ಕೊಪ್ಪಳ ನಗರಸಭೆ ಬೇಜವಾಬ್ದಾರಿತನದ. ವಿರುದ್ಧ ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಬಳಗದಿಂದ ಪ್ರತಿಭಟನೆ.

Spread the love

ಕೊಪ್ಪಳ ನಗರಸಭೆ ಬೇಜವಾಬ್ದಾರಿತನದ. ವಿರುದ್ಧ ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಬಳಗದಿಂದ ಪ್ರತಿಭಟನೆ.

ಕೊಪ್ಪಳ ಜಿಲ್ಲೆಯ ಗವಿಮಠದ ಪಕ್ಕದಲ್ಲಿ ಇರುವ ರುದ್ರಭೂಮಿ ಸ್ವಚ್ಛತೆಗೆ ಪಣ ತೊಟ್ಟಿರುವ ಕೆಚ್ಚೆದೆಯ ಕನ್ನಡತಿ ಅಕ್ಕ ಅನು ತಂಡ  ಸುಮಾರು ದಿನಗಳಿಂದ ರುದ್ರ ಭೂಮಿ ಸ್ವಚ್ಛತೆ ಮಾಡುತ್ತಿದೆ. ಸ್ವಚ್ಛತೆ ಮಾಡುವ ಮುನ್ನ ಕಸವನ್ನು ವಿಲೇವಾರಿ ಮಾಡಲು ಕೊಪ್ಪಳ ನಗರಸಭೆ ಪೌರಾಯುಕ್ತರಿಗೆ  ನಮಗೆ ಟ್ರಾಕ್ಟರ್ ಅವಶ್ಯಕತೆ ಇದೆ ಕಳುಹಿಸಿ ಕೊಡಿ ಎಂದು ಮನವಿ ಮಾಡಿದ್ದಾರೆ.   ಆದರೂ  ಅಹಂಕಾರದ  ಅಧಿಕಾರಿಗಳು ಕ್ಯಾರೆ ಎಂದಿಲ್ಲ. ತದನಂತರ ಮತ್ತೊಮ್ಮೆ ಅಧಿಕಾರಿಗಳ ಗಮನಕ್ಕೆ ತಂದರೂ   ಅಧಿಕಾರಿಗಳು ನಾವು ಅಲ್ಲಿಗೆ ಟ್ರ್ಯಾಕ್ಟರ್ ಕಳುಹಿಸಲು ಆಗುವದಿಲ್ಲ ಅಂದಿದ್ದಾರೆ ಅಧಿಕಾರಿಗಳು.  ತಕ್ಷಣವೇ ಹೆಚ್ಚೆತ್ತು ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಬಳಗ ಕೆಲವೇ ನಿಮಿಷಗಳಲ್ಲಿ ಬಾಡಿಗೆ ಟ್ರ್ಯಾಕ್ಟರ್ ಮುಖಾಂತರ ರುದ್ರಭೂಮಿಯ ಘನತ್ಯಾಜ್ಯವನ್ನು  ನಗರಸಭೆ ಮುಂದೆ ತಂದು ನಗರಸಭೆ ಎದುರಲ್ಲೆ ವಿಲೇವಾರಿ ಮಾಡುತ್ತೇವೆ ಎಂದು. ಅಧಿಕಾರಿಗಳಿಗೆ  ಛೀ ಮಾರಿ ಹಾಕಿದ್ದಾರೆ. ನಂತರ ನಗರಸಭೆಯವರು ಟ್ರ್ಯಾಕ್ಟರ್ ಕಳುಹಿಸಿದರೆ ಸೂಕ್ತ ಜಾಗಕ್ಕೆ ಈ ಕಸವನ್ನು ವಿಲೇವಾರಿ ಮಾಡುತ್ತೇವೆ  ಇಲ್ಲದೆ ಹೋದಲ್ಲಿ ನಗರಸಭೆ ಮುಂಭಾಗದಲ್ಲಿ ವಿಲೇವಾರಿ ಮಾಡುತ್ತೇವೆ ಎಂದು. ವಿನೂತನ ಪ್ರತಿಭಟನೆ ಮಾಡಿದರು.  ಇಂತಹ ಅತ್ಯಂತ ಸಮಾಜಮುಖಿ ಸಮಾಜಸೇವಾ ಕೈಗೊಳ್ಳವ ಇಂತಹ ಸಂಘ ಸಂಸ್ಥೆಗಳಿಗೆ ಸಹಕಾರ ನಿಡಬೇಕಾಗಿರುವದು ಮಾನವಿಯ ಮನುಷ್ಯನ ಗುಣಧರ್ಮ. ಎನೇ ಆಗಲಿ ಕೆಚ್ಚೆದೆಯ ಕನ್ನಡತಿ ಅಕ್ಕ ಅನು ತಂಡವು ಸುಮಾರು ವರ್ಷಗಳಿಂದ ಕರ್ನಾಟಕದಾದ್ಯಂತ ಇಂತಹ ಸಮಾಜ ಮುಖಿ ಕಾರ್ಯಗಳು ಮಾಡುತ್ತಾ ಬರುತ್ತಿದೆ. ಹಾಗಾಗಿ ಇಂತಹ ಸಂಘ ಸಂಸ್ಥೆಗಳಿಗೆ ಸಹಕಾರ ನೀಡಿ ಎನ್ನುವದೇ ಪತ್ರಿಕೆಯ ಆಶಯ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *