ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯಿಂದ ಕರ್ನಾಟಕ ರಾಜ್ಯದಲ್ಲಿ  ಒನ್ ಹೆಲ್ತ್ ಪ್ರಾಯೋಗಿಕ ಯೋಜನೆಗೆ ಚಾಲನೆ,,,,,,

Spread the love

ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯಿಂದ ಕರ್ನಾಟಕ ರಾಜ್ಯದಲ್ಲಿ  ಒನ್ ಹೆಲ್ತ್ ಪ್ರಾಯೋಗಿಕ ಯೋಜನೆಗೆ ಚಾಲನೆ,,,,,,

ಬೆಂಗಳೂರು, ಜೂನ್ ೨೮, ೨೦೨೨ ರಂದು ಕರ್ನಾಟಕ ರಾಜ್ಯದಲ್ಲಿ ಒನ್ ಹೆಲ್ತ್ ಪ್ರಾಯೋಗಿಕ ಯೋಜನೆಯನ್ನು ಭಾರತ ಸರ್ಕಾರದ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ,  ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಕಾರ್ಯದರ್ಶಿ ಶ್ರೀ ಅತುಲ್ ಚತುರ್ವೇದಿ ಯವರು  ಉದ್ಘಾಟಿಸಿದರು. ಇದೇ ವೇಳೆ ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಕೆಪಾಸಿಟಿ ಬಿಲ್ಡಿಂಗ್ ಪ್ಲಾನ್ ಮತ್ತು ಕನ್ನಡದಲ್ಲಿ ಒನ್ ಹೆಲ್ತ್ ಕಿರು ಹೊತ್ತಗೆಯನ್ನು ಬಿಡುಗಡೆ ಮಾಡಲಾಯಿತು. ಒನ್-ಹೆಲ್ತ್ ಎನ್ನುವುದು ಬಹು-ವಲಯದ ವಿಧಾನವಾಗಿದ್ದು, ಅದು ಮಾನವ, ಪ್ರಾಣಿ ಮತ್ತು ಪರಿಸರದ ಆರೋಗ್ಯ, ಈ ಮೂರು ಅಂಶಗಳ ಪರಸ್ಪರ ಸಂಪರ್ಕ, ಅವಲಂಬನೆಯನ್ನು ಪರಿಗಣಿಸುತ್ತದೆ. ಕೋವಿಡ್ ಸಾಂಕ್ರಾಮಿಕದ ನಂತರ ಸಮಗ್ರ ವಿಧಾನವನ್ನು ತೆಗೆದುಕೊಳ್ಳಲು ಈ ಕಲ್ಪನೆಯು ಪ್ರಮುಖ ಪಾತ್ರ ವಹಿಸುತ್ತದೆ. ಈ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಭಾರತ ಸರ್ಕಾರದ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಸಚಿವಾಲಯದ ಕಾರ್ಯದರ್ಶಿ ಶ್ರೀ ಅತುಲ್ ಚತುರ್ವೇದಿ ಅವರು ಭಾರತದಲ್ಲಿ ಒನ್ ಹೆಲ್ತ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದ್ದು ಇದರಿಂದ ಜಾನುವಾರು, ಮಾನವ, ವನ್ಯಜೀವಿಗಳ ಆರೋಗ್ಯ ಮತ್ತು ಪರಿಸರ ಸ್ವಾಸ್ಥಯವನ್ನು ಕಾಪಾಡುವ ಮತ್ತು ಸುಧಾರಣೆ ಮಾಡುವ ನಿಟ್ಟಿನಲ್ಲಿ ಸಹಕಾರಿಯಾಗಿದೆ. ಈ ಕಾರ್ಯಕ್ರಮಕ್ಕೆ ಪಶು ಸಂಗೋಪನೆ ಮತ್ತು ವನ್ಯಜೀವಿ ಇಲಾಖೆಗಳು ಸಹಭಾಗಿತ್ವವನ್ನು ಹೊಂದುವ ಮೂಲಕ ಜಾನುವಾರು ಮತ್ತು ವನ್ಯಜೀವಿಗಳ ರೋಗಗಳ ತಪಾಸಣೆ ಪ್ರಕ್ರಿಯೆಯನ್ನು ಸುಧಾರಣೆ ಮಾಡುವುದು, ಕಣ್ಗಾವಲು, ದತ್ತಾಂಶಗಳ ಸಂಗ್ರಹ ಮತ್ತು ಡಿಜಿಟಲೀಕರಣ, ಕಾರ್ಯವಿಧಾನಗಳನ್ನು ಹಂಚಿಕೊಳ್ಳುವುದು, ಸಮುದಾಯ ಸದಸ್ಯರಲ್ಲಿ ಸಂವಹನ ಮಟ್ಟವನ್ನು ಸುಧಾರಣೆ ಮಾಡುವುದು, ವನ್ಯಜೀವಿಗಳ ಆರೋಗ್ಯದ ಬಗ್ಗೆ ಗಮನಹರಿಸುವುದು ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಸಹಭಾಗಿತ್ವ ಹೊಂದಿರುವ ಎಲ್ಲಾ ಇಲಾಖೆಗಳು ಗಮನಹರಿಸಲಿವೆ. ಈ ಯೋಜನೆಯು ನೆಟ್ವರ್ಕ್ನಲ್ಲಿನ ಪ್ರಯೋಗಾಲಯಗಳನ್ನು ಬಲವರ್ಧನೆ ಮಾಡಿ ಸಂಯೋಜಿಸುತ್ತದೆ ಹಾಗು ಉದ್ದೇಶಿತ ಕಣ್ಗಾವಲು ಯೋಜನೆಯ ಅಭಿವೃದ್ಧಿಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಅಲ್ಲದೇ, ರಾಷ್ಟ್ರೀಯ  ಡಿಜಿಟಲ್ ಜಾನುವಾರು ಮಿಷನ್(ಎನ್ಡಿಎಲ್ಎಂ)ನ ಡಿಜಿಟಲ್ ಆರ್ಕಿಟೆಕ್ಚರ್ನೊಂದಿಗೆ ದತ್ತಾಂಶವನ್ನು ಸಂಯೋಜನೆ ಮಾಡುತ್ತದೆ. ಕರ್ನಾಟಕದಲ್ಲಿನ ಒನ್ ಹೆಲ್ತ್ ಪ್ರಾಯೋಗಿಕ ಯೋಜನೆಯು  ʼರಾಷ್ಟ್ರಮಟ್ಟದ ಒನ್ ಹೆಲ್ತ್ ವೇದಿಕೆಯನ್ನುʼ ಅನುಷ್ಠಾನಗೊಳಿಸಲು ಬುನಾದಿಯಾಗುತ್ತದೆ ಎಂದು ತಿಳಿಸಿದರು.

ಈ ಸಮಾರಂಭದಲ್ಲಿ ಡಾ. ಪ್ರವೀಣ್ ಮಲ್ಲಿಕ್, ಆಯುಕ್ತರು, ಭಾರತ ಸರ್ಕಾರದ ಪಶು ಸಂಗೋಪನೆ ಇಲಾಖೆ, ಅಲ್ಕೇಶ್ ವಾಧ್ವಾನಿ ನಿರ್ದೇಶಕ ಬಡತನ ನಿರ್ಮೂಲನೆ ಭಾರತ, ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್(ಬಿಎಂಜಿಎಫ್), ಸಲ್ಮಾ ಕೆ.ಫಾಹಿಮ್, ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರದ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ಡಾ. ಪುಷ್ಪಲತಾ, ಪ್ರಭಾರಿ ಆರೋಗ್ಯ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ. ವಿಜಯಕುಮಾರ್ ಗೋಗಿ, ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗಳು, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಮತ್ತು ಡಾ. ಮಂಜುನಾಥ್ ಎಸ್. ಪಾಳೇಗಾರ್, ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಪಶುಸಂಗೋಪನೆ, ವನ್ಯಜೀವಿ ಕ್ಷೇತ್ರಗಳ ಇತರೆ ಪರಿಣತರು ಪಾಲ್ಗೊಂಡಿದ್ದರು. ಭಾರತ ಸರ್ಕಾರದ ಪಶು ಸಂಗೋಪನೆ ಆಯುಕ್ತ ಡಾ.ಪ್ರವೀಣ್ ಮಲ್ಲಿಕ್ ಅವರು ಮಾತನಾಡಿ, “ಕರ್ನಾಟಕದಲ್ಲಿ ಒನ್ ಹೆಲ್ತ್ ಫ್ರೇಂವರ್ಕ್ ಅನ್ನು ಆರಂಭಿಸುವುದರೊಂದಿಗೆ ನಾವು ಮಾನವ, ಪರಿಸರ ಮತ್ತು ಜಾನುವಾರುಗಳ ಆರೋಗ್ಯದ ಕಡೆಗೆ ಹೆಚ್ಚು ಗಮಹರಿಸಲಿದ್ದೇವೆ. ಪ್ರಾಯೋಗಿಕ ಯೋಜನೆಯಾಗಿ ರೂಪಿಸಲಾಗಿರುವ ಆರು ವಿಭಿನ್ನವಾದ ಮಧ್ಯಸ್ಥಿಕೆಗಳು ವಲಯಗಳ ಮಧ್ಯೆ ಉತ್ತಮ ಸಮನ್ವಯ ಮತ್ತು ವಿಭಿನ್ನ ತಂಡಗಳು ಸಾಮರ್ಥ್ಯ ವೃದ್ಧಿಗೆ ಕಾರಣವಾಗುತ್ತವೆ. ರಾಜ್ಯದ ಇಲಾಖೆಗಳು ಮತ್ತು ಎಲ್ಲಾ ಪಾಲುದಾರ ಸಂಸ್ಥೆಗಳ ಬೆಂಬಲದೊಂದಿಗೆ ಪ್ರಾಯೋಗಿಕವಾಗಿ ನಾವು ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದೇವ”ಎಂದು ತಿಳಿಸಿದರು.ಕರ್ನಾಟಕ ಸರ್ಕಾರದ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ.ಫಾಹಿಮ್ ಅವರು ಮಾತನಾಡಿ, “ಕರ್ನಾಟಕದಲ್ಲಿ ಒನ್ ಹೆಲ್ತ್ ಪ್ರಾಯೋಗಿಕ ಯೋಜನೆಯನ್ನು ಜಾರಿಗೊಳಿಸುತ್ತಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ. ನಮ್ಮ ರಾಜ್ಯದಲ್ಲಿ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳ ಸುಧಾರಣೆಗೆ ನೆರವಾಗುವ ಈ ಪ್ರಾಯೋಗಿಕ ಯೋಜನೆ ದೀರ್ಘಾವಧಿವರೆಗೆ ಸಾಗುತ್ತದೆ ಎಂಬ ವಿಶ್ವಾಸವಿದೆ’ಎಂದರು. ಕರ್ನಾಟಕ ಸರ್ಕಾರದ , ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಗೋಗಿ ಮತ್ತು ಡಾ. ಪುಷ್ಪಲತಾ, ಪ್ರಭಾರಿ ಆರೋಗ್ಯ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ. “ರಾಜ್ಯದಲ್ಲಿ ಒನ್ ಹೆಲ್ತ್ ಫ್ರೇಂವರ್ಕ್ ಅನ್ನು ಅನುಷ್ಠಾನಕ್ಕೆ ತರುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. ಈ ಉಪಕ್ರಮಕ್ಕೆ ನಮ್ಮ ಇಲಾಖೆ ಬೆಂಬಲವಾಗಿ ನಿಲ್ಲುವ ಬದ್ಧತೆಯನ್ನು ತೋರಿಸುತ್ತದೆ’ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಭಾರತದ ಬಡತನ ನಿರ್ಮೂಲನೆ, ಬಿಲ್ ಮತ್ತು ಮೆಲಿಂಡ ಗೇಟ್ಸ್ ಫೌಂಡೇಶನ್ (ಬಿಎಂಜಿಎಫ್)ನ ನಿರ್ದೇಶಕ ಅಲ್ಕೇಶ್ ವಾಧ್ವಾನಿ ಅವರು, “ಈ ಪೈಲಟ್ ಯೋಜನೆಯ ಆರಂಭ ನಮಗೆ ಸಂತಸ ತಂದಿದೆ. ಭಾರತಕ್ಕಾಗಿ ಒನ್ ಹೆಲ್ತ್ ಫ್ರೇಂವರ್ಕ್ ಅನುಷ್ಠಾನಕ್ಕಾಗಿ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಗೆ ಸಂಪೂರ್ಣ ಬೆಂಬಲವಿದೆ  ಎಂದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *