ತಾವರಗೇರಾ ಪಟ್ಟಣದ ವಿಶ್ವಚೇತನ ಅಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ & ಪ್ರೌಡ ಶಾಲೆಯಲ್ಲಿಂದು ನಡೆದ 13ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಅದ್ದೂರಿಯಾಗಿ ಜರುಗಿತು.

Spread the love

ತಾವರಗೇರಾ ಪಟ್ಟಣದ ವಿಶ್ವಚೇತನ ಅಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ & ಪ್ರೌಡ ಶಾಲೆಯಲ್ಲಿಂದು ನಡೆದ 13ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಅದ್ದೂರಿಯಾಗಿ ಜರುಗಿತು.

ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ವಿಶ್ವಚೇತನ ಅಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ & ಪ್ರೌಡ ಶಾಲೆಯಲ್ಲಿಂದು ನಡೆದ 13ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಜೊತೆಗೆ 10ನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭವು ಅದ್ದೂರಿಯಾಗಿ ಜರುಗಿತು. ಈ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ ಶ್ರೀ ಶರಣಪ್ಪ ಬಂಡರಗಲ್ಲ. ಉದ್ಘಾಟಕರಾಗಿ ಶ್ರೀ ವೀರುಪಾಕ್ಷಪ್ಪ ತಾಳಿಕೋಟಿ. ಹಾಗೂ ಶ್ರೀ ಎಸ್.ಎಸ್.ಅರಳಿ ನಿವೃತ್ತ ಉಪನ್ಯಾಸಕರು. ಹಾಗೂ ಸಂಸ್ಥೆಯ ಬಳಗದವತಿಯಿಂದ ಸಸಿಗೆ ನೀರು ಹಾಕುವ ಮುಲಕ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ವೀರುಪಾಕ್ಷಪ್ಪ ತಾಳಿಕೋಟಿಯವರು ಒಂದು ಪತ್ರಿಕೆ ಸ್ಥಾಪನೆ ಮಾಡುವುದು ಅಷ್ಟು ಸುಲಭದ ಮಾತಲ್ಲ ವರದಿಗಾರನಾಗಿ ವರದಿ ಮಾಡುವುದು ಸುಲಭ, ಆದರೆ ಒಂದು ಪತ್ರಿಕೆ ಹುಟ್ಟು ಹಾಕುವುದು ಸುಲಭದ ಮಾತಲ್ಲ, ಹಾಗೇ  ಒಂದು ಶೀಕ್ಷಣ ಸಂಸ್ಥೆ ಹುಟ್ಟಿಸಿ, ಈ ಸಂಸ್ಥೆ ಈ ಮಟ್ಟಕ್ಕೆ ಬೆಳೆಸುವುದು ಅಷ್ಟು ಸುಲಭದಮಾತಲ್ಲ, ಹಾಗಾಗಿ ಈ ಸಂಸ್ಥೆಗೆ ವಿಧ್ಯಾರ್ಥಿಗಳು ಹಾಗೂ ಪಾಲಕರು ತಾವೇಲ್ಲರೂ ಸೇರಿ ಸಹಕರಿಸಬೇಕೆಂದರು.

ಜೊತೆಗೆ 10ನೇ ತರಗತಿಯಲ್ಲಿ ಉತ್ತೀರ್ಣರಾದ ಕುಮಾರಿ ಅನುಷಾ ವೆಂಕಟೇಶ್ ತಂಬ್ರಳ್ಳಿ. ಕುಮಾರ, ಸೂರಜ್ ಸಾಹೇಬಗೌಡ ಪಾಟೀಲ್. ಕುಮಾರ ಪವನಕುಮಾರ ಶ್ರೀನಿವಾಸ ದರೋಜಿ. ಕುಮಾರಿ ಪೂಜಾ ವೀರುಪಾಕ್ಷಪ್ಪ ಗಾಳಿ. ಮಂಜುನಾಥ ಪ್ರಭಾಕರ ಶೆಟ್ಟರ್ ವಿದ್ಯಾರ್ಥಿಗಳು ಅತಿ ಹೆಚ್ಚು ಹಂಕ ಪಡೇದು ಈ ಸಂಸ್ಥೆಗೆ ಕೀರ್ತಿ ತಂದು ಕೊಟ್ಟಿರುವುದು ವಿಶೇಷವಾಗಿದ್ದು. ಈ ಎಲ್ಲಾ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಹಾಗೆ ಈ ವಿದ್ಯಾರ್ಥಿಗಳ ಸಾಧನೆಗೆ ಸಹಕರಿಸಿದ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು. ಬೆಸ್ಟ್ ಸ್ಟೂಡೆಂಟ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ದೊಡ್ಡನಗೌಡ ಗೌಡರ್. ಡಾ॥ಶ್ರೀ ರಮೇಶ ಬಂಡರಗಲ್ಲ. ಶ್ರೀ ಶಿವನಗೌಡ ಪಾಟೀಲ್. ಶ್ರೀ ಎ.ವೖ.ಲೋಕರೆ. ಶ್ರೀ ಚಂದ್ರಶೇಖರ್ ಶಿರಗುಂಪಿ. ಶ್ರೀ ಕಾಶೀನಾಥ ನಾಗಲೀಕರ. ಶ್ರೀ ವಿಕ್ರಾಂತ್ ಗಜೇಂದ್ರಗಡ. ಶ್ರೀಮಹಾಂತೇಶ ಕಲ್ಲಪ್ಪನವರು. ಶ್ರೀ ರವಿ ಹಾನಗಲ್. ಶ್ರೀ ಸುರೇಶ ಬೋಹರಾ. ಶ್ರೀ ಕವೀತಾ ಬಂಡರಗಲ್ಲ.  ಹಾಗೂ ಮುದ್ದು ವಿಧ್ಯಾರ್ಥಿಗಳು ಮತ್ತು ಪಾಲಕರು ಈ ಕಾರ್ಯಕ್ರಮದಲ್ಲಿ ಪಾಲುಗೊಂಡಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *