ಕುಷ್ಟಗಿ ತಾಲೂಕಾ ಆಮ ಆದ್ಮಿ ಪಕ್ಷದ ಪದಾಧಿಕಾರಿಗಳ ಸಭೆ, ಹಾಗೂ ಚುನಾವಣಾ ಸಮಾಲೋಚನೆ,,,,,

Spread the love

ಕುಷ್ಟಗಿ ತಾಲೂಕಾ ಆಮ ಆದ್ಮಿ ಪಕ್ಷದ ಪದಾಧಿಕಾರಿಗಳ ಸಭೆ, ಹಾಗೂ ಚುನಾವಣಾ ಸಮಾಲೋಚನೆ,,,,,

ದಿ: 01/07/2022  ರಂದು ಕುಷ್ಟಗಿ ಪಟ್ಟಣದಲ್ಲಿ,ಕುಷ್ಟಗಿ ತಾಲುಕಾ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆ ನಡೆಸಲಾಯಿತು. ಕುಷ್ಟಗಿ ತಾಲೂಕಿನ ತಾಲೂಕು ಪಂಚಾಯತ್, ಮತ್ತು ಜಿಲ್ಲಾ ಪಂಚಾಯತ್  ಮತ ಕ್ಷೇತ್ರಗಳ ಚುನಾವಣೆ ಹಾಗೂ ಕುಷ್ಟಗಿ ತಾಲೂಕಿನಲ್ಲಿ ಪಕ್ಷದ ಸಂಘಟನೆ ಹಾಗೂ ಮುಂಬರುವ ದಿನಗಳಲ್ಲಿ ಪಕ್ಷವು ಸ್ಥಳೀಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಹೋರಾಟದ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಕಾರ್ಯಕ್ರದಲ್ಲಿ ಜಿಲ್ಲಾ ಜಂಟಿ ಕಾರ್ಯದರ್ಶಿ: ಮೊಹಮ್ಮದ್ ರಿಜವಾನ ದಳಪತಿ, ತಾಲೂಕಾ ಅಧ್ಯಕ್ಷರಾದ: ರವಿಕುಮಾರ, ನಗರ ಘಟಕ ಅಧ್ಯಕ್ಷರಾದ, ಸಯ್ಯದ ಇಸ್ಮಾಯಿಲ್ ಅತ್ತಾರ, ತಾಲೂಕ ಸಂಘಟಕಾರಾದ ಯಮನೂರಪ್ಪ ಬಿಳೆಗುಡ್ಡ, ತಾಲೂಕ ಪ್ರಧಾನ ಕಾರ್ಯದರ್ಶಿಯಾದ ಬಾಲರಾಜ ಯಾದವ್ ಹಾಗೂ ತಾಲೂಕಿನ ಸಮಸ್ತ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published.