ಸಿಂಧನೂರು : ತಾಲೂಕಿನ ಚಿಕ್ಕಬೇರ್ಗಿ ಗ್ರಾಮದ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್.ಡಿ.ಎಮ್.ಸಿ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತ್ತು.

Spread the love

ಸಿಂಧನೂರು : ತಾಲೂಕಿನ ಚಿಕ್ಕಬೇರ್ಗಿ ಗ್ರಾಮದ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್.ಡಿ.ಎಮ್.ಸಿ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತ್ತು.

ಸಮುದಾಯದ ಮಾಲೀಕತ್ವವನ್ನು ಖಚಿತಪಡಿಸಿಕೊಳ್ಳಲು ಮತ್ತು ಶಿಕ್ಷಣದಲ್ಲಿ ಸಮುದಾಯದ ಭಾಗವಹಿಸುವಿಕೆಗಾಗಿ ಸರ್ಕಾರವು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಹೊಂದುವ ಈ ವ್ಯವಸ್ಥೆಯನ್ನು ರಚಿಸಿದೆ. ಸದರಿ ಸಮಿತಿಯಲ್ಲಿ ಇತರರನ್ನು ಹೊರತುಪಡಿಸಿ ಒಟ್ಟು ಹದಿನೆಂಟು  ಮುಖ್ಯ ಸದಸ್ಯರನ್ನು ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೋಷಕರಾಗಿರುತ್ತಾರೆ.  ಶಾಲೆಗಳ ಉತ್ತಮ ನಿರ್ವಹಣೆಗಾಗಿ ಶೈಕ್ಷಣಿಕ ಮತ್ತು ಶಾಲಾಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳಲು ಎಸ್.ಡಿ.ಎಂ.ಸಿ. ಸಮಿತಿಗಳಿಗೆ ಕೆಲವು ಕರ್ತವ್ಯಗಳನ್ನು ಹಾಗೂ ಅಗತ್ಯ ಅಧಿಕಾರಗಳನ್ನು ನೀಡಲಾಗಿದೆ. ಶಾಲೆಯ ಮುಖ್ಯ ಶಿಕ್ಷಕರು ಸಮಿತಿಯ ಕಾರ್ಯದರ್ಶಿಗಳಾಗಿರುತ್ತಾರೆ. ಪ್ರಸ್ತುತ ವ್ಯವಸ್ಥೆಯನ್ನು ಸರ್ಕಾರದ ಕಾರ್ಯಕಾರಿ ಆದೇಶದನ್ವಯ ನಿರ್ವಹಿಸಲಾಗುತ್ತದೆ. ಸಿಂಧನೂರು : ತಾಲೂಕಿನ  ಚಿಕ್ಕಬೇರ್ಗಿ ಗ್ರಾಮದ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಂತರ ನೂತನ ಎಸ್.ಡಿ.ಎಮ್.ಸಿ ರಚನೆಯಾಯಿತು.ಸೋಮುವಾರ ಚಿಕ್ಕಬೇರ್ಗಿ ಗ್ರಾಮದಲ್ಲಿ ಮೂರು ವರ್ಷದ ಅವಧಿಗೆ ಎಸ್.ಡಿ.ಎಮ್.ಸಿ ನೂತನ ಅಧ್ಯಕ್ಷರಾಗಿ ಹನುಮಂತ ತಂ ಬಸಪ್ಪ ಅರಳಿಮರ ಉಪಾಧ್ಯಕ್ಷರಾಗಿ ದೇವಮ್ಮ ಗಂ ಯಮನೂರ ಹರಿಜನ ಆಯ್ಕೆಯಾಗಿದ್ದು ನೂತನ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರುಗಳಿಗೆ ಶಾಲೆಯ ಪಾಲಕರು ಗ್ರಾಮಸ್ಥರು , ಹಿರಿಯರು ಹೂವಿನ ಹಾರ ಹಾಕಿ ಶುಭಕೊರಿದರು . ಒಟ್ಟು ಹದಿನೆಂಟು ಸದಸ್ಯರು ಶಾಲೆಗೆ ಆಯ್ಕೆಯಾಗಿ ಅದರಲ್ಲಿ ಒಬ್ಬರು ಅಧ್ಯಕ್ಷರನ್ನು , ಒಬ್ಬರು ಉಪಾಧ್ಯಕ್ಷ ರನ್ನು ಆಯ್ಕೆಗೊಳಿಸಲಾಯಿತು . ಸಿ.ರ್ಆ.ಪಿ ಗಳಾದ ರಂಗಸ್ವಾಮಿ ಮಾತನಾಡಿ ಶಾಲೆಯ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಮಾಡಲು ಸರ್ಕಾರದ ಆದೇಶದಂತೆ ಈ ಎಸ್.ಡಿ.ಎಮ್.ಸಿ ರಚನೆ ಮಾಡಲಾಗುತ್ತದೆ ಅದಕ್ಕನುಣವಾಗಿ ಶಾಲೆಯ ಅಭಿವೃದ್ಧಿಗೆ ಶ್ರಮಸಿಸಬೇಕೆಂದು ಹೇಳಿದರು ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮುದಿಯಪ್ಪ ಹೂವಿನಬಾವಿ ನಾಗಪ್ಪ ಕಟ್ಟೆರ ಪಂಪಾಪತಿ ಯದ್ದಲದಿನ್ನಿ , ವೀರನಗೌಡ , ಯಲ್ಲಪ ಭಜಂತ್ರಿ  ಹಾಗೂ ಊರಿನ ಗುರುಹಿರಿಯರು ಸೇರಿದಂತೆ ಶಾಲೆಯ ಮುಖ್ಯ ಗುರುಗಳಾದ ಬಾಲಕೃಷ್ಣ ಶಂಕ್ರಪ್ಪ ಶಿಕ್ಷಕರಾದ ನಾಗಪ್ಪ ರಾಠೋಡ ರಾಜಣ್ಣ .ಶಿವಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು …

ವರದಿ – ಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *