ಲಾಕ್​ಡೌನ್ ನೆಪದಲ್ಲಿ ಬೆಲೆ ಹೆಚ್ಚಳದ ದೂರು : ಅಧಿಕಾರಿಗಳಿಂದ ದಾಳಿ

Spread the love

ಲಾಕ್ಡೌನ್ ನೆಪದಲ್ಲಿ ಬೆಲೆ ಹೆಚ್ಚಳದ ದೂರು : ಅಧಿಕಾರಿಗಳಿಂದ ದಾಳಿ

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದ ಘಟನೆ. ಸರ್ಕಾರದ ಆದೇಶಕ್ಕೂ ಮೀರಿ ಬೆಲೆ ಹೆಚ್ಚಳ ಮಾಡುವವರ ವಿರುದ್ದ ಬಿಸಿ ಮುಟ್ಟಿಸಿದ ಅಧಿಕಾರಿಗಳು. ಯಾವುದೇ ಕಾರಣಕ್ಕೂ ಸರಕುಗಳ ಬೆಲೆ ಹೆಚ್ಚು ಮಾಡುವಂತಿಲ್ಲ. ಮಾಡಿದರೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲಾಗುವುದು.  ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ ಬಳಕೆ ಮಾಡಿ ಎಂದು ತಾಕೀತು.. ಲಾಕ್​ಡೌನ್ ನೆಪದಲ್ಲಿ ನಿತ್ಯ ಅಗತ್ಯ ವಸ್ತು ಹಾಗೂ ಸರಕು ಸೇವೆಗಳ ಬೆಲೆ ಹೆಚ್ಚಳ ಮಾಡಿರುವ ಬಗ್ಗೆ ಸಾರ್ವಜನಿಕ ವಲಯದಿಂದ ವ್ಯಕ್ತವಾದ ದೂರಿನ ಹಿನ್ನೆಲೆ ಕಾನೂನು ಮತ್ತು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿ ದಿಢೀರ್ ದಾಳಿ ಮಾಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯಡಿ ಇರುವ ಕಾನೂನು ಮತ್ತು ಮಾಪನ ಶಾಸ್ತ್ರದ ಇಲಾಖೆಯ ನಿರೀಕ್ಷಕ ಬದುಯುದ್ದೀನ್, ಅಂಗಡಿ-ಮುಂಗಟ್ಟುಗಳಿಗೆ ದಿಢೀರ್ ದಾಳಿ ಮಾಡಿ ಪರಿಶೀಲಿಸಿದರು. ನಗರದ ಬಸ್ ನಿಲ್ದಾಣ ಹಿಂದಿರುವ ವಿಎಎಂ ಫುಡ್ ಬಜಾರ್, ನೀಲಕಂಟೇಶ್ವರ ವೃತ್ತದಲ್ಲಿರುವ ರಿಲಾಯನ್ಸ್ ಸಂಸ್ಥೆಯ ಸ್ಮಾಟರ್ ಪಾಯಿಂಟ್ ಹಾಗೂ ಅದರ ಎದುರು ಇರುವ ಹೋಮ್ ನೀಡ್ಸ್ ಸೇರಿದಂತೆ ನಗರದ ನಾನಾ ಅಂಗಡಿಗಳಿಗೆ ಅಧಿಕಾರಿ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ ಅಧಿಕಾರಿ, ಯಾವುದೇ ಕಾರಣಕ್ಕೂ ಸರಕುಗಳ ಬೆಲೆ ಹೆಚ್ಚು ಮಾಡುವಂತಿಲ್ಲ. ಮಾಡಿದರೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲಾಗುವುದು. ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ ಬಳಕೆ ಮಾಡಿ ಎಂದು ತಾಕೀತು ಮಾಡಿದರು. ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ ಅಧಿಕಾರಿ, ಯಾವುದೇ ಕಾರಣಕ್ಕೂ ಸರಕುಗಳ ಬೆಲೆ ಹೆಚ್ಚು ಮಾಡುವಂತಿಲ್ಲ. ಮಾಡಿದರೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲಾಗುವುದು. ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ ಬಳಕೆ ಮಾಡಿ ಎಂದು ತಾಕೀತು ಮಾಡಿದರು.

ವರದಿ – ಅಮಾಜಪ್ಪ ಹೆಚ್. ವರದಿಗಾರರು.

Leave a Reply

Your email address will not be published. Required fields are marked *