ತಾವರಗೇರಾ ಪಟ್ಟಣ ಬಂದ ಮಾಡಲು ಪಣ ತೊಟ್ಟ  ಖಾಕಿ ಪಡೆ..

Spread the love

ತಾವರಗೇರಾ ಪಟ್ಟಣ ಬಂದ ಮಾಡಲು ಪಣ ತೊಟ್ಟ  ಖಾಕಿ ಪಡೆ..

ರಾಜ್ಯದಲ್ಲಿ ನಡೆಯುತ್ತಿರುವ ಈ ಕೋವಿಡ್ 19 ರ ವಿರುದ್ದ  ತಾವರಗೇರಾ ಪಟ್ಟಣದ  ಇಂದಿನಿಂದ ಹಿಡಿದು  ಬೆಳಗ್ಗೆ 9 ಗಂಟೆಯಿಂದ ಲಾಕಡೌನ್ ಜಾರಿಯಲ್ಲಿದ್ದು. ಯಾರು ಅನಾವಶ್ಯಕವಾಗಿ ಓಡಾಡಬಾರದು ಅಂತ ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ಸಮಿತಿಯಿಂದ ಆದೇಶ ಹೊರಡಿಸಿದೆ. ತುರ್ತು ಸೇವೆ ಒದಗಿಸುವ ಎಲ್ಲ ಸರ್ಕಾರಿ ಇಲಾಖೆ, ಕಾರ್ಪೋರೇಷನ್ ಗಳ ಓಡಾಟಕ್ಕೆ ನಿರ್ಬಂಧವಿಲ್ಲ. ರೋಗಿಗಳು ಅವರ ಸಹಾಯಕರು, ವ್ಯಾಕ್ಸಿನ್ ಪಡೆದುಕೊಳ್ಳುವ  ನಾಗರೀಕರು ಓಡಾಡಬಹುದು. ತಮ್ಮ ಮನೆಯ ಆಸುಪಾಸಿನ ದಿನಸಿ ಅಂಗಡಿ, ಹಣ್ಣು ತರಕಾರಿ ಹಾಲು ಮಾಂಸದ ಅಂಗಡಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ತೆಗೆದಿರುತ್ತದೆ.. ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ ಇರುತ್ತದೆ. ಮದುವೆ ಕಾರ್ಯಕ್ರಮಕ್ಕೆ 50 ಜನರು ಮಾತ್ರ ಹೋಗಬೇಕು. ಸಿನಿಮಾ, ಬಾರ್, ಪಬ್, ಮಾಲ್ ಎಲ್ಲದರ ಮೇಲೆ ನಿಷೇಧ  ಹೇರಲಾಗಿದೆ. ಧಾರ್ಮಿಕ ರಾಜಕೀಯ ಗುಂಪು ಸೇರುವಿಕೆ ನಿಷೇಧ  ಇದೆ.ಬೆಳಗಿನ ಜಾವ್ ಮಾತ್ರ ಪಾರ್ಕ್​ ಓಪನ್  ಇರುತ್ತೆ. ಧಾರ್ಮಿಕ ಕೇಂದ್ರಗಳನ್ನು ನಿಷೇಧಿಸಲಾಗಿದೆ..ಈ  ಲಾಕಡೌನ್ ಸಂದರ್ಭದಲ್ಲಿ. ರೋಗಿಗಳು ಖಾಸಗಿ ವಾಹನದಲ್ಲಿ  ಓಡಾಡಬಹುದು. ಮಾಧ್ಯಮದವರು, ವೈದ್ಯರು, ನರ್ಸಿಂಗ್ ಸ್ಟಾಫ್ ಎಲ್ಲರೂ ಕೂಡ ಖಡ್ಡಾಯವಾಗಿ ಮಾಸ್ಕ ಧರಸಿ ಓಡಾಡಬಹುದು. ಖಾಸಗಿ ವಾಹನಗಳಲ್ಲಿ ಓಡಾಡಬೇಡಿ. ಇನ್ನು, ಕೋವಿಡ್​​ ನಿಂದ ಮೃತಪಟ್ಟವರನ್ನು ಸ್ವಂತ ಜಮೀನಿನಲ್ಲಿ ಶವ ಸಂಸ್ಕಾರ ಮಾಡಲು ಅವಕಾಶ ಕೊಟ್ಟಿದ್ದೇವೆ. ಆದರೆ ಸಂಬಂಧಪಟ್ಟವರಿಂದ ಅನುಮತಿ ಪಡೆದು ಕೋವಿಡ್ ನಿಯಮ‌ ಪಾಲನೆ ಮಾಡಬೇಕು ಎಂದರು. ವಿಶೇಷವಾಗಿ ತಾವರಗೇರಾ ಪಟ್ಟಣದಲ್ಲಿ ಪಟ್ಟಣ ಪಂಚಾಯತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜೊತೆಗೆ ನಾಡ ಕಚೇರಿಯ ಅಕಾರಿಗಳು ಹಾಗೂ ಸಿಬ್ಬಂದಿಗಳು ಸಹ  ಈ ಕೋವಿಡ್ 19 ರ ಬಗ್ಗೆ ವಿಶೇಷ ಜಾಗೃತಿ ವಹಿಸುತ್ತಿಲ್ಲ. ಈ ಹಿಂದೆ ಸಲ್ಲಿಸಿದಾಗೆ ಕಾಟ ಚಾರಕ್ಕೆ ಪ್ರಚಾರ ಮಾಡಿ ಮನೆ ಸೇರುತ್ತಿದ್ದಾರೆ, ಇದರಲ್ಲಿ ವಿಶೇಷವಾಗಿ ತಾವರಗೇರಾ ಪಟ್ಟಣದ ಪೊಲೀಸ್ ಠಾಣೆಯ ಪಿ.ಎಸ್.ಐ ಗಳಾದ  ಗೀತಾಂಜಲಿ ಶಿಂಧೆಯವರು ಹಾಗೂ ಪೊಲೀಸ್ ಸಿಬ್ಬಂದಿಗಳು ಜೊತೆಗೆ ಹೋಂ ಗಾರ್ಡಗಳು ತಮ್ಮ ಜೀವ ತೊರೇದು ಹಗಲಿರುಳು ಎನ್ನದೆ ತಾವರಗೇಋಅ ಪಟ್ಟಣದ ಪ್ರಮೂಖ ನಗರ ಹಾಗೂ ಬಿದಿ ಬಿದಿಗೆ ಇಳಿದು ಸಾರ್ವಜನಿಕರಿಗೆ ಎಚ್ಚರಿಸುತ್ತ  ತಾವರಗೇರಾ ಪಟ್ಟಣದ ಸುತ್ತ ರೌಂಡ್ ಹಾಕುವ ಮೂಲಕ  ಈಗಾಗಲೇ  ಸಾರ್ವಜನಿಕರಿಗೆ ಹಾಗೂ ಅಂಗಡಿ ಮಾಲೀಕರಿಗೆ ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸುತ್ತ ಬರುವುದು ವಿಶೇಷವಾಗಿದೆ. ಒಟ್ಟಾರೆ ಪಟ್ಟಣದ ಪೊಲೀಸ್ ಠಾಣೆಯ ಮಾನ್ಯ ಪಿ.ಎಸ್.ಐಗಳಾದ ಗೀತಾಂಜಲಿ ಶಿಂಧೆಯವರು ಹಿಂದಿನ ವರ್ಷದಲ್ಲಿ ಈ ಕರೋನದ ನಿಮೀತ್ಯವಾಗಿ ಆಗಮಿಸಿದ ಇವರು. ತಾವರಗೇರಾ ಪಟ್ಟಣದ ಹಲವು ಕಾರ್ಯಗಳಲ್ಲಿ ಯಶಸ್ವಿಯಾಗಿ ಈ ಹಿಂದೆ ಮಾನ್ಯ ಸಿ.ಎಂ. ಇವರಿಂದ ಗೌರವ ಪೂರ್ವಕವಾಗಿ ಚಿನ್ನದ ಫದಕ ಪಡೆದು ತಾವರಗೇರಾ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.  ಈ ಕಾರ್ಯಕ್ಕೆ ಶ್ಲಾಘನೀಯ ಸಲ್ಲಿಸುವ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ವೆಬ್ ಬಳಗ. ಆರೋಗ್ಯವೆ ಭಾಗ್ಯ,   ಪ್ರತಿಯೊಬ್ಬರ ಆರೋಗ್ಯ ಪ್ರತಿಯೊಬ್ಬರ ಕೈಯಲ್ಲಿ, ಹಾರಿ ಹೋದ ಪ್ರಾಣ ಪಕ್ಷಿ, ಮರಳಿ ಬಾರದು ದಯವಿಟ್ಟು ಎಚ್ಚೆತ್ತುಕೊಳ್ಳಿ ಸಾರ್ವಜನಿಕರೆ.

ವರದಿ – ಅಮಾಜಪ್ಪ ಹೆಚ್. ಜುಮಲಾಪೂರ

Leave a Reply

Your email address will not be published. Required fields are marked *