ಆರ್ ಬಿ ಐ ಮತ್ತು ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರ್ ಗಳ ಸಮಿತಿಯ ಮುಖಾಂತರ ರಾಷ್ಟ್ರ ವ್ಯಾಪಿ ತೀವ್ರ ಜಾಗೃತಿ ಅಭಿಯಾನ..

Spread the love

ಆರ್ ಬಿ ಮತ್ತು ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರ್ ಗಳ ಸಮಿತಿಯ ಮುಖಾಂತರ ರಾಷ್ಟ್ರ ವ್ಯಾಪಿ ತೀವ್ರ ಜಾಗೃತಿ ಅಭಿಯಾನ..

ಆರ್ ಬಿ ಐ ಮತ್ತು ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರ್ ಗಳ ಸಮಿತಿಯ ಆದೇಶದಂತೆ ಕೊಪ್ಪಳ ಜಿಲ್ಲಾ ಲೀಡ್ ಬ್ಯಾಂಕ್ ಮುಖಾಂತರ ರಾಷ್ಟ್ರ ವ್ಯಾಪಿ ತೀವ್ರ ಜಾಗೃತಿ ಅಭಿಯಾನ 2022… ಕಾರ್ಯಕ್ರಮ ಕೊಪ್ಪಳ : ಇಂಟರ್ನೆಟ್ ಬಳಕೆ ಮೂಲಕ ಡಿಜಿಟಲ್ ಹಣದ ವಹಿವಾಟು ಹೆಚ್ಚುತ್ತಿರುವುದರಿಂದ ಸೈಬರ್ ಕ್ರೈಂ  ವಂಚಕರ ಜಾಲಕ್ಕೆ ಹೆಚ್ಚು ಹೆಚ್ಚು ಜನಸಾಮಾನ್ಯರು ವಂಚನೆಗೆ ಬಲಿಯಾಗುತ್ತಿದ್ದಾರೆ. ಸೈಬರ್ ಅಪರಾಧವು ಕಾನೂನು ಬಾಹಿರ ಕೃತ್ಯ ಎಂದು ಕೊಪ್ಪಳ ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಶ್ರೀ ವೀರೇಂದ್ರ ಕುಮಾರ ಕೆ ಎಂ ರವರು  ನಗರದ ಸರಕಾರಿ  ಪ್ರೌಢಶಾಲಾ ಆವರಣದಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಮತ್ತು ರಾಷ್ಟ್ರ ವ್ಯಾಪಿ ತೀವ್ರ ಜಾಗೃತಿ ಅಭಿಯಾನದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಮತ್ತು ಶಿಕ್ಷಕರ ಕುರಿತು ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ವಂಚಕರು ಗ್ರಾಹಕರ ವೈಯಕ್ತಿಕ ಮಾಹಿತಿಗಳಾದ ಆಧಾರ ಕಾರ್ಡ್, ಪಾನ್ ಕಾರ್ಡ್, ನೆಟ್ ಬ್ಯಾಂಕಿಂಗ್ ಪಾಸ್ವರ್ಡ್, ಎಟಿಎಂ ಪಿನ್ ನಂಬರ್, ಓಟಿಪಿ ನಂಬರ್, ಹೀಗೆ ಹಲವು ಮಾಹಿತಿಗಳನ್ನು ಪಡೆದು ವಂಚಿಸುತ್ತಿದ್ದಾರೆ. ಅಲ್ಲದೆ ಫೋನ್ ಕಾಲ್ ಮಾಡಿ, ಮೆಸೇಜ್ ಕಳಿಸಿ, ವೆಬ್ ಸೈಟ್ ಗೆ ಭೇಟಿ ನೀಡಿ ಅನಧಿಕೃತ ಯಾಪ್ಗಳನ್ನುಬ ಡೌನಲೋಡ ಮಾಡಿಕೊಳ್ಳಲು ಹೇಳುತ್ತಾರೆ.  ಸಾಲದ ಆಮಿಷ ತೋರಿಸುತ್ತಾರೆ. ನಾವು ಬ್ಯಾಂಕಿನವರು ಎಂದು ಹೇಳಿ ಮೋಸಕ್ಕೆ ಒಳಪಡಿಸುತ್ತಾರೆ. ಹಾಗಾಗಿ ನಾವುಗಳೆಲ್ಲಾ ಹೆಚ್ಚು ಜಾಗೃತಿ ಹೊಂದಲು ಕರೆ ನೀಡಿದರು. ಶಾಲಾ ಮಕ್ಕಳು ತಮ್ಮ ಪಾಲಕರಿಗೆ ಮತ್ತು ಅನಕ್ಷರಸ್ಥರಿಗೆ ಈ ರೀತಿಯ ಮೋಸಗಾರರ ಜಾಲಕ್ಕೆ  ಬಲಿಯಾಗದಿರುವಂತೆ ಮಾಹಿತಿ ನೀಡಲು ಕೋರಿದರು. ದೇಶದಲ್ಲಿ ಕ್ರೈಂ ಗಳ ಸಂಖ್ಯೆ ಕಳೆದ ಮೂರು ವರ್ಷಗಳಲ್ಲಿ 5 ಪಟ್ಟು ಹೆಚ್ಚಳ ಕಂಡುಬಂದಿದೆ. ಇಂತಹ ಮೋಸದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಎಸ್ಎಂಎಸ್ ,ಇ-ಮೇಲ್, ಫೋನ್ ಕಾಲ್, ಮತ್ತು ಹಣಕಾಸಿನ ಮಾಹಿತಿ ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾವುದೇ ಅನುಮಾನಾಸ್ಪದ ಮೆಸೇಜ್ ಬಂದಾಗ ಅದನ್ನು ಅಳಿಸಿ ಹಾಕಿ ಜನರು ಜಾಗೃತರಾಗಿರಬೇಕೆಂದು ತಿಳಿಸಿದರು. ಇದೇ ಸಮಯದಲ್ಲಿ ಉಪಸ್ಥಿತರಿದ್ದ ಆರ್ಥಿಕ ಸಾಕ್ಷರತಾ ಸಲಹೆಗಾರ ಶ್ರೀ ರೇವಣಾರಾಧ್ಯ ಬಿಎಮ್.  ಮಾತನಾಡಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ವ್ಯವಸ್ಥೆ, ಠೇವಣಿ ಯೋಜನೆ,ಉಳಿತಾಯ ಖಾತೆ, ಮುಂದೆ ವಿದ್ಯಾರ್ಥಿಗಳಿಗಾಗಿ ಉನ್ನತ ವ್ಯಾಸಂಗಕ್ಕೆ ಶಿಕ್ಷಣ ಸಾಲ ಯೋಜನೆ, ಎ ಟಿ ಎಂ ಬಳಕೆ ಅಲ್ಲದೆ ವಿಶೇಷವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಾಮಾಜಿಕ ಭದ್ರತಾ ಯೋಜನೆಯ ಖಾತೆಗಳ ಮಾಹಿತಿ ಇನ್ನಿತರ ಯೋಜನೆಗಳ  ತಂತ್ರಜ್ಞಾನದಲ್ಲಿ ಎಲ್ಲ ಬ್ಯಾಂಕ್ ನ ವ್ಯವಹಾರ ಡಿಜಿಟಲ್ ಬ್ಯಾಂಕ್ ಮುಖಾಂತರ ನಡೆಯುತ್ತಿದೆ.  ಇತ್ತೀಚೆಗೆ ಅನೇಕ ಅಪರಾಧಗಳು ಮಹಿಳೆಯರಿಗೆ, ಅನಕ್ಷರಸ್ಥರಿಗೆ, ಹಿರಿಯ ನಾಗರಿಕರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಅನೇಕ ರೀತಿಯಲ್ಲಿ ಆಶೆ, ಆಮಿಷಗಳಿಂದ ವಂಚನೆ ಮಾಡುತ್ತಿದ್ದಾರೆ. ಅನೇಕ ವಿಧದಲ್ಲಿ ಮೋಸಗೊಳಿ‌ಸುವ ವಂಚನೆಯ ಜಾಲದವರು ಸದಾ ಬಕ ಪಕ್ಷಿಯಂತೆ ಕಾಯುತ್ತಿರುತ್ತಾರೆ.   ಎ ಟಿ ಎಂ ಸೆಂಟರ್ ನಲ್ಲಿ, ಬ್ಯಾಂಕ್ ಆವರಣದಲ್ಲಿ, ಬಸ್ ನಿಲ್ದಾಣದ ಲ್ಲಿ ಗ್ರಾಹಕರ ಚಲನೆ ವಲನೆ ಗಮನಿಸಿ ಮೋಸ-ವಂಚನೆ ಮಾಡುವ ಅಪರಾಧಿಗಳ ಬಗ್ಗೆ ಜಾಗೃತರಾಗಿರಲು ವಿದ್ಯಾರ್ಥಿಗಳಿಗೆ ಮತ್ತು ಇನ್ನಿತರ ಸಿಬ್ಬಂದಿಗೆ ವಿನಂತಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ವೀರೇಶ ಚೋಳಪ್ಪನವರ ಮತ್ತು  ಇನ್ನಿತರ ಶಿಕ್ಷಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ – ಹುಸೇನಬಾಷಾ ಮೋತೆಖಾನ್

Leave a Reply

Your email address will not be published. Required fields are marked *