ಪಂಚರತ್ನ ರಥಯಾತ್ರೆ ಅದ್ದೂರಿಯಾಗಿ ಭರಮಾಡಿಕೊಂಡ ತಾವರಗೇರಾ ಹೋಬಳಿಯ ಜನತೆ.

Spread the love

ಪಂಚರತ್ನ ರಥಯಾತ್ರೆ ಅದ್ದೂರಿಯಾಗಿ ಭರಮಾಡಿಕೊಂಡ ತಾವರಗೇರಾ ಹೋಬಳಿಯ ಜನತೆ.

ಈಗಾಗಲೆ ನಡೆದ ಪಂಚ ರತ್ನ ರಥ ಯಾತ್ರೆಯು ಕೊಪ್ಪಳ ಜಿಲ್ಲೆಯ ಕುಟಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಸಿಂಧನೂರು ಸರ್ಕಲ್ ನಲ್ಲಿ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮೀಯವರ ಪಂಚ ರತ್ನ ರಥ ಯಾತ್ರೆಗೆ ಅದ್ದೂರಿ ಸ್ವಾಗತದಿಂದ ಭರಮಾಡಿಕೊಂಡ ಜನತೆ. ರಾಜ್ಯ ಚುನಾವಣಾ ವರ್ಷವನ್ನು ನೋಡುತ್ತಿದೆ. ವಿಪಕ್ಷ ಕಾಂಗ್ರೆಸ್‌ ಆಗಲೇ ಮತದಾರರ ಮನವೊಲಿಸಲು ಭಾರತ್‌ ಐಕ್ಯ ಯಾತ್ರೆ, ಬೃಹತ್‌ ಸಮಾವೇಶಗಳನ್ನು ಒಂದಾದ ಮೇಲೊಂದರಂತೆ ನಡೆಸುತ್ತಿದೆ. ಆಡಳಿತಾರೂಢ ಬಿಜೆಪಿಯೂ ಜನಸಂಕಲ್ಪ ಯಾತ್ರೆ ಶುರುಮಾಡಿಕೊಂಡಿದೆ. ಜೆಡಿಎಸ್‌ ಕೂಡ ಹಿಂದೆ ಬಿದ್ದಿಲ್ಲ. ʻಪಂಚರತ್ನʼ ಅಜೆಂಡಾದಲ್ಲಿ ಸಮರ ಶುರುಮಾಡಿದೆ. ವಿಧಾನಸಭಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌ ಜತೆಗೆ ಜೆಡಿಎಸ್‌ ಕೂಡ ಸಜ್ಜಾಗಿದೆ. ಮತದಾರರ ಮನವೊಲಿಸುವ ಪ್ರಯತ್ನದಲ್ಲಿ ರಥಯಾತ್ರೆಗಳು, ಬೃಹತ್‌ ಸಮಾವೇಶಗಳು ಒಂದಾದ ಮೇಲೆ ಒಂದರಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಆಯೋಜನೆ ಆಗುತ್ತಿವೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರ ಚುಕ್ಕಾಣಿ ಹಿಡಿಯುವುದಷ್ಟೆ ಮುಖ್ಯ ಗುರಿ, ಉದ್ದೇಶ. ವಿಪಕ್ಷ ಕಾಂಗ್ರೆಸ್‌ ಆಗಲೇ ಮತದಾರರ ಮನವೊಲಿಸಲು ಭಾರತ್‌ ಐಕ್ಯ ಯಾತ್ರೆ, ಬೃಹತ್‌ ಸಮಾವೇಶಗಳನ್ನು ಒಂದಾದ ಮೇಲೊಂದರಂತೆ ನಡೆಸುತ್ತಿದೆ. ಆಡಳಿತಾರೂಢ ಬಿಜೆಪಿಯೂ ಜನಸಂಕಲ್ಪ ಯಾತ್ರೆ ಶುರುಮಾಡಿಕೊಂಡಿದೆ. ಜೆಡಿಎಸ್‌ ಕೂಡ ಹಿಂದೆ ಬಿದ್ದಿಲ್ಲ. ʻಪಂಚರತ್ʼ ಅಜೆಂಡಾದಲ್ಲಿ ಸಮರ ಶುರುಮಾಡಿದೆ. 2023ರ ವಿಧಾ​ನ​ಸಭಾ ಚುನಾ​ವಣೆಯ ಪ್ರಚಾರ ತಂತ್ರದ ಭಾಗ​ವಾಗಿ ಜೆಡಿ​ಎಸ್‌ ನಡೆ​ಸು​ತ್ತಿ​ರುವ ‘ಪಂಚ​ರತ್ನ ರಥ​ಯಾತ್ರೆ’ ವಿಭಿನ್ನ ಬಗೆಯ ಬೃಹತ್‌ ಗಾತ್ರದ ಹಾರ​ಗಳ ಮೂಲಕ ಗಮನ ಸೆಳೆ​ಯು​ತ್ತಿದೆ 32 ದಿನ, ಎಚ್‌ಡಿಕೆಗೆ 500 ಕ್ರೇನ್‌ ಹಾರ! ಪಂಚರತ್ನ ಯಾತ್ರೆ ವೇಳೆ ಕಬ್ಬು, ಭತ್ತ, ರಾಗಿ, ಹಣ್ಣು, ಸೊಪ್ಪು ಸೇರಿ ಹಲವು ಬಗೆಯ ಹಾರ. ಜೆಡಿಎಸ್​​​ ಪಂಚರತ್ನ ಜನಸಂಪರ್ಕ ರಥಯಾತ್ರೆ ನವೆಂಬರ್ 1ರಿಂದ ಆರಂಭವಾಗಿದ್ದು ಮೊದಲ ಹಂತದ ಪಂಚರತ್ನ ರಥಯಾತ್ರೆಯ ಪಟ್ಟಿ ಬಿಡುಗಡೆ ಆಗಿದೆ. ನ.1ರಿಂದ ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ರಥಯಾತ್ರೆ ಆರಂಭವಾಗಲಿದೆ. ಮೊದಲ ಹಂತದಲ್ಲಿ 35 ದಿನಗಳ ಕಾಲ ರಥಯಾತ್ರೆ ನಡೆಯಲಿದೆ. ಹಳೇ ಮೈಸೂರು ಭಾಗಕ್ಕೆ ಮಾತ್ರ ಜೆಡಿಎಸ್ ಸೀಮಿತವಾಗಲ್ಲ. ರಾಜ್ಯದೆಲ್ಲೆಡೆ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ ಸಂಘಟನೆ‌ ಆರಂಭಿಸಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಅಸ್ತಿತ್ವ ಏನು ಎಂಬುದನ್ನು ಈ‌ ಕಾರ್ಯಕ್ರಮಗಳ ಮೂಲಕ ತೋರಿಸಲಾಗುತ್ತದೆ ಎಂದು ಎಚ್‌.ಡಿ.ಕುಮಾರ ಸ್ವಾಮಿ ಇತ್ತೀಚೆಗೆ ಹೇಳಿದ್ದರು.

ತೆಲಂಗಾಣದಲ್ಲಿ ಈಗ “ಮಿಶನ್ ಭಗೀರಥ’ ಎನ್ನುವ ಯೋಜನೆ ಜಾರಿ ಮಾಡಿದ್ದು, ಮನೆ-ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ರೈತರಿಗೆ ಪ್ರತೀ ಎಕರೆಗ 10 ಸಾವಿರದಂತೆ ಎಷ್ಟು ಎಕ್ರೆ ಇದ್ದರೂ ಅಷ್ಟು ಹಣ ಹಾಕಲಾಗುತ್ತಿದೆ. ಜತೆಗೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಧನ ನೀಡಲಾಗುತ್ತಿದೆ. ಈ ಎಲ್ಲ ಸೃಜನೆ ಮಾಡುತ್ತಿದ್ದು, ದಲಿತ ಯುವಕರಿಗೆ ಆರ್ಥಿಕ ಸಹಾಯ ಯೋಜನೆಗಳ ಬಗ್ಗೆ ವಿವರಿಸಿದ ಎಚ್ಡಿಕೆ ಜೆಡಿಎಸ್ ಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನೀಡಿದ್ದೆ ತೆಲಂಗಾಣದ “ಮಿಶನ್ ಭಗೀರಥ’ ರೀತಿಯಲ್ಲೇ ಯೋಜನೆ ಜಾರಿ ಮಾಡಲಾಗುವುದು. ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸಲಾಗುವುದು. ರೈತರಿಗೆ ಪ್ರತಿ ಎಕರೆಗೆ 10 ಸಾವಿರದಂತೆ ಒಂದು ಲಕ್ಷ ರೂ.ವರೆಗೆ ಹಣ ಹಾಕಲಾಗುವುದು. ವೃದ್ಧರಿಗೆ 5000 ಸಾವಿರ ರೂ., 2500 ರೂ. ವಿಧವಾ ವೇತನ ಜಾರಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಹೈಟೆಕ್ ಕನ್ನಡ ಇಂಗ್ಲಿಷ್ ಮಾಧ್ಯಮ ಶಾಲೆಗಳು, ಪಂಚಾಯತ್ಗೊಂದು ಆಸ್ಪತ್ರೆ, ಗ್ರಾಮದಲ್ಲೇ ಯುವಕರಿಗೆ ಉದ್ಯೋಗ ನೀಡುವುದಾಗಿ ಘೋಷಿಸುತ್ತಿದ್ದಾರೆ. ಜತೆಗೆ ಎಲ್ಲದಕ್ಕೂ ಕೇಂದ್ರ ಸರಕಾರದ ಮುಂದೆ ನಡುಬಗ್ಗಿಸಿ ನಿಲ್ಲುವುದನ್ನು ತಪ್ಪಿಸುವೆ. ಏನು ಬೇಕು ಕೇಳಿ ನಮ್ಮ ಸರಕಾರವೇ ನಿಮಗೆ ಮಾಡಿಕೊಡುತ್ತದೆ ಎಂದರು.

 

ಏನಿದು ಪಂಚರತ್ನ ಯೋಜನೆಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪಂಚರತ್ನ ಯೋಜನೆಗಳೇ ಪರಿಹಾರ ಎಂಬುದು ಜೆಡಿಎಸ್‌ ಐದು ಅಂಶಗಳ ಕಾರ್ಯಸೂಚಿ. 1. ಶಿಕ್ಷಣವೇ ಆಧುನಿಕ ಶಕ್ತಿ 2. ಆರೋಗ್ಯವೇ ಸಂಪತ್ತು 3. ರೈತ ಚೈತನ್ಯ 4. ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ 5. ವಸತಿಯ ಆಸರೆ

ಕ್ಷೇತ್ರವಾರು ಅಭ್ಯರ್ಥಿಗಳ ಘೋಷಣೆ ? ವಿಧಾನಸಭೆ ಚುನಾವಣೆ ಘೋಷಣೆಗೂ ಮೊದಲೇ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕೆಲಸವನ್ನು ಜೆಡಿಎಸ್‌ ಮಾಡುತ್ತಿದೆ. ಮೊದಲ ಹಂತದಲ್ಲಿ 120 ವಿಧಾನಸಭಾ ಕ್ಷೇತ್ರಗಳ‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮಾಜಿ ಮುಖ್ಯಮಂತ್ರಿಯಾದ ಎಹ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ಪ್ರಮುಖ ಮುಖಂಡರ ದಂಡು ತಾವರಗೇರಾ ಪಟ್ಟಣದಿಂದ ಹಮ್ಮಿಕೊಂಡಿದ್ದ ಬೈಕ್ ರಾಲಿಯಲ್ಲಿ ಭಾಗವಹಿಸಲಿದ್ದಾರೆ. ತದ ನಂತರ ಕುಷ್ಟಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಪಕ್ಷಗಳ ಆಡಳಿತ ಬೇಸತ್ತಿರುವ ಕ್ಷೇತ್ರದ ಜನತೆ ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ. ಈಗಾಗಲೇ ಕ್ಷೇತ್ರದ ತುಂಬೆಲ್ಲಾ ಸಂಚರಿಸಿ, ಜನತೆಯ ನಾಡಿಮಿಡಿತ ಅರಿಯಲಾಗಿದೆ ಎಂದು ತುಕರಾಮ್ ಸೂರ್ವೆ ತಿಳಿಸಿದ್ದಾರೆ. ಈ ಬಾರಿ ಕ್ಷೇತ್ರದ ಮತದಾರ ಪ್ರಭುಗಳು ಜೆಡಿಎಸ್ ಪಕ್ಷಕ್ಕೆ ಅಧಿಕಾರ ನೀಡಲಿದ್ದಾರೆ ಎಂಬುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ. ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಮ್, ಮಾಜಿ ಸಚಿವರಾದ ಬಂಡೆಪ್ಪ ಕಾಶಂಪೂರ, ವೆಂಕಟರಾವ್ ನಾಡಗೌಡ ಸೇರಿದಂತೆ ಪ್ರಮುಖ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸದ್ಯ ನಮ್ಮ ತಾವರಗೇರಾ ಪಟ್ಟಣದ ಜನತೆ ಹಾಗೂ ತಾವರಗೇರಾ ಹೋಬಳಿಯ ಜನತೆಯು ಸಿಂಧನೂರು ಸರ್ಕಲ್ ನಲ್ಲಿ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮೀಯವರ ಪಂಚ ರತ್ನ ರಥ ಯಾತ್ರೆಗೆ ಅದ್ದೂರಿ ಸ್ವಾಗತದಿಂದ ಭರಮಾಡಿಕೊಳ್ಳುವ ಸಂದರ್ಭದಲ್ಲಿ ಶಾಂತ ರೀತಿಯಿಂದ ಪಟ್ಟಣದ ಪೊಲೀಸ್ ಠಾಣೆಯ ಅಧಿಕಾರಿಗಳ ವರ್ಗಾ ಕಾರ್ಯಾರೂಪದಲ್ಲಿ ತೊಡಗಿತ್ತು.

ವರದಿ – ಉಪಳೇಶ ವಿ.ನಾರಿನಾಳ.

Leave a Reply

Your email address will not be published. Required fields are marked *