ಐಕ್ಯತಾ ನಡಿಗೆ ಮತ್ತು ತೃತೀಯ ಜಿಲ್ಲಾ ಸಮಾವೇಶ ಶಾಂತಲಾ ಸಭಾಂಗಣ,ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ.ಶಿವಮೊಗ್ಗ..

Spread the love

ಐಕ್ಯತಾ ನಡಿಗೆ ಮತ್ತು ತೃತೀಯ ಜಿಲ್ಲಾ ಸಮಾವೇಶ ಶಾಂತಲಾ ಸಭಾಂಗಣ,ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ.ಶಿವಮೊಗ್ಗ..

ದಿನಾಂಕ 26/11/2022 ಶನಿವಾರ ಬೆಳಿಗ್ಗೆ 10.00 ಗಂಟೆಗೆ ಐಕ್ಯತಾ ನಡಿಗೆ ಮತ್ತು ತೃತೀಯ ಜಿಲ್ಲಾ ಸಮಾವೇಶ ಶಾಂತಲಾ ಸಭಾಂಗಣ,ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ.ಶಿವಮೊಗ್ಗ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮವನ್ನು ಗೋಪಿ ಸರ್ಕಲ್ ದಿಂದ ಹೊರಟು ಜೋಯಾಲುಕಾಶ ದಿಂದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದವರೆಗೂ ಐಕ್ಯತಾ ನಡಿಗೆಯ ಜಾತವನ್ನು ಶ್ರೀ ಎಸ್.ಎಸ್ ಜ್ಯೋತಿಪ್ರಕಾಶ್ ಉದ್ಯಮಿಗಳು, ಸಮಾಜ ಸೇವಕರು.ಶಿವಮೊಗ್ಗ ಇವರು ಚಾಲನೆಯನ್ನುನೀಡುವುದರ ಮೂಲಕ ಚಾಲನೆಯನ್ನು ನೀಡಿದರು. ನಂತರ ಈ ಕಾರ್ಯಕ್ರಮವನ್ನು ಶ್ರೀ ಡಿ.ಎಸ್ ಅರುಣ್ ವಿಧಾನಪರಿಷತ್ ಸದಸ್ಯರು. ಶಿವಮೊಗ್ಗ ಇವರು ಉದ್ಗಾಟಿಸಿ ಮಾತನಾಡಿ ಸಕ್ಷಮ ಜಿಲ್ಲಾ ಸಮ್ಮೇಳನದ ಜೊತೆಯಲ್ಲಿ ಇಂದು ಅಂದರೆ ನವಂಬರ್ 26  ಸಂವಿಧಾನದ ದಿವಸ. ನಿಜಕ್ಕೂ ಇವತ್ತು ಸಕ್ಷಮ ಸಂಸ್ಥೆ ಸದ್ದಿಲ್ಲದೆ ಅನೇಕ ಸೇವಾ ಕೆಲಸಗಳನ್ನು ಮಾಡ್ತಾ ಬಂದಿದೆ. ಜೊತೆಯಲ್ಲಿ ಸರ್ಕಾರದಿಂದ ಸಿಗುವಂತ ಅನೇಕ ಸೌಲಭ್ಯಗಳು ಆಗಿರಬಹುದು,ವಿಶೇಷಚೇತನರ ಕುಂದುಕೊರತೆಗಳನ್ನು ಆಗಿರಬಹುದು ಸದ್ದಿಲ್ಲದೇ ಕೆಸಲ ನಡಿತಾ ಇದೆ ಇನ್ನೂ ಹೆಚ್ಚಿನ ರೀತಿಯಲ್ಲಿ ಇಂತಹ ಸೇವೆಯ ಕಾರ್ಯಗಳು ನಡಿಲೀ ಎಂದರು. ಶ್ರೀ ಗಿರೀಶ್ ಕಾರಂತ್ ವಿಭಾಗ ಕಾರ್ಯವಾಹ,ರಾ.ಸ್ವ.ಸೇ.ಸಂಘ ಶಿವಮೊಗ್ಗ ಇವರು ಸಕ್ಷಮ ಸ್ಥಾಪನೆ ಆಗಿ ಸುಮಾರು 5 ವರ್ಷಗಳು ಆಯಿತು. ವರ್ಷದಿಂದ ವರ್ಷಕ್ಕೆ ಅನೇಕ ರೀತಿಯ ದೊಡ್ಡ ದೊಡ್ಡ ಕಾರ್ಯಕ್ರಮಗಳ ಸೇವೆಗಳನ್ನು ಮಾಡ್ತಾ ಬಂದಿದೆ. ಕರೋನ ಪೀಡಿತ ಸಂದರ್ಭದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಬೇಟಿ ನೀಡಿ ಅವರಿಗೆ ಆಹಾರ ಸಾಮಾಗ್ರಿಗಳನ್ನು, ಅರ್ಹ ವಿಶೇಷಚೇತನರಿಗೆ ವೀಲ್ಚೇರ್ ಗಳನ್ನು ,UDID ಕಾರ್ಡ್ ಗಳನ್ನು ಮಾಡಿಸಿಕೊಡುವುದು ಆಗಿರಬಹುದು ಹೀಗೆ ಅನೇಕ ಕಾರ್ಯಕ್ರಮಗಳನ್ನು ನಿಸ್ವಾರ್ಥ ಸೇವೆಯಿಂದ ಮಾಡ್ತಾ ಇರೋದು ದೊಡ್ಡ ಸ್ಲಂಗನೀಯ ಅಂತ ಹೇಳಬಹುದು ಹೀಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಡಲೀ ಎಂದು ದಿಕ್ಸೂಚಿ ನುಡಿಯನ್ನು ತಿಳಿಸಿದರು. ಶ್ರೀಮತಿ ಶಿಲ್ಪಾ ಎಂ.ದೊಡ್ಡಮನಿ ಜಿಲ್ಲಾ ಕಲ್ಯಾಣಾಧಿಕಾರಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿಶೇಷಚೇತನರಿಗೆ ಸಿಗುವಂತಹ ಸೌಲಭ್ಯಗಳ ಮಾಹಿತಿಯನ್ನು ತಿಳಿಸಿದರು. ಹಾಗೆ ಶ್ರೀ ವಿನಯ್ ನ್ಯಾಯವಾದಿಗಳು.ಶಿವಮೊಗ್ಗ ಇವರು ವಿಶೇಷಚೇತನರಿಗೆ ಸರ್ಕಾರದ ಅಡಿಯಲ್ಲಿ ಇರುವಂತಹ 2016 ರ RPD ಆಕ್ಟ್ ನ ಬಗ್ಗೆ ಮಾಹಿತಿಯನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ 50 ಜನ ವಿಶೇಷಚೇತನ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಕಿಟ್,ಅರ್ಹ ವಿಶೇಷಚೇತನರಿಗೆ ಗಾಲಿಕುರ್ಚಿಗಳು, ಯು.ಡಿ.ಐ.ಡಿ(UDID)ಕಾರ್ಡ್ ಗಳು, 7 ಜನ ಬಡ ವಿಶೇಷಚೇತನರಿಗೆ ಆಹಾರ ಪದಾರ್ಥಗಳ ಸಾಮಾಗ್ರಿಗಳನ್ನು ವಿತರಿಸುವುದರ ಜೊತೆಯಲ್ಲಿ ವಿಶೇಷಚೇತನ ಸಾಧಕರಿಗೆ ಸನ್ಮಾನಿಸುವುದರ ಜೊತೆಯಲ್ಲಿ ಚೈತನ್ಯ ವಿಶೇಷ ಶಿಕ್ಷಣ ಶಾಲೆ.ಸಾಗರ ತಾಲ್ಲೂಕಿನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಡಾ.ಪ್ರಶಾಂತ್ ಇಸ್ಲೂರು ಅಧ್ಯಕ್ಷರು ಸಕ್ಷಮ. ಶಿವಮೊಗ್ಗ,ಮುಖ್ಯ ಅತಿಥಿಗಳಾಗಿ ಶ್ರೀ ಎನ್ ಗೋಪಿನಾಥ್ ಅವರು ಅತಿಥಿಗಳಾಗಿ ಶ್ರೀ ರಮೇಶ್ ಪ್ರಭು ಖಜಾಂಚಿ. ಸಕ್ಷಮ ಕರ್ನಾಟಕ, ಡಾ.ಸುರೇಶ್ ಹನಗವಾಡಿ, ಕೆ.ಜಿ ಕುಮಾರಶಾಸ್ತ್ರಿ ಕಾರ್ಯದರ್ಶಿ. ಸಕ್ಷಮ ಶಿವಮೊಗ್ಗ, ಸಿ.ಆರ್ ಶಿವಕುಮಾರ್ ಇದ್ದರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *