ತಂಬಾಕು ಸೇವನೆ ಇಡೀ ಸಮಾಜಕ್ಕೆ ಕಂಟಕ, ನ್ಯಾ..ಕೆ.ಎ.ನಾಗೇಶ,,,,,
ವಿಜಯನಗರ ಜಿಲ್ಲೆ ಕೂಡ್ಲಿಗಿ, ತಂಬಾಕು ಸೇವನೆ ಕೇವಲ ವೈಯಕ್ತಿ ಸಮಸ್ಯೆ ಮಾತ್ರವಲ್ಲ. ಇಡೀ ಸಮಾಜಕ್ಕೆ ಕಂಟಕವಾಗಿದೆ ಕಾರಣ ತಂಬಾಕು ಸೇವನೆ ನಿಷೇಧ ಮಾಡಬೇಕಾಗಿದೆ.ಪ್ರಜ್ಞಾವಂತ ನಾಗರೀಕರು ಹಾಗೂ ಯುವ ಪೀಳಿಗೆಯೆ ಅತಿ ಹೆಚ್ಚು ದಾಸರಾಗುತ್ತಿದ್ದಾರೆ,ಇದರಿಂದಾಗಿ ಆರೋಗ್ಯದ ಜೊತೆಗೆ ಇನ್ನಿತರೆ ತೊಂದರೆಗಳಿಗೆ ಗುರಿಯಾಗುತ್ತಿದ್ದಾರೆ ತಿಳಿದೂ ತಾಂಬಾಕನ್ನು ಬಿಡದಿರುವುದು ದುರದುಷ್ಟಕರ ಸಂಗತಿಯಾಗಿದೆ ಎಂದು, ಹಿರಿಯ ಶ್ರೇಣಿ ನ್ಯಾಯಾಧೀಶರಾದ ಕೆ.ಎ.ನಾಗೇಶರವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಪಟ್ಟಣ ನ್ಯಾಯಾಲಯದ ಆವರಣದಲ್ಲಿ ಜಾಗೃತಿ ಜಾಥಕ್ಕೆ ಚಾಲನೆ ನೀಡಿ,ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ,ನ್ಯಾಯಾಂಗ ಇಲಾಖೆ ಹಾಗೂ ಆರೋಗ್ಯ ಇಲಾಖೆ, ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ,ವಿವಿದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸ್ಥಳೀಯ ಆಡಳಿತ,ಆರಕ್ಷಕ ಇಲಾಖೆ, ಪಪಂ ಸೇರಿದಂತೆ ವಿವಿದ ಇಲಾಖೆಗಳ ಸಹಯೋಗದಲ್ಲಿ ಜಾಗೃತಿ ಜಾಥ ಆಯೋಜಿಸಲಾಗಿತ್ತು. ಸರ್ಕಾರಿ ಸಾಯಕ ಅಭಿಯೋಜಕರಾದ ಹೊಸವಡ್ರು ಅಣ್ಣಯ್ಯ, ಸರ್ಕಾರಿ ಅಪರ ವಕೀಲರಾದ ಶಿವಪ್ರಕಾಶಗೌಡ, ವಕೀಲರ ಸಂಘದ ಅಧ್ಯಕ್ಷ ಜಿ.ಹೊನ್ನೂರಪ್ಪ,ಉಪಾಧ್ಯಕ್ಷ ಪಾಪಯ್ಯು, ಕಾರ್ಯದರ್ಶಿ ಬಿ.ಸಿದ್ಲಿಂಗಪ್ಪ, ಕಾರ್ಮಿಕ ಮುಖಂಡ ವಕೀಲರಾದ ಸಿ.ವಿರುಪಾಕ್ಷಪ್ಪ, ವಕೀಲರ ಸಂಘದ ಪದಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿ ಪ್ರದೀಪ್ ಕುಮಾರ, ವಿವಿದ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ,ಸಾರ್ವಜನಿಕರು ಇದ್ದರು.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ