ಸಿಪಿಐ (ಎಂಎಲ್)ರೆಡ್ ಸ್ಟಾರ್  ಪಕ್ಷದ 11ನೇ ರಾಜ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಿತು,,,,

Spread the love

ಸಿಪಿಐ (ಎಂಎಲ್)ರೆಡ್ ಸ್ಟಾರ್  ಪಕ್ಷದ 11ನೇ ರಾಜ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಿತು,,,,

ಸಿಪಿಐ (ಎಂಎಲ್)ರೆಡ್ ಸ್ಟಾರ್  ಪಕ್ಷದ 11ನೇ ರಾಜ್ಯ ಸಮ್ಮೇಳನ ಆಗಸ್ಟ್ 3-5, 2022ರಂದು ಆಗಸ್ಟ್ 3 ರಂದು ಬೆಂಗಳೂರು ಶಿಕ್ಷಕರ ಸದನದಲ್ಲಿ ಬಹಿರಂಗ ಉದ್ಘಾಟನಾ ಅಧಿವೇಶನ ಮತ್ತು ನವ ಫ್ಯಾಸಿಸಂ ವಿರೋಧಿ ಬಲಿಷ್ಠ ಚಳವಳಿಯ ಮುಂದಿರುವ ಸವಾಲುಗಳು ಎಂಬ ವಿಚಾರ ಸಂಕಿರಣ ಯಶಸ್ವಿಯಾಗಿ ನಡೆಯಿತು. ಉದ್ಘಾಟನೆ ಅಧಿವೇಶನದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಎನ್.ರಾಮಚಂದ್ರನ್, ಪಾಲಿಟ್ ಬ್ಯೂರೊ ಸದಸ್ಯರಾದ ಪಿ.ಜೆ.ಜೇಮ್ಸ್, ಆರ್.ಮಾನಸಯ್ಯ, ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಹಾಗೂ ಖ್ಯಾತ ವಕೀಲರಾದ, ಎಸ್.ಬಾಲನ್, ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್, ಚಿಂತಕರಾದ, ದೇವೆಂದ್ರ ಹೆಗಡೆ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ, ಮಾವಳ್ಳಿ ಶಂಕರ್, ಪೂರ್ಣಿಮಾ ಸೇರಿದಂತೆ ಇತರರು ಭಾಗವಹಿಸಿ ಮಾತನಾಡಿದರು. ನಂತರ  ಆಗಸ್ಟ್ 4 ಮತ್ತು 5-2022ರಂದು ಭಾರತ ಸ್ಕೌಟ್ಸ್ & ಗೈಡ್ಸ್ ಸಭಾಂಗಣದಲ್ಲಿ  ಕಮ್ಯೂನಿಸ್ಟ್ ಕ್ರಾಂತಿಕಾರಿ ಗೀತೆ ಹಾಡುವುದರ ಮೂಲಕ ದ್ವಜಾರೋಹಣದೊಂದಿಗೆ ಸಮ್ಮೇಳನ ಆರಂಭಗೊಂಡು, ಪ್ರತಿನಿಧಿ ಸಮ್ಮೇಳನ ಯಶಸ್ವಿಯಾಗಿ ಜರುಗಿತು.

  1. ಪಕ್ಷದ ಪ್ರಣಾಳಿಕೆ
  2. ಭಾರತದ ಕಾಂತಿಯ ಮಾರ್ಗ
  3. ಕೇಂದ್ರ ಸಮಿತಿಯ ರಾಜಕೀಯ ಸಂಘಟನಾತ್ಮಕ ವರದಿ
  4. ಕರ್ನಾಟಕ ರಾಜ್ಯ ಸಮಿತಿಯ ರಾಜಕೀಯ ಸಂಘಟನಾತ್ಮಕ ವರದಿ
  5. ರಾಜಕೀಯ ನಿರ್ಣಯಗಳು

ಎಂಬ ಕರಡು ದಸ್ತಾವೇಜುಗಳ ಮಂಡನೆ ಚರ್ಚೆ ಹಾಗೂ ಅನುಮೋದನೆಯನ್ನು ಅಂಗೀಕರಿಸಲಾಯಿತು. ಸಮ್ಮೇಳನದಲ್ಲಿ ಪಕ್ಷದ ಅಖಿಲಭಾರತ ಪ್ರಧಾನ ಕಾರ್ಯದರ್ಶಿ ಕೆ.ಎನ್.ರಾಮಚಂದ್ರನ್ ಹಾಗೂ ಪಾಲಿಟ್ ಬ್ಯೂರೊ ಸದಸ್ಯರಾದ, ಪಿ.ಜೆ.ಜೇಮ್ಸ್, ಆರ್.ಮಾನಸಯ್ಯ ಮತ್ತು ಬಿ.ರುದ್ರಯ್ಯನವರು ದಸ್ತಾವೇಜುಗಳ ಮಂಡನೆಯನ್ನು ನೇರವೇರಿಸಿದರು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಕೊನೆಗೆ ಅಂತರಾಷ್ಟ್ರೀಯ ಕಮ್ಯೂನಿಸ್ಟ್ ಕ್ರಾಂತಿಕಾರಿ ಗೀತೆಯೊಂದಿಗೆ ದ್ವಜಾ ಅವರೋಹಣ ಜರುಗಿತು. ಪಕ್ಷದ 12ನೇ ಮಹಾಧಿವೇಶನ ಸೆಪ್ಟೆಂಬರ್ 24-29, ಕೇರಳದ ಕ್ಯಾಲಿಕಟ್ ಗೆ ಮುನ್ನಡೆಯೋಣ ! ಮಾರ್ಕ್ಸ್‌ವಾದ ಲೆನಿನ್ ವಾದ ಮಾವೊ ವಿಚಾರಧಾರೆ ಚಿರಾಯುವಾಗಲಿ ! ಬಂಡವಾಳವಾದಿ, ಬ್ರಾಹ್ಮಣವಾದಿ ಹಿಂದೂ ರಾಷ್ಟ್ರ ಸರ್ವಾಧಿಕಾರವನ್ನು ಕಿತ್ತೆಸೆಯೋಣ ! ಜನವಾದಿ ಜಾತ್ಯಾತೀತ ಬಲಿಷ್ಠ ಚಳವಳಿಯನ್ನು ಕಟ್ಟೋಣ ! ಎಂಬ ಕ್ರಾಂತಿಕಾರಿ ಘೋಷಣೆಗಳೊಂದಿಗೆ ಸಮ್ಮೇಳನ ಸಮಾರೋಪಗೊಂಡಿತು. ಪಕ್ಷದ ನೂತನ ರಾಜ್ಯ ಕಾರ್ಯದರ್ಶಿಯನ್ನಾಗಿ #ಬಿ_ರುದ್ರಯ್ಯನವರನ್ನು ಅವೀರೋಧವಾಗಿ ಸಮ್ಮೇಳನ ಚುನಾಯಿಸಿತು.

#ಸಮ್ಮೇಳನದ_ನಿರ್ಣಯಗಳು.

1.ಬ್ರಾಹ್ಮಣವಾದಿ, ಬಂಡವಾಳವಾದಿ, ನವ ಫ್ಯಾಸಿಸಂ ವಿರೋಧಿ ಹೋರಾಟಗಳಿಗೆ ಹೆಗಲೊಡ್ಡೋಣ ! 2.ಕಾರ್ಮಿಕ ಕಾಯ್ದೆ ಬದಲಾವಣೆ ವಿರುದ್ಧ ಬಲಿಷ್ಠ ಕಾರ್ಮಿಕ ವರ್ಗದ ಹೋರಾಟಗಳನ್ನು ಮುನ್ನಡೆಸುವುದು. 3. ಊಳುವವನೆ ಭೂ ಒಡೆಯ ಆಧಾರದ ಮೇಲೆ ರೈತಾಪಿ ವರ್ಗದ ಚಳುವಳಿಯನ್ನು ಮುನ್ನಡೆಸುವುದು. 4.ಅಗತ್ಯ ಪದಾರ್ಥಗಳ ಬೆಲೆ ಹೆಚ್ಚಳದ ವಿರುದ್ಧ ತೀವ್ರ ಸಂಘರ್ಷ ಹೂಡುವುದು. 5. ನವ-ಉದಾರವಾದಿ ನೀತಿಗಳನ್ನು ಹಿಮ್ಮೆಟ್ಟಿಸಿ ಹೋರಾಡುವುದು. 6. ಸಮಾನ ಮನಸ್ಕ ಶಕ್ತಿಗಳೊಂದಿಗೆ ಐಕ್ಯತಾ ಕಾರ್ಯಭಾರಗಳನ್ನು ಕೈಗೊಳ್ಳುವುದು. 7. ಅಗ್ನಿಪಥ ಹೆಸರಿನಲ್ಲಿ ಮಿಲಿಟರಿ ಖಾಸಗೀಕರಣ ವಿರೋಧಿಸಿ ಹೋರಾಡುವುದು. 8. ಶಿಕ್ಷಣದ ವ್ಯಾಪಾರೀಕರಣ, ಪಠ್ಯ ಪರಿಷ್ಕರಣೆ ವಿರುದ್ಧ ಹೋರಾಡುವುದು. 9. ಮಹಿಳೆ ಹಾಗೂ ಮಕ್ಕಳ ಮೇಲಿನ ಅತ್ಯಾಚಾರ, ಹತ್ಯೆ ದೌರ್ಜನ್ಯ ವಿರೋಧಿ ಸಂಘರ್ಷ ಮುನ್ನಡೆಸುವುದು. 10. ಸಾರ್ವತ್ರಿಕ ವಲಯಗಳ ಮಾರಾಟೀಕರಣದ ವಿರುದ್ಧ ಪ್ರಬಲ ಸಂಘರ್ಷ ಹೂಡುವುದು. 11. ದಲಿತ-ಆದಿವಾಸಿ ಅಲ್ಪಸಂಖ್ಯಾತರ ಮೇಲಿನ ಹಲ್ಲ್ಯೆ-ಹತ್ಯೆ ದೌರ್ಜನ್ಯಗಳ ವಿರುದ್ಧ ಹೋರಾಡುವುದು. 12. ಜಾತಿವಾದ ಹಾಗೂ ಲಿಂಗತಾರತಮ್ಯದ ವಿರುದ್ಧ ಜಾತಿ ವಿನಾಶದ ಚಳುವಳಿಗೆ ಹೆಗಲೊಡ್ಡುವುದು. 13. ಕತ್ತು ಕೋಯ್ಯುವ ಗುತ್ತಿಗೆ ಪಧ್ಧತಿ ವಿರುದ್ಧ ಹೋರಾಡುವುದು. 14. ನಿರುದ್ಯೋಗದ ವಿರುದ್ಧ ಯುವಜನರನ್ನು ಸಂಘಟಿಸಿ ಹೋರಾಡಾವುದು. 15. ಸಾಂಸ್ಕೃತಿಕ ಕ್ರಾಂತಿಯ ಕಾರ್ಯಭಾರಗಳಿಗೆ ಹೆಗಲೊಡ್ಡುವುದು. #ಸಿಪಿಐಎಂಎಲ್ರೆಡ್ಸ್ಟಾರ್_ಕರ್ನಾಟಕ  #cpi_ml_red_star_Karnataka

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *