ಘನ ಸರ್ಕಾರದ ವಿರುದ್ದ 8ನೇ ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡ ಸಂವಿಧಾನ ಹಿತಾ ರಕ್ಷಣಾ ಸಮಿತಿ.
ತಾವರಗೇರಾ ಪಟ್ಟಣದಲ್ಲಿಂದು 8ನೇ ದಿನಕ್ಕೆ ಸರಣಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು. ಈ ಹೋರಾಟಕ್ಕೆ ವಾಯ್.ಹೆಚ್. ಯಕ್ಕರನಾಳ ಸರ್. ಹೋರಾಟಗಾರರು ಹಾಗೂ ಹಿರಿಯ ಸಾಹಿತಿಗಳು ಜೊತೆಗೆ ಈ ಹೋರಾಟದಲ್ಲಿ ನಮ್ಮ ತಾವರಗೇರ ಪಟ್ಟಣದ ನಮ್ಮೆಲ್ಲರ ಮಾರ್ಗದರ್ಶನ ಗುರುಗಳಾದ ಪೂಜ್ಯಶ್ರೀ ರುದ್ರಯ್ಯ ತಾತನವರ ಹಿರೇಮಠದ ಕಿರಿಯ ಪೂಜ್ಯರಾದ ಶ್ರೀಮಹೇಶ್ವರ ತಾತನವರು ಶಿವಯೋಗಿ ಶರಣರು ಹೋರಾಟದಲ್ಲಿ ಪಾಲುಗೊಂಡು ಸಂವಿಧಾನ ಹಿತಾ ರಕ್ಷಣಾ ಸಮಿತಿಯವರಿಗೆ ಬೆಂಬಲ ನೀಡಿದರು. 8ನೇ ದಿನದ ಸರಣಿ ಉಪವಾಸ ಸತ್ಯಾಗ್ರಹಿಗಳಾದ 1) ನಾಗರಾಜ ನಂದಾಪುರ 2) ಗೌತಮ್ ಬಂಡಾರಿ 3) ವಿಜೇಯ ಚಲುವಾದಿ 4) ಸುರೇಶ ಬಂಡರಗಲ್ 5) ಸಂಜೀವ್ ಚಲುವಾದಿ. ಈ ಹೋರಾಟಕ್ಕೆ ವಾಯ್.ಹೆಚ್. ಯಕ್ಕರನಾಳ ಸರ್. ಹೋರಾಟಗಾರರು ಹಾಗೂ ಹಿರಿಯ ಸಾಹಿತಿಗಳು ಪಾಲುಗೊಂಡು ಸಂವಿಧಾನ ಹಿತಾ ರಕ್ಷಣಾ ಸಮಿತಿಯವರಿಗೆ ಬೆಂಬಲ ನೀಡಿದರು. ಇಂದು ಸಂಜೆ ನಡೆದ ವಿಶೇಷ ಕಾರ್ಯಕ್ರಮ ಅಂದರೆ ಡಾ॥ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ ನ್ಯಾಯಧೀಶರ ವಿರುದ್ದ ನಾವು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು ಘನ ಸರ್ಕಾರವು ರಾಜ್ಯದ ಹೋರಾಟಗರರನ್ನು ನಿರ್ಲಕ್ಷಿಸಿದೆ & ಮೌನವಾಗಿದೆ. ಈ ಮೌನದ ವಿರುದ್ದ ಹೋರಾಟ ನಮ್ಮ ಪಾಲಿಗೆ ಸರ್ಕಾರ ಸತ್ತು ಹೋಗಿದೆ. ತೆಲೆ ಮುಂಡನೆ ಕೊಟ್ಟರು ಎಚ್ಚರವಾಗದ ಸರ್ಕಾಕ್ಕೆ ಇಂದು ಎಚ್ಚರಿಸಲು ಸರ್ಕಾರದ ವಿರುದ್ದ ಸರ್ಕಾರದ ಅಣುಕು ಶವ ಮಾಡಲಾಯಿತು. ಸರ್ಕಾರದ ಪ್ರತಿಕೃತಿ ನಿರ್ಮಿಸಿ ಅಣುಕು ಶವ ಮಾಡಲಾಯಿತು. ನ್ಯಾಯಧೀಶರ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು. ಹಿರಿಯ ಹೋರಾಟಗಾರರಾದ ಆನಂದ ಬಂಡಾರಿ, ಸಾಗರ ಬೇರಿ, ಸಂಜೀವ್ ಚಲುವಾದಿ, ಯಮನೂರಪ್ಪ ಬಿಳೆಗುಡ್ಡ, ಶ್ಯಾಮೀದ್ ದೋಟಿಹಾಳ, ಇನ್ನಿತರ ಹಿರಿಯ ನಾಯಕರ ನೇತೃತ್ವದಲ್ಲಿ ಡಾ// ಅಂಬೇಡ್ಕರ ವೃತ್ತದ ಹೋರಾಟದ ಜಾಗದಲ್ಲಿ ಮುಕ್ತಾಯಗೊಳಿಸಲಾಯಿತು.
ವರದಿ – ಸಂಪಾದಕೀಯ