ವಿಶ್ವ ಶುಶ್ರೂಷಕೀಯರ ದಿನಾಚರಣಿ ಪ್ರಯುಕ್ತ ಇಲ್ಲಿನ ದಾದಿಯರಿಗೆ ಸನ್ಮಾನ‌ ಮಾಡುವ ಕಾರ್ಯಕ್ರಮ.

Spread the love

ವಿಶ್ವ ಶುಶ್ರೂಷಕೀಯರ ದಿನಾಚರಣಿ ಪ್ರಯುಕ್ತ ಇಲ್ಲಿನ ದಾದಿಯರಿಗೆ ಸನ್ಮಾನಮಾಡುವ ಕಾರ್ಯಕ್ರಮ.

ನಾನಾ ಖಾಯಿಲೆಗಳ ಮಧ್ಯೆ ನರಳಾಡುತ್ತಾ ಆಸ್ಪತ್ರೆಗಳಿಗೆ ಬರುವ ರೋಗಿಯ ಜೊತೆ ನಿರಂತರವಾಗಿ,ನಿರಾತಂಕದಿಂದ ಸೇವೆಯನ್ನು ಮಾಡುವ ಮೂಲಕ ಆರೋಗ್ಯವನ್ನು ಕರುಣಿಸುವ ದಾದಿಯರ ಕೊಡುಗೆ ಅಮೋಘವಾಗಿದೆ ಎಂದು ಪಪಂ ಅಧ್ಯಕ್ಷ ವಿಕ್ರಮ್ ರಾಯ್ಕರ್ ಹೇಳಿದರು. ಅವರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ವಿಶ್ವ ಶುಶ್ರೂಷಕೀಯರ ದಿನಾಚರಣಿ ಪ್ರಯುಕ್ತ ಇಲ್ಲಿನ ದಾದಿಯರಿಗೆ ಸನ್ಮಾನ‌ ಮಾಡುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿಕೊಂಡು ಮಾತನಾಡುತಿದ್ದರು‌.   ಕರೋನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಿಪಿಇ ಕಿಟ್ ಧರಿಸಿ ಉಸಿರಾಟದ ಸ್ಥಿತಿಯಲ್ಲಿ ರೋಗಿಗಗಳ ಆರೈಕೆ ಮಾಡುತ್ತಿರುವ ದಾದಿಯರೇ ನೈಜ ಕರೋನಾ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆಂದು ಅವರು  ಅಭಿಮತ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ವೈದ್ಯಾಧಿಕಾರಿ ಕಾವೇರಿ ಶಾವಿ‌ ದಾದಿಯರ ಸೇವೆ ನಿರಂತರ ಮತ್ತು ಜವಬ್ದಾರಿಯುತವಾಗಿದ್ದು, ಸರಿಯಾದ ಸಮಯಕ್ಕೆ ಕರ್ತವ್ಯವನ್ನು ಮಾಡುವ ಮೂಲಕ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವನ್ನು ಇಡೀ ವಿಶ್ವದ್ಯಾದಂತ ಸೇವೆ ಸಲ್ಲಿಸುತ್ತಿರುವ ದಾದಿಯರಿಗೆ ಗೌರವಿಸುವ ದಿನವಾಗಿದೆ. ನೈಟಿಂಗೇಲ್ ಅವರು ರೋಗಿಗಳಿಗೆ ಉಚಿತವಾದ ಸೇವೆಯನ್ನು ನೀಡಿದ್ದಾರೆ. ಹಗಲಿನ ಜೊತೆಗೆ ರಾತ್ರಿ ಹೊತ್ತು ರೋಗಿಗಳನ್ನು ಪರೀಕ್ಷಿಸುವ ಸಲುವಾಗಿ ದೀಪವನ್ನು ಎತ್ತಿಕೊಂಡು ಬಂದು ಉಪಚರಿಸುತ್ತಿದ್ದರು. ಇದರಿಂದ ಅವರಿಗೆ ‘ದೀಪದ ಮಹಿಳೆ ಎಂಬ ಹೆಸರು ಬಂದಿತೆಂದರು. ಈ ಸನ್ಮಾನದಿಂದ ನಮಗೆ ಜವಾಬ್ದಾರಿ ಹೆಚ್ಚಿದೆ ಎನ್ನುವ ಮೂಲಕ ಎಲ್ಲ ದಾದಿಯರ ಕರ್ತವ್ಯವನ್ನು ಬಣ್ಣಿಸಿದರು ಸಮೂದಾಯ ಆರೋಗ್ಯ ಕೇಂದ್ರದ ದಾದಿಯರೆಲ್ಲರನ್ನು ಸತ್ಕರಿಸಿ ಗೌರವಿಸಲಾಯಿತು. ಈ ಸಮಯದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶಂಕರ್ ಕಾಳೆ, ಪಪಂ ಉಪಾಧ್ಯಕ್ಷೆ ಹಂಪಮ್ಮ ಕೈರವಾಡಗಿ, ಸದಸ್ಯರಾದ ಅನ್ನಪೂರ್ಣಮ್ಮ ಬಳೂಟಗಿ ಸೇರಿದಂತೆ ಇತರರು ಇದ್ದರು.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ್

Leave a Reply

Your email address will not be published. Required fields are marked *