ಸರಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಖರೀದಿಗೆ ದಾನಿಗಳು ನೆರವು….

Spread the love

ಸರಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಖರೀದಿಗೆ ದಾನಿಗಳು ನೆರವು….

ಸಿರುಗುಪ್ಪ :  ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಾರ್ವಜನಿಕರ ಮತ್ತು ಡಯಾಲಿಸಿಸ್ ರೋಗಿಗಳ ಅನುಕೂಲಕ್ಕಾಗಿ ಪಿಎಲ್‌ಡಿ ಬ್ಯಾಂಕ್ ಹಾಗೂ ಇತರೆ ರೈತ ಮುಖಂಡರು ಮತ್ತು ವ್ಯಾಪಾರಿಗಳು ನೀಡಿದ 6ಲಕ್ಷ 75ಸಾವಿರ ರೂ. ಗಳ ಹಣ ದೇಣಿಗೆಯೊಂದಿಗೆ ಡಯಲೀಸಿಸ್ ಖರೀದಿಸಲಾಗುವುದೆಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ದೇವರಾಜ ತಿಳಿಸಿದರು. ನಗರದ ಪಿ.ಎಲ್.ಡಿ ಬ್ಯಾಂಕ್ ಸಭಾಂಗಣದಲ್ಲಿ ದೇಣಿಗೆಯ ಚೆಕ್ ಪಡೆದು ಮಾತನಾಡಿದ ಅವರು ಆಸ್ಪತ್ರೆಯಲ್ಲಿ ಈಗಾಗಲೇ ಒಂದು ಡಯಾಲಿಸೀಸ್ ಯಂತ್ರದ ಕಾರ್ಯಕ್ಕೆ ಅನಿವಾರ್ಯತೆಯಿದ್ದು, ತಾಲೂಕಿನ ಗ್ರಾಮೀಣ ಭಾಗದ ಕೆಲವು ಡಯಾಲಿಸೀಸ್ ರೋಗಿಗಳಿಗೆ ವಾರದಲ್ಲಿ ಮೂರು ದಿನಗಳ ಮಟ್ಟಿಗೆ ಅಗತ್ಯವಿರುವ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಗಳಿಗೆ ಇಲ್ಲವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಸಾವಿರಾರು ರೂ. ಹಣ ನೀಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು. ಈ ಬಗ್ಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ರೈತರು, ಉದ್ಯಮಿಗಳು, ಬ್ಯಾಂಕ್‌ಗಳ  ಪಧಾಧಿಕಾರಿಗಳು ಒಗ್ಗೂಡಿ ಸಾರ್ವಜನಿಕ ಆಸ್ಪತ್ರೆ ನೂತನ ಡಯಾಲಿಸಿಸ್ ಯಂತ್ರ ಖರೀದಿಗೆ ಮುಂದಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡರ ತಿಳಿಸಿದಾಗ ಬ್ಯಾಂಕ್‌ನಿAದ ಒಂದು ಲಕ್ಷ ರೂ.ಗಳ ಹಾಗೂ ಬಂಗಾರ ಅಂಗಡಿ ವ್ಯಾಪಾರಿ ಕಿರಣ್‌ಕುಮಾರ್‌ಜೈನ್ 2ಲಕ್ಷ ರೂ, ತಾಲೂಕಿನ ನಾಗರಾಹಾಳು ಗ್ರಾಮದ ಚಂದ್ರಗೌಡ 2ಲಕ್ಷ ರೂ, ವ್ಯಾಯಾಮ ಶಾಲೆ ಸಮಿತಿಯಿಂದ 50ಸಾವಿರ, ರೈತ ದೊರೆಬಾಬು 1ಲಕ್ಷ ರೂ, ಹಾಗೂ ರೈತ ಮುಖಂಡ ಎನ್.ಮೋಹನ್‌ಕುಮಾರ್ 25ಸಾವಿರ ರೂ.ಗಳ ಸಂಗ್ರಹಣೆಯೊ೦ದಿಗೆ ತಾಲೂಕಿನ ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ಡಯಾಲಿಸೀಸ್ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಗಳಿಗೆ ಅಲೆದಾಟ ತಪ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್ ಹಾಗೂ ಇತರೆ ರೈತರ ಸಹಾಯದಿಂದ ಡಯಾಲಿಸೀಸ್ ಯಂತ್ರ ಖರೀದಿಗೆ 6ಲಕ್ಷ 75ಸಾವಿರ ದೇಣಿಗೆ ಸಂಗ್ರಹವಾಗಿದ್ದು, ಯಂತ್ರ ಖರೀದಿಗೆ ಇನ್ನೂ ಹಣ ಅಗತ್ಯ ಬಿದ್ದರೆ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ.ಈರಣ್ಣ ಮಾತನಾಡಿ ಮಂಗಳವಾರ ಈ ಬಗ್ಗೆ ಸಭೆ ಸೇರಿದ ಬ್ಯಾಂಕ್‌ನ ನಿರ್ದೇಶಕರು ಹಾಗೂ ರೈತ ಮುಖಂಡರು ಡಯಾಲಿಸೀಸ್ ಯಂತ್ರದ ಬಗ್ಗೆ ಮಾಹಿತಿ ಪಡೆದು ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇದ್ದಲ್ಲಿ ರೈತರು ಜೋಡಿಸುವುದಾಗಿ ಭರವಸೆ ನೀಡಿ ಯಂತ್ರ ಖರೀದಿಗೆ ಮುಂಗಡ ಚೆಕ್ ನೀಡುವ ಮೂಲಕ ರೈತರು ತಾಲೂಕಿನ ಡಯಲಿಸೀಸ್ ರೋಗಿಗಳಿಗೆ ವರದಾನ ನೀಡಲು ಮುಂದಾಗಿ ಮಾನವೀಯತೆ ಮೆರೆದಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ವೈದ್ಯ ಡಾ.ಡಿ.ಬಸವರಾಜ, ತಜ್ಞ ವೈದ್ಯ ಡಾ.ಪ್ರಶಾಂತ್‌ಕುಮಾರ, ಕೀರಣ್‌ಕುಮಾರ್ ಜೈನ್ ಹಾಗೂ ವ್ಯಾಯಮ ಶಾಲೆಯ ಅಡಳಿತ ಮಂಡಳಿಯ ಸದಸ್ಯರು ಹಾಗೂ ಬ್ಯಾಂಕ್‌ನ ನಿರ್ದೇಶಕರು ಇದ್ದರು.

ವರದಿ – ಮಹೇಶ ಶರ್ಮಾ ಅಥಣಿ

Leave a Reply

Your email address will not be published. Required fields are marked *