ತಾವರಗೇರಾ ಪಟ್ಟಣ ಪಂಚಾಯತ ಚುನಾವಣಾ ವಾರ್ಡಗಳ ಮತದಾನದ ವಿವರ….

Spread the love

ತಾವರಗೇರಾ ಪಟ್ಟಣ ಪಂಚಾಯತ ಚುನಾವಣಾ ವಾರ್ಡಗಳ ಮತದಾನದ ವಿವರ….

ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ 15 ವಾರ್ಡ್ ಗಳಲ್ಲಿ ನಡೆದ ಚುನಾವಣೆ ಯಲ್ಲಿ ಶೇಕಡಾ 80.69 % ರಷ್ಟು ಮತದಾನವಾಗಿದ್ದು, ಬಹುತೇಕ ಶಾಂತಿಯುತವಾಗಿ ನಡೆಯಿತು . ಒಟ್ಟು 8783 ಮತ ಚಲಾವಣೆಯಾಗಿದ್ದು 4426 ಪುರುಷ ಮತದಾರರು ಹಾಗೂ 4357 ಮಹಿಳೆಯರು ಮತಚಲಾಯಿಸಿದ್ದಾರೆ. ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆದಿದ್ದು, ಅಭ್ಯರ್ಥಿಗಳು ತಮ್ಮ ಸೋಲು ಹಾಗೂ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಫಲಿತಾಂಶದ ಮೇಲೆ ಕಣ್ಣಿಟ್ಟಿದ್ದಾರೆ. ಮತದಾನದ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 7 ಸ್ಥಾನ, ಬಿಜೆಪಿ 5, ಹಾಗೂ ತೀವ್ರ ಪೈಪೋಟಿ ನೀಡಿರುವ ಪಕ್ಷೇತರ ರು 3. ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಒಟ್ಟಿನಲ್ಲಿ ಪಪಂ ಚುನಾವಣೆಯಲ್ಲಿ ಯಾರು ಬಹುಮತ ಪಡೆಯುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ, ಅತಂತ್ರ ಪಪಂ ಆಗಬಹುದೆಂಬುದು ಪಟ್ಟಣದ  ನಾಗರಿಕರ ಅನಿಸಿಕೆಯಾಗಿದೆ. ಒಟ್ಟಿನಲ್ಲಿ ಚುನಾವಣಾ ಕಾವಿನಿಂದ ಅಭ್ಯರ್ಥಿಗಳು ಕೊಂಚ ಬಿಡುವು ಪಡೆದುಕೊಂಡಿದ್ದಾರೆ, ಚುನಾವಣಾ ಫಲಿತಾಂಶಕ್ಕಾಗಿ ಎದರು ನೋಡುತ್ತಿದ್ದಾರೆ. ಮತದಾನದ ಸಂದರ್ಭದಲ್ಲಿ ಮಾನ್ಯ ಸಹಾಯಕ ಆಯುಕ್ತರು ಕೊಪ್ಪಳ, ಕುಷ್ಟಗಿ ತಹಶಿಲ್ದಾರರಾದ ಎಂ ಸಿದ್ದೇಶ ಹಾಗೂ ಸಿಬ್ಬಂದಿ ವರ್ಗ, ಕುಷ್ಟಗಿ ಸಿಪಿಐ ನಿಂಗಪ್ಪ ಎನ್ ಆರ್ , ಹನಮಸಾಗರ ಪಿಎಸ್‌ಐ ಅಶೋಕ ಬೇವೂರ , ಕುಷ್ಟಗಿ ಪಿಎಸ್ಎಐ ತಿಮ್ಮಣ್ಣ ನಾಯಕ, ಸ್ಥಳೀಯ ಪಿಎಸ್‌ಐ ವೈಶಾಲಿ ಝಳಕಿ, ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ 2 ಡಿಆರ್ ವಾಹನಗಳು, ಕಂದಾಯ ಇಲಾಖೆ ಸಿಬ್ಬಂದಿ, ಚುನಾವಣಾ ಅಧಿಕಾರಿಗಳಾದ ಶ್ರೀ ಶೈಲ ಸೋಮನಕಟ್ಟಿ, ತಿಪ್ಪೇಸ್ವಾಮಿ, ಬಸವರಾಜ, ಸಂತೋಷ ಸೇರಿದಂತೆ ಮತ್ತಿತರ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟು ಶಾಂತಿಯುತ ಮತದಾನ ನಡೆಯುವಂತೆ ನೋಡಿಕೊಂಡರು.

1 ward  617// 726

3 ward 679// 711

4 ward 482// 577

5 ward 793// 980

6 ward  671// 806

7  ward      //

8 ward 637 // 835

09 ward 665//845

10 ward      //

11 ward 561//741

14 ward 483// 650

15 ward 668//778

16 ward 557// 664

17 ward 608// 715

18 ward 648 //820

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *