ಭಾರತ ಸೇವಾದಳ ಶಿಕ್ಷಕರ ಪುನಶ್ಚೇತನ ಕಾರ್ಯಗಾರ ಹಾಗೂ ತಾಲೂಕ ಸಮಿತಿ ಪದಾಧಿಕಾರಿಗಳ ಪದಗ್ರಹಣ..

Spread the love

ಭಾರತ ಸೇವಾದಳ ಶಿಕ್ಷಕರ ಪುನಶ್ಚೇತನ ಕಾರ್ಯಗಾರ ಹಾಗೂ ತಾಲೂಕ ಸಮಿತಿ ಪದಾಧಿಕಾರಿಗಳ ಪದಗ್ರಹಣ..

ಭಾರತ ಸೇವಾ ದಳ ಜಿಲ್ಲಾ ಸಮಿತಿ ಹಾಗೂ ತಾಲೂಕ ಸಮಿತಿಗಳ ಮತ್ತು ಶಾಲಾ ಶಿಕ್ಷಣ ಇಲಾಖೆ ಹಾಗೂ ಸಾಕ್ಷರತಾ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಯಲಬುರ್ಗಾ ಇವರ ಸಂಯುಕ್ತ ಆಶ್ರಯದಲ್ಲಿ. ಯಲಬುರ್ಗಾ ತಾಲೂಕಿನ ಭಾರತ ಸೇವಾದಳ ತರಬೇತಿ ಪಡೆದ ಶಿಕ್ಷಕ ಶಿಕ್ಷಕಿಯರಿಗೆ ಒಂದು ದಿನದ ಪುನಶ್ಚೇತನ ಕಾರ್ಯಗಾರ ಹಾಗೂ ವಾರ್ಷಿಕ ಚಟುವಟಿಕೆಗಳನ್ನ. ನೂತನವಾಗಿ ಆಯ್ಕೆಯಾದ ಯಲಬುರ್ಗಾ ತಾಲೂಕು ಭಾರತ ಸೇವಾದಳ ಸಮಿತಿಯ ಪದಾಧಿಕಾರಿಗಳ ಮತ್ತು ಸದಸ್ಯರು ತಾಲೂಕು ಮಟ್ಟದ ಪದಗ್ರಹಣವನ್ನು ನಾಳೆ ಶುಕ್ರವಾರ ನವೆಂಬರ್ 18ರಂದು ಬೆಳಿಗ್ಗೆ 10.30 ಗಂಟೆಗೆ ಯಲಬುರ್ಗಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದಾರೆ. ಯಲಬುರ್ಗಾ ತಾಲೂಕ್ ಭಾರತ ಸೇವಾ ದಳ ತರಬೇತಿ ಪಡೆದ ಶಿಕ್ಷಕ ಶಿಕ್ಷಕಿ ವೃಂದದವರೆಲ್ಲರೂ ಈ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಭಾಗವಹಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ತಿಳಿಸಿದ್ದಾರೆ.

ವರದಿ – ಹುಸೇನಬಾಷಾ ಮೋತೆಖಾನ್

Leave a Reply

Your email address will not be published. Required fields are marked *