ಪೂಜಾರಹಳ್ಳಿ ಕೆರೆ ಒತ್ತುವರಿ ನಿವೇಶನಗಳನ್ನು ತೆರವು ಗೊಳಿಸಿ ಒತ್ತಾಯಿಸಿ (ಎಐಕೆಎಸ್) ಗ್ರಾ.ಪಂ.ಮನವಿ..

Spread the love

ಪೂಜಾರಹಳ್ಳಿ ಕೆರೆ ಒತ್ತುವರಿ ನಿವೇಶನಗಳನ್ನು ತೆರವು ಗೊಳಿಸಿ ಒತ್ತಾಯಿಸಿ (ಎಐಕೆಎಸ್) ಗ್ರಾ.ಪಂ.ಮನವಿ..

ಕೂಡ್ಲಿಗಿ… ಕೂಡ್ಲಿಗಿ ತಾಲೂಕು ಹೊಸಹಳ್ಳಿ ಹೋಬಳಿ ವ್ಯಾಪ್ತಿಯ ಪೂಜಾರಹಳ್ಳಿ ಕೆರೆಯಿಂದ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಕನ್ನಬೋರೆಯನ ಹಟ್ಟಿಗ್ರಾಮಸ್ಥರು ನೂರಾರು ಜನ ರೈತರು ಮಹಿಳೆಯರು ಪೂಜಾರಹಳ್ಳಿ ಕೆರೆ ಉಳಿಸಿ ಕೆರೆ ಒತ್ತುವರಿ ಮಾಡಿ ಕೆರೆ ಅಂಗಳದಲ್ಲಿ ನಿವೇಶನಗಳನ್ನು ನಿರ್ಮಿಸಿಕೊಂಡಿದ್ದು ಗ್ರಾಮ ಪಂಚಾಯತಿ ಈಗಾಗಲೇ ಡೋರ್ ನಂಬರ್ ನೀಡಿದ್ದು ಕೂಡಲೇ ರದ್ದುಗೊಳಿಸಿ ತೆರವುಗೊಳಿಸಬೇಕು ಇತಿಹಾಸ ಉಳ್ಳ ಕೆರೆಯನ್ನು ಸರ್ಕಾರಿ ದಾಖಲಾತಗಳಲ್ಲಿ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯ ಒಳಗೆ ಪಹಣಿಯಲ್ಲಿ ನಮೂದಿಸಬೇಕೆಂದು ಒತ್ತಾಯಿಸಿ, ಪೂಜಾರಹಳ್ಳಿ ಕೆರೆಯಿಂದ ಪಾದಯಾತ್ರೆ ಮೂಲಕ ಪೂಜಾರಹಳ್ಳಿ ಗ್ರಾಮ ಪಂಚಾಯತಿಗೆ ನಡೆದುಬಂದು ಮನವಿ ನೀಡಿದರು. ಹೋರಾಟದಲ್ಲಿ ಭಾಗವಹಿಸಿದ ಅಖಿಲ ಭಾರತ ಕಿಸಾನ್ ಸಭಾ ರಾಜ ಉಪಾಧ್ಯಕ್ಷರಾದ ಹೆಚ್ಚು ವೀರಣ್ಣ ಮಾತನಾಡಿ ಒಂದು ಕಡೆ ಕೆರೆ ನಮ್ಮದು ಎಂದು ಕೆಲವರು ಖಾತೆ ತಮ್ಮ ಹೆಸರಿಗೆ ಬದಲಾವಣೆ ಮಾಡಿಸಲು ಪ್ರಯತ್ನಿಸುತ್ತಿದ್ದು ಇನ್ನೊಂದು ಕಡೆ ಕೆರೆ ಅಂಗಳದಲ್ಲಿಯೇ 35ಕ್ಕೂ ಹೆಚ್ಚು ನಿವೇಶನಗಳನ್ನ ನಿರ್ಮಾಣ ಮಾಡಿಕೊಂಡು ಕೆರೆ ಅಂಗಳದಲ್ಲಿ 70 ಎಕರೆಗೂ ಹೆಚ್ಚು ಜಮೀನು ಉಳುಮೆ ಮಾಡಿ ಕೊಳವೆ ಬಾವಿಗಳನ್ನು ನಿರ್ಮಿಸಿ ತೋಟಗಳನ್ನ ಬೆಳೆಸಿ ತಮ್ಮ ತಾತ ಮುತಾತರ ಕಾಲದಿಂದ ಬಂದಂತ ಪಿತ್ರಾರ್ಜಿತ ಆಸ್ತಿಯ ರೀತಿಯಲ್ಲಿ ಸಾಗುವಳಿ ಮಾಡಿ ಕೆರೆ ಒತ್ತುವರಿ ಮಾಡಿದ್ದಾರೆ ಇಂಥ ಸಂದರ್ಭದಲ್ಲಿ ಪೂಜಾ ಅರಳ್ಳಿ ಕೆರೆ ಉಳಿವಿಗಾಗಿ ಕೆರೆಯ ರಕ್ಷಣೆಗಾಗಿ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಜನರ ಹೋರಾಟ ಅನಿವಾರ್ಯವಾಗಿದೆ ಸ್ಥಳೀಯ ಆಡಳಿತ ಕಣ್ಣು ಮುಚ್ಚಿದ್ದು ಕೆರೆ ಒತ್ತುವರಿ ಮಾಡಿರುವವರ ಮೇಲೆ ಕ್ರಮ ಕೈಗೊಳ್ಳದೆ ನಿವೇಶನಗಳನ್ನ ನಿರ್ಮಿಸಲು ಅನುಮತಿ ನೀಡಿ ಮೌನ ವಹಿಸಿದೆ ಆದ್ದರಿಂದ ಕೂಡಲೇ ಕ್ರಮ ಜರುಗಿಸಿ ಕೆರೆಯನ್ನ ರಕ್ಷಿಸಲು ಸರ್ವ ಸದಸ್ಯರ ಹಾಗೂ ಗ್ರಾಮ ಸಭೆಗಳ ಮೂಲಕ ಕೆರೆ ಉಳಿಸಿ ಸರ್ಕಾರಿ ದಾಖಲಾತಿಗಳಲ್ಲಿ ಸೇರಿಸಿ ಎಂಬ ನಿರ್ಣಯವನ್ನು ಜಾರಿಗೆ ಕಳಿಸಿ ಸರ್ಕಾರಕ್ಕೆ ಮತ್ತು ಮೇಲಧಿಕಾರಿಗಳಿಗೆ ಲಿಖಿತ ರೂಪದಲ್ಲಿ ವರದಿ ನೀಡಲು ಅಖಿಲ ಭಾರತ ಕಿಸಾನ್ ಸಭಾ ಒತ್ತಾಯಿಸುತ್ತದೆ ನಮ್ಮ ಹೋರಾಟ ಪೂಜಾರಹಳ್ಳಿ ಕೆರೆ ಸರ್ಕಾರ ದಾಖಲಾತಿಯಲ್ಲಿ ಸೇರುವರೆಗೂ ಅಖಿಲ ಭಾರತ ಕಿಸಾನ್ ಸಭಾ ಜನರಹೋರಾಟ ನಿಲ್ಲದು ಯಾರ ವಿರುದ್ಧವೂ ಯಾರ ಪರವಾಗಿ ನಮ್ಮ ಹೋರಾಟವಲ್ಲ ಕೆರೆ ರಕ್ಷಣೆಗಾಗಿ ನಡಿಯುವ ಹೋರಾಟ ಈಗಾಗಲೇ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೆರೆಯ ಸರ್ವೆ ಪ್ರಕ್ರಿಯೆ ಮುಗಿದು ಕೆರೆ ಸ್ಥಿತಿಯನ್ನು ಉನ್ನತ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳಲು ಮುಂದಾಗಿದ್ದು ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಆದರೂ ಕೂಡಲೇ ಎಲ್ಲ ದಾಖಲಾತೆಗಳಲ್ಲಿ ಸರ್ಕಾರಿ ಕೆರೆ ಎಂದು ನಮೂದಿಸಬೇಕು ಕೆರೆ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಿ ಕೆರೆ ರಕ್ಷಣೆ ಮಾಡಬೇಕೆಂದು ಈ ದಿನ ಮನವಿ ನೀಡಲಿದ್ದೇವೆ ಎಂದು ಮಾತನಾಡಿದರು. ಇದೇ ಸಂದರ್ಭದಲ್ಲಿ ಮನವಿಯನ್ನ ಅಭಿವೃದ್ಧಿ ಅಧಿಕಾರಿಗಳಾದ ನಾರಾಯಣ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಿಲ್ಪ ಬಸವರಾಜ್ ಮನವಿ ಪಡೆದು ತಮ್ಮ ವ್ಯಾಪ್ತಿಯಲ್ಲಿ ಬರುವ ಕ್ರಮ ಕೈಗೊಳ್ಳಲು ಸರ್ವ ಸದಸ್ಯರ ಸಭೆ ಕರೆದು ತೀರ್ಮಾನ ಕೈಗೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ಅಭಿವೃದ್ಧಿ ಅಧಿಕಾರಿಗಳು ಪ್ರತಿಭಟನಾಕಾರರಿಗೆ ತಿಳಿಸಿದರು.  ಈ ದಿನದ ಚಳುವಳಿಯಲ್ಲಿ ಭಾಗವಹಿಸಿದ ಮುಖಂಡರು.  ಮಹೇಶ್ ಮಾಜಿ ಅಧ್ಯಕ್ಷರು ತಾಲೂಕು ಪಂಚಾಯಿತಿ ಯು ಪೆನ್ನಪ್ಪ ಖಜಾಂಚಿ ಸಿಪಿಐ ಪಕ್ಷ ಕೂಡ್ಲಿಗಿ ಎಕೆಡಿ ಮಾರೇಶ್ ದಾಸಣ್ಣ ಟಿ ಗೆದ್ದಯ್ಯ ಅಂಜನಿ ಮಂಜುನಾಥ ಓಬಳೇಶ ಚಿತ್ತಣ್ಣ ಹೇಮಣ್ಣ ತಿಪ್ಪೇಸ್ವಾಮಿ ಬಾಲರಾಜ್ ಭೀಮೇಶ್ ರಮೇಶ್ ಗೌಡ ಗೂಳಿ ಬಸವರಾಜ ವಕೀಲ ಬೋರಯ್ಯ ಗೋಪಿ ತಿಪ್ಪಕ್ಕ ಗಿರಿಜಮ್ಮ ಗಾಮಕ್ಕ ಪ್ರೇಮ ಓಬಮ್ಮ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು. ಸದಸ್ಯರಾದ ವೆಂಕಟೇಶ್ ಸಿ ನಾಗೇಶ್ ಗೊಂಚಿಗರ್ ನಾಗರಾಜ್ ಸಿದ್ದಣ್ಣ ಮುಂತಾದವರು ಉಪಸ್ಥಿತರಿದ್ದರು ನೂರಾರು ಜನ ಮಹಿಳೆಯರು ರೈತರು ಕೂಲಿಕಾರ್ಮಿಕರು ಅಖಿಲ ಭಾರತ ಕಿಸಾನ್ ಸಭಾ ಮುಖಂಡರು ಕಾರ್ಯಕರ್ತರು ಚಳುವಳಿಯಲ್ಲಿ ಭಾಗವಹಿಸಿದ್ದರು.

ವರದಿ –   ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008938428

Leave a Reply

Your email address will not be published.