ದಂತ ಭಾಗ್ಯ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಡಾ. ಬೀನಾ ದೇವಿ. ….

Spread the love

ದಂತ ಭಾಗ್ಯ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಡಾ. ಬೀನಾ ದೇವಿ. ….

ಕನಕಗಿರಿ:ಜಿಲ್ಲೆಯಲ್ಲಿ ದಂತ ಭಾಗ್ಯ ಯೋಜನೆಯ ಅರ್ಹ ಪಲಾನುಭವಿಗಳನ್ನು ಆಯ್ಕೆ ಮಾಡಿಕೋಳಲಾಗುವುದು ಮುಂದಿನ ದಿನಗಲ್ಲಿ ಅರ್ಹರಿಗೆ ಉಚಿತವಾಗಿ ದಂತ ಪಂಕ್ತಿ ವಿತರಿಸುವ ಜೊತೆಗೆ ಹಲ್ಲುಗಳ ಆರೋಗ್ಯದ ಹರಿವು ಮೂಡಿಸುವ ಪ್ರಯತ್ನ ನಡೆದಿದೆ ಆದ್ದರಿಂದ ಕನಕಗಿರಿ ಭಾಗದ ಎಲ್ಲಾ ರೋಗಿಗಳು ತಮ್ಮ ಹಲ್ಲುಗಳನ್ನು ಪರೀಕ್ಷಿಸಿಕೊಂಡು ದಂತ ಭಾಗ್ಯ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯಾಧಿಕಾರಿ ಡಾ.ಬೀನಾ ದೇವಿ ಹೇಳಿದರು.   ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಸಮುದಾಯ ಆರೋಗ್ಯ ಕೇಂದ್ರ ಕನಕಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ, ದಂತ ಸಪ್ತಾಹ  ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.  45 ವರ್ಷ ಮೇಲ್ಪಟ್ಟ ಎಲ್ಲಾ ಬಿಪಿಎಲ್ ಕಾರ್ಡ್ ಹೊಂದಿದವರು ದಂತ ಸಮಸ್ಯೆ ಇದ್ದರೆ ಉಚಿತವಾಗಿ ದಂತ ಚಿಕಿತ್ಸೆಯನ್ನು ನೀಡಲಾಗುವುದು. ಆದ್ದರಿಂದ ಆಶಾ ಕಾರ್ಯಕರ್ತರು ಆರೋಗ್ಯ ಕಾರ್ಯಕರ್ತೆಯರುಮತ್ತು ಸ್ವಯಂಸೇವಕರು ದಂತ ಸಮಸ್ಯೆಯನ್ನು ಗುರುತಿಸಿ ಸಮಯದಾಯ ಆರೋಗ್ಯ ಕೇಂದ್ರ ಕನಗಿರಿ ಗೆ ಕರೆದುಕೊಂಡು ಬರುವಂತೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮುರ್ತುಜಾ ಸಾಬ್ ನೇತ್ರಾಧಿಕಾರಿ ಗಳು ಹಲ್ಲಿನ ಮಹತ್ವದ ಬಗ್ಗೆ ತಿಳಿಸಿದರು. ಹಾಗೂ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯ ಮಾತುಗಳನ್ನು ಡಾ. ರಾಘವೇಂದ್ರ ಮಾತನಾಡಿ ಸರ್ಕಾರದಿಂದ ಉಚಿತವಾಗಿ ಸಿಗುವ ದಂತ ಭಾಗ್ಯ ಯೋಜನೆಯನ್ನು ಹಾಗೂ ಸರಕಾರದ ಇತರೆ ಯೋಜನೆಗಳನ್ನು ಸಂಪೂರ್ಣವಾಗಿ  ಸದುಪಯೋಗಪಡಿಸಿಕೊಳ್ಳುವಂತೆ ಜನರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಡಾ.ಸೌಮ್ಯ ಮತ್ತು ರಮೇಶ್,ಮಲ್ಲೇಶಪ್ಪ, ರುದ್ರಮ್ಮ ಅಮೀನ್ ಸಾಬ್  ಉಪಸ್ಥಿತರಿದ್ದರು.  ಕಾರ್ಯಕ್ರಮವನ್ನು ಸಿದ್ದರಾಮಪ್ಪ ರವರು ನೆರವೇರಿಸಿದರು. ಈ ಶಿಬರದಲ್ಲಿ 28 ಕೂ ಹೆಚ್ಚು ಹಲ್ಲಿನ ರೋಗಿಗಳನ್ನು ಪರೀಕ್ಷಿಸಿ 20 ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿ ಇನ್ನುಳಿದ ರೋಗಿಗಳಿಗೆ ಮುಂದಿನ ದಿನಗಳಲ್ಲಿ ಚಿಕಿತ್ಸೆಗಾಗಿ ಮುಂದಿನ ದಿನಗಳಲ್ಲಿ ಬರುವಂತೆ ತಿಳಿಸಲಾಯಿತು.

ವರದಿ – ಆದಪ್ಪ ಪಾಟೀಲ್

Leave a Reply

Your email address will not be published.