ಜುಮಲಾಪೂರ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು……

Spread the love

ಜುಮಲಾಪೂರ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು……

ಕುಷ್ಟಗಿ ತಾಲ್ಲೂಕಿನ ಜುಮಲಾಪೂರ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು ಸೋಮವಾರ ರಾತ್ರಿಯಿಂದ ಪ್ರಾರಂಭಗೊಂಡ ಶ್ರೀ ದುರ್ಗಾದೇವಿ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಹರಕೆ ಹೊತ್ತಿದ್ದ ಭಕ್ತರು ರಾತ್ರಿಯಿಂದ ದಿಡನಮಸ್ಕಾರ ವಿವಿಧ ಧಾರ್ಮಿಕ  ಕಾರ್ಯಕ್ರಮಗಳು ಕೈಗೊಂಡರು ತದನಂತರದಲ್ಲಿ  ಪ್ರತಿ ವರ್ಷದ ವಾಡಿಕೆಯಂತೆ ಸಕಲ ವಾದ್ಯಗಳೊಂದಿಗೆ ಶ್ರೀ ದುರ್ಗಾದೇವಿ ಪಲ್ಲಕ್ಕಿ ಹೋತ್ತು  ಗಂಗಾ ಸ್ಥಳಕ್ಕೆ ಹೋಗಿ ಗಂಗಾ ಸ್ನಾನ ಮುಗಿಸಿಕೊಂಡು ಬಂದ ನಂತರವೇ  ಪಲ್ಲಕ್ಕಿ ದೇವಸ್ಥಾನದ ಸುತ್ತಲೂ ಪ್ರದಕ್ಷಣೆ ಹಾಕಿ ಶ್ರೀ ದುರ್ಗಾದೇವಿ ಪೂಜೆ ಪ್ರಾರಂಭ ಮಾಡಿದರು ಬೆಳಗಿನ ಜಾವದಲ್ಲಿ ಶ್ರೀ ದುರ್ಗಾದೇವಿಗೆ ನೈವೇದ್ಯ ಗಡಗಿಯಲ್ಲಿ (ಅನ್ನ) ಪ್ರಸಾದವನ್ನು ದೆವಾಸ್ಥಾನದ ಮುಂಭಾಗದಲ್ಲಿ ಮಾಡಲಾಯಿತು. ತದನಂತರದಲ್ಲಿ ಶ್ರೀ ದುರ್ಗಾದೇವಿ ಪೂಜಾರಿಗಳು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೆಂಕಿಯಲ್ಲಿ ನಡೆದುಕೊಂಡು ಹೋಗಿ ಹೆಳಿಕೆ ಹೆಳಿದರು ಅಂದು ಸಾಯಂಕಾಲ 5 ಘಂಟೆಗೆ ಸಾವಿರಾರು ಭಕ್ತರನ್ನೊಳಗೊಂಡಂತೆ  ವಿಜೃಂಭಣೆಯಿಂದ ಶ್ರೀ ದುರ್ಗಾದೇವಿ ಉತ್ಸವ ಜರುಗಿತು  ಉತ್ಸವದಲ್ಲಿ ಡೊಳ್ಳು ಕುಣಿತದೊಂದಿಗೆ ಮಂಗಳಮುಖಿಯರು ತಲೆ ಮೇಲೆ ಬಿಂದಿಗೆ ಇಟ್ಟುಕೊಂಡು ನೃತ್ಯ ಮಾಡಿದರು ಸಕಲ ವಾದ್ಯಗಳೊಂದಿಗೆ ಯುವಕರು ಹೆಜ್ಜೆ ಹಾಕಿದರು. ಈ ಜಾತ್ರೆಯಲ್ಲಿ ಊರಿನ ಯುವಕರು ಮಹಿಳೆಯರು ಎಲ್ಲರೂ ಸೇರಿ ವಿಜೃಂಭಣೆಯಿಂದ ಜಾತ್ರೆ ಸಡಗರದಲ್ಲಿ ಪಾಲ್ಗೊಂಡು ತಾಯಿಯ ಜಾತ್ರೆಯನ್ನು ಕಣ್ತುಂಬಿಕೊಂಡರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *