ ಸಿದ್ಧತೆ, ಮಹಿಳೆಯರ ವಿಶೇಷ ಖಾಯಿಲೆಗಳಿಗೆ ಸಲಹೆ, ತಪಾಸಣೆ ಮತ್ತು ಔಷಧಿ ವಿತರಣೆ, ಮಕ್ಕಳ ಖಾಯಿಲೆಗಳು, ಹೃದ್ರೋಗ , ಸಕ್ಕರೆ ಖಾಯಿಲೆ, ಬೀಪಿ, ಅಸ್ತಮಾ, ಅಲರ್ಜಿ, ಹರ್ಣಿಯಾ, ಪಿತ್ತಕೋಶ, ಕಿಡ್ನಿ ಕಲ್ಲು , ಫೈಲ್ಸ್ , ಮಲಬದ್ಧತೆ, ಹೊಟ್ಟೆ ನೋವು , ಆಲ್ಸರ್, ಗ್ಯಾಸ್ಟಿಕ್ , ಮೂಳೆ ಸಮೇತ ಕೀಲು ನೋವು , ಬೆನ್ನು ನೋವು , ಖಾಯಿಲೆಗಳಿಗೆ ವೈದ್ಯರು ತಪಾಸಣೆ ಮಾಡಿದರು. ಇನ್ನಿತರ ಅನೇಕ ಖಾಯಿಲೆಗಳಿಗೆ ನುರಿತ ತಜ್ಞರಾದ ಡಾ,ಎ‌ನ್.ಟಿ. ಶ್ರೀನಿವಾಸ್, ಡಾ,ಪುಷ್ಪಾ, ಡಾ,ತಿಮ್ಮರಾಜು, ಡಾ,ರಾಜು ಎಸ್, ಡಾ,ಪ್ರವೀಣ, ಡಾ,ಕುಮಾರ್ ನಾಯಕ್, ಡಾ,ಸುರೇಶ್, ಡಾ, ರಾಘವೇಂದ್ರ, ಡಾ,ರವಿ ಜಿ.‌ಎಸ್, ಡಾ,ಸತೀಶ್ ಕುಮಾರ್. ಡಾ,ಆಕಾಶ್, ಡಾ,ರಾಘವೇಂದ್ರ ಹಾಗೂ  ಸಿಬ್ಬಂದಿಯವರು ಕರ್ಥವ್ಯ ಪ್ರಜ್ಞೆಯಿಂದ  ಶಿಬಿರ ಯಶಸ್ವಿಗೊಳಿಸಿದರು. ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದ ಸರ್ವರಿಗೂ, ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಶಾಸಕ ದಿವಂತ ಎನ್.ಟಿ.ಬೊಮ್ಮಣ್ಣನವರ ಸ್ನೇಹಿತರು, ಹಾಗೂ ಅಭಿಮಾನಿಗಳು. ನೇತ್ರತಜ್ಞ ವೈದ್ಯ ಎನ್.ಟಿ.ಶ್ರೀನಿವಾಸರವರ ಸ್ನೇಹಿತರು, ಹಾಗೂ ಅಭಿಮಾನಿಗಳು. ಸಮಾಜ ಸೇವಕ ಎನ್.ಟಿ.ತಮ್ಮಣ್ಣನವರ ಸ್ನೇಹಿತರು ಹಾಗೂ ಅಭಿಮಾನಿಗಳು. ಹುರುಳಿ ಹಾಳು ಗ್ರಾಮಸ್ಥರು, ಹಾಗೂ ನೆರೆ ಹೊರೆ ಗ್ರಾಮಗಳ ಪ್ರಮುಖರು. ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ, ಸಕ್ರೀಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

ವರದಿ – ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.

Leave a Reply

Your email address will not be published. Required fields are marked *