ಅಸಮಾನತೆ ಸೃಷ್ಠಿಸಿ ಮನುಷ್ಯರನ್ನು ಕೊಲ್ಲಲಾಗುತ್ತಿದೆ: ಪ್ರೊ. ರಾಜೇಂದ್ರ ಚೆನ್ನಿ.

Spread the love

ಅಸಮಾನತೆ ಸೃಷ್ಠಿಸಿ ಮನುಷ್ಯರನ್ನು ಕೊಲ್ಲಲಾಗುತ್ತಿದೆ: ಪ್ರೊ. ರಾಜೇಂದ್ರ ಚೆನ್ನಿ.

ದಾಂಡೇಲಿ: ಜಗತ್ತಿನಲ್ಲಿಯೇ ನಮ್ಮ ಭಾರತದ ಜಿಡಿಪಿ ದಾಖಲೆಯೇ ಸೃಷ್ಠಿಸಿದ್ದೇವೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೇಳುತ್ತವೆ. ಅಲ್ಲದೆ ಈ ಹೇಳಿಕೆಯನ್ನು ಪತ್ರಿಕೆಗಳಲ್ಲಿ ಯಾವುದೇ ವಿಮರ್ಶೆ ಇಲ್ಲದೆ ಪ್ರಕಟಿಸಿ ನಿಜವೆಂದು ಜನರನ್ನು ನಂಬಿಸುವ ಕೆಲಸ ಮಾಡುತ್ತಿವೆ. ಇಷ್ಟು ಅಭಿವೃದ್ಧಿ ಯ ವೇಗ ನಿಂವಾಗಿ ಇದಿಯಾ  ಪ್ರಸ್ನಿಸಬೇಕಿದೆ. ನಿಜವಾಗಿ ನಮ್ಮ ದೇಶದ ಜಿಡಿಪಿ ಪ್ರಮಾಣ ಬೆಳೆದಿದೆ ಅನ್ನೋದು ನಿಜವಾಗಿದ್ರೆ ಯಾಕೆ ನಮ್ಮ ಯುವಜನ ಉದ್ಯೋಗ ಸೃಷ್ಠಿ ಮಾಡೋಕೆ ಆಗುತ್ತಿಲ್ಲಾ, ಯಾಕೆ ಹಸಿವಿನಿಂದ ಮಕ್ಕಳು ಸಾಯುತ್ತಿದ್ದಾರೆ, ಯಾಕೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿಲ್ಲ ಎಂದು  ಪ್ರಶ್ನಿಸಬೇಕು ಎಂದು ಪ್ರೊ. ರಾಜೇಂದ್ರ ಚೆನ್ನಿ ಅವರು ಹೇಳಿದರು. ಶನಿವಾರದಂದು ದಾಂಡೇಲಿ ಪಟ್ಟಣದ ಹಾರ್ನ್ ಬಿಲ್ ಭವನದಲ್ಲಿ ನಡೆದ ಡಿ ವೈ ಎಫ್ ಐ ನ  ರಾಜ್ಯಮಟ್ಟದ ಎರಡು ದಿನಗಳ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭೂಮಿ ಮೇಲೆ ಹುಟ್ಟಿ ಬದುಕಿ ಬಾಳಬೇಕಿದ್ದ ಮಾನವರನ್ನು  ಅಸಮಾನತೆಯಿಂದಾಗಿ ಕೊಲೆ ಮಾಡಲಾಗುತ್ತಿದೆ. ಸ್ವಾತಂತ್ರ ನಂತರದಿಂದ ಇಲ್ಲಿವರೆಗೆ ಆಳಿದ ಸರ್ಕಾರಗಳು ಬಂಡವಾಳಿಗರ ಬಂಟರಾಗಿ ಕೆಲಸ ಮಾಡುತ್ತೇವೆ. ದೇಶದ ಸಂಪತ್ತು ಕೆಲವೇ ಕೆಲವು ವ್ಯಕ್ತಿಗಳ ಕೈಯಲ್ಲಿ ಶೇಖರಣೆಯಾಗುತ್ತಿದೆ.  ಇದರ ಪರಿಣಾಮ ನಮ್ಮ ದೇಶದ ಜನರು ಹಸಿವು ಬಡತನ ನಿರುದ್ಯೋಗ, ರೋಗರುಜಿನಗಳಿಂದ ಸಾಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿ ಪಾಳ್ಯ ಮಾತನಾಡಿ, ಆಳುವ ಸರ್ಕಾರಗಳು ಯುವಜನತೆಯನ್ನು  ಇಂದು ಜಾತಿ, ಧರ್ಮ, ಭಾಷೆ, ಪ್ರಾಂತ್ಯ ಗಳಂತಹ ಭಾವನಾತ್ಮಕ ವಿಚಾರಗಳ ಮೇಲೆ ಹೊಡೆದಾಟಕ್ಕೆ ಇಳಿಸಿ ನಿಜವಾದ ಬದುಕಿನ ಪ್ರಶ್ನೆಗಳನ್ನು ಮರೆಮಾಚುತ್ತಿವೆ ಎಂದು ಸರ್ಕಾಗಳ ಧೋರಣೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಐ ರಾಜ್ಯ ಕಾರ್ಯದರ್ಶಿ, ಬಸವರಾಜ್ ಪೂಜಾರ್ ಅವರು ಪ್ರಸ್ತಾವಿಕ ವಾಗಿ ಮಾತನಾಡಿದರು. ಗಣೇಶ್ ರಾಥೋಡ್ ನಿರೂಪಿಸಿದರು, ಜಿಲ್ಲಾಧ್ಯಕ್ಷ ಡಿ. ಸ್ಯಾಮ್ ಸನ್, ಇಮ್ರಾನ್ ಖಾನ್,  ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರು ಹಾಗೂ ಸಿಐಟಿಯು ಮುಖಂಡ ಸಲಿಂ ಸಯ್ಯದ್, ಡಬ್ಲ್ಯೂಸಿಪಿಎಂನ ಉಪಾಧ್ಯಕ್ಷ ಜಗದೀಶ್ ನಾಯ್ಕ, ಡಿವೈಎಫ್ ಐ ರಾಜ್ಯ ಮುಖಂಡರು ಅಶಾ ಬೋಳಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *