ಹೆಬ್ಬಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಸಸಿ ನೆಡುವ  ಹಾಗೂ ವಿತರಿಸುವ ಮೂಲಕ ಹೊಸ ವರ್ಷ ಆಚರಣೆ….

Spread the love

ಹೆಬ್ಬಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಸಸಿ ನೆಡುವ  ಹಾಗೂ ವಿತರಿಸುವ ಮೂಲಕ ಹೊಸ ವರ್ಷ ಆಚರಣೆ….

ಇಂದು ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಹೆಬ್ಬಾಳ ಗ್ರಾಮದ ಮಾಜಿ ಗ್ರಾಂ.ಪಂ.ಅದ್ಯಕ್ಷರಾದ ಶ್ರೀ ಶಫೀ ಹೆಬ್ಬಾಳ  ಅವರು  ಶಾಲೆಗೆ ಅಲಂಕಾರಿಕ 500  ಸಸಿಗಳನ್ನು ವಿತರಿಸುವ ಮೂಲಕ ಹೊಸವರ್ಷ ಆಚರಣೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು. ಬಳಿಕ ಶಾಲೆಯ ಆವರಣದಲ್ಲಿ ಸಸಿನೆಟ್ಟು ಮತ್ತಷ್ಟೂ ಪರಿಸರ ಕಾಳಜಿಗೆ ಸ್ಪೂರ್ತಿಯಾದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಮ್ಮ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಸರಕಾರಿ ಶಾಲೆಯ ಕಾಳಜಿ ವಹಿಸುವ ಗ್ರಾಮದ ಯುವಕರನ್ನು ಹಾಗೂ ದಾನಿಗಳನ್ನು ಸ್ಮರಿಸುತ್ತಾ ಹಾಗೂ ಹೊಸವರ್ಷ ಈ ಸಲ ಪರಿಸರ ಬೆಳಸುವ ಮೂಲಕ ಆಚರಿಸುವುದು ಸಂತಸ ವಿಷಯ ಎಂದರು. ಕಾರ್ಯಕ್ರಮದ ನಿರೂಪಣೆ ಹಾಗೂ ಕಾರ್ಯಕ್ರಮವನ್ನು ವಿನಯ್ ಪಾಟೀಲ್ ಶಿಕ್ಷಕರು ನೆರೆವೆರಿಸಿಕೊಟ್ಟರು. ಶಾಲಾ ಮುಖ್ಯೋಪಾದ್ಯರಾದ ಶಿವಮ್ಮ ಎಸ್ಡಿ ಎಂ ಸಿ ಅದ್ಯಕ್ಷರು ವೀರಪ್ಪ ಬಡಿಗೇರ , ಉಪಾದ್ಯಕ್ಷರಾದ ಲಕ್ಷ್ಮೀ ಗಂ/ಧರ್ಮಣ್ಣ , ಮಾಜಿ ಗ್ರಾಂ.ಪಂ.ಅದ್ಯಕ್ಷರು ಶಫೀ , ಗ್ರಾಮದ ಹಿರಿಯರು ಪಾತಪ್ಪ ಶಿಕ್ಷಕರಾದ ವಿನಯ್ ,ಮರಿಜಡಿಯಪ್ಪ ಬಸಪ್ಪ  ಶಿಕ್ಷಕಿಯರಾದ ವನಿತಾ ,ಮಂಜುಳಾ , ಸರೋಜಮ್ಮ  ,ಋಕ್ಸಾನ , ಶೋಭಾ , ಹೆಬ್ಬಾಳ , ಡಣಾಪೂರ ಹಸಿರು ಬಳಗ ಸದಸ್ಯರಾದ ಉಮೇಶ , ಹನುಭಾವಿ , ಬಸವರಾಜ , ರಾಘವೇಂದ್ರ  ಶಾಲಾ ಮುದ್ದು ಮಕ್ಕಳು ಭಾಗಿ ಇದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *