ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಬಂಧನ, ಒಟ್ಟು 5600 ರುಪಾಯಿ ನಗದು ವಶ..

Spread the love

ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಬಂಧನ, ಒಟ್ಟು 5600 ರುಪಾಯಿ ನಗದು ವಶ..

ಮುದಗಲ್ಲ ಪೋಲಿಸ್ ಠಾಣೆಯ  ಪಿಎಸ್‌ಐ ಪ್ರಕಾಶ್ ಡಂಬಳ ನೇತೃತ್ವದಲ್ಲಿ ದಾಳಿ.. ಮುದಗಲ್ಲ : ಐಪಿಎಲ್ ಬೆಟ್ಟಿಂಗ್ ಆಡುತ್ತಿದ್ದಾಗ ಪ್ರತ್ಯೇಕ ಎರಡು ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ, ಒಟ್ಟು ನಗದು 5600 ರುಪಾಯಿ ನಗದು ವಶ..ಲಿಂಗಸೂರು ತಾಲೂಕು ಮುದಗಲ್ಲ ಹಾಗೂ ಮುದಗಲ್ಲ ಸಮೀಪದ ಆಮದಿಹಾಳ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸೂರು ಮುದಗಲ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬೆಟ್ಟಿಂಗ್ ಆಡುತ್ತಿದ್ದ ವೇಳೆಯಲ್ಲಿ ಪೊಲೀಸರು ದಾಳಿಮಾಡಿ ಶರಣಬಸವ ತಂದೆ ಯಮನೂರಪ್ಪ ಸಿವನಗುತ್ತಿ  ಬಂಧಿತ ಆರೋಪಿ. ಇತನು ಒಂದು ಸಾವಿರ ರೂಪಾಯಿಗೆ ಒಂದು ಸಾವಿರ ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಜನರಿಂದ ಹಣ ಪಡೆದು ಕೊಂಡು ಸಮಯದಲ್ಲಿ  ಕ್ರಿಕೇಟ್ ಬೆಟ್ಟಿಂಗ್ ನಡೆಸುತ್ತಿದಾಗ ದಾಳಿ ಮಾಡಿದ್ದಾರೆ..ಇನ್ನು ಆರೋಪಿಯಿಂದ 3100 ನಗದು ಹಾಗೂ ಬೆಟ್ಟಿಂಗ್ ಸಾಮಗ್ರಿ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಹಾಗೂ ಮುದಗಲ್ಲನ ಇನ್ನೋರ್ವ ವ್ಯಕ್ತಿ ಬಾಷಾ ಅಬ್ದುಲ್ ಘನಿಯನ್ನು ಬಂಧಿಸಿ 2500 ನಗದು ಜಪ್ತಿಗೈದಿದ್ದಾರೆ. ಅಲ್ಲದೇ, ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *