*ಸಮಾನತೆಯ ಹರಿಕಾರ**

Spread the love

*ಸಮಾನತೆಯ ಹರಿಕಾರ**

ಶೋಷಿತರನು ಎಚ್ಚರಿಸಿದಾತ

ಕಲ್ಲು ಮುಳ್ಳಿನ ಮಾರ್ಗದಿ ನಡೆದು

ಶಿಕ್ಷಣದಿಂದ ಹಿರಿಮೆ ಬೆಳೆಸಿಕೊಂಡು

ಸಮಾನತೆಗೆ ನಾಂದಿ ಹಾಡಿದಾತ

 

ಬುದ್ಧನ ಶಾಂತಿಮಾರ್ಗವ ಪಿಡಿದು

ಜಾತಿ ಧರ್ಮಗಳ ದೂಷಿಸಿದಾತ

ಸಜ್ಜನಿಕೆ ಸ್ವಾಭಿಮಾನವ ಕಲಿತು

ಸ್ತ್ರೀ ಕಾನೂನು ಬೆಳಕಿಗೆ ತಂದಾತ

 

ಸಂವಿಧಾನಕೆ ಬುನಾದಿ ಹಾಕಿದಾತ

ಮನುವಾದಿಗಳಿಗೆ ಧಿಕ್ಕಾರ ಕೂಗಿದಾತ

ಕೂಲಿ ಕಾರ್ಮಿಕರ ನೆಚ್ಚಿನ ಹರಿಕಾರ

ಹಜಾನುಭಾವದ…. ಸಧೃಡಕಾರ

 

ಪೆಟ್ಟಿಗೆಲಿ ಹೊತ್ತಿಗೆಗಳ ತುಂಬಿಕೊಂಡ

ಭಾರತಕೆ ಬಂದ ಧೀಮಂತ ನೇತಾರ

ಸರ್ವ ಶಿಕ್ಷಣಕೆ ಪುಷ್ಠಿ ನೀಡಿದಾತ

ಭಾರತದ ಆಶಾಕಿರಣ ಅಂಬೇಡ್ಕರ

 

ಪ್ರಜಾಪ್ರಭುತ್ವಕೆ ನಾಂದಿಹಾಡಿದಾತ

ಜಗಕೆಲ್ಲ ಹಿರಿಮೆ ತೋರಿದ ಸುವಿಚಾರ

ಸ್ವಾತಂತ್ರದ ಹಣತೆಯ ಸೂತ್ರಧಾರ

ಸರ್ವಜ್ಞಾನ ಪಡೆದುಕೊಂಡ ಅಂಬೇಡ್ಕರ

*ಪ್ರಭುರಾಜಸುತೆ*

( *ಬಸಮ್ಮಹಿರೇಮಸ.ಬಾ.ಪ್ರೌ.ಶಾ. ಸಿಂಧನೂರು ಜಿ:  ರಾಯಚೂರು)

Leave a Reply

Your email address will not be published. Required fields are marked *