ಸಕ್ಷಮ ಜಿಲ್ಲಾ ಘಟಕ. ಶಿವಮೊಗ್ಗ ಜಿಲ್ಲೆಯ ವತಿಯಿಂದ ವಿಶೇಷಚೇತನರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.

Spread the love

ಸಕ್ಷಮ ಜಿಲ್ಲಾ ಘಟಕ. ಶಿವಮೊಗ್ಗ ಜಿಲ್ಲೆಯ ವತಿಯಿಂದ ವಿಶೇಷಚೇತನರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.

01/12/2022 ಗುರುವಾರ ಇವತ್ತು ಗ್ರಾಮ ಪಂಚಾಯಿತಿ ಕಾರ್ಯಾಲಯ. ತುಪ್ಪೂರು ಶಿವಮೊಗ್ಗ(ತಾ) ಹಾಗೂ ಸಕ್ಷಮ ಜಿಲ್ಲಾ ಘಟಕ. ಶಿವಮೊಗ್ಗ ಜಿಲ್ಲೆಯ ವತಿಯಿಂದ ವಿಶೇಷಚೇತನರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಸಕ್ಷಮ ಶಿವಮೊಗ್ಗದ ವತಿಯಿಂದ ಅರ್ಹ ವಿಶೇಷಚೇತನರಿಗೆ ತ್ರಿಚಕ್ರ ಸೈಕಲ್ ಹಾಗೂ UDID ಕಾರ್ಡ್ ಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು. ಸಕ್ಷಮ ಶಿವಮೊಗ್ಗ ಇವರು ವಿಶೇಷಚೇತನರ 21 ವಿಧಗಳ ನ್ಯೂನತೆಗಳ ಬಗ್ಗೆ ಹಾಗೂ  ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಪಂಚಾಯಿತಿ ಉಪಧ್ಯಾಕ್ಷರು ಅನಿತಾ ಅವರು ಪಂಚಾಯಿತಿಯ ವ್ಯಾಪ್ತಿಯಲ್ಲಿ ಇರುವಂತಹ ಸೌಲಭ್ಯ ಕೊಡಿಸುವಲ್ಲಿ ಸಹಕಾರಿಯಾಗುತ್ತೇವೆ ಎಂದು ಭರವಸೆಯನ್ನು ನೀಡಿದರು. ಪ್ರೇಮ ಶ್ರೀಧರ್ ಶೇಟ್ PDO ಅವರು ನಮ್ಮ ಪಂಚಾಯಿತಿಯಲ್ಲಿ ವ್ಯಾಪ್ತಿಯಲ್ಲಿ ಇರುವ 5’/. ಅನುಧಾನವನ್ನು ಬಳಸಿಕೊಳ್ಳಲು ವಿಶೇಷಚೇತನರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಪಂಚಾಯಿತಿಯ ಸದಸ್ಯರುಗಳು ಕೃಷ್ಣಮೂರ್ತಿ,ರೇವತಿ ಹಾಗೂ ಪಂಚಾಯಿತಿಯ VRW ನೈತ್ಯಾ ಅವರು ಇದ್ದರು.

ವರದಿ – ಉಪಳೇಶ ವಿ.ನಾರಿನಾಳ

Leave a Reply

Your email address will not be published. Required fields are marked *