ಡ್ರಗ್ಸ್ ಜಾಗೃತಿ ಸೈಕಲ್ ಯಾತ್ರೆ ಸಾಹಸಿಗರನ್ನ ಪ್ರಶಂಸಿಸಿದ ಸಿಜಿಸಿ ಮೋಹನ್ ಕುಮಾರ್ ದಾನಪ್ಪ……

Spread the love

ಡ್ರಗ್ಸ್ ಜಾಗೃತಿ ಸೈಕಲ್ ಯಾತ್ರೆ ಸಾಹಸಿಗರನ್ನ ಪ್ರಶಂಸಿಸಿದ ಸಿಜಿಸಿ ಮೋಹನ್ ಕುಮಾರ್ ದಾನಪ್ಪ……

ಬೆಂಗಳೂರು: ಡಿ 25: ದೇಶದಲ್ಲಿ ಹೆಚ್ಚಾಗುತ್ತಿರುವ ಮಾದಕ ದ್ರವ್ಯ ಮತ್ತು ಮಾದಕ ವ್ಯಸನಿಗಳನ್ನ ತಡೆಗಟ್ಟಲು ದೇಶದ ಜನರಲ್ಲಿ ಜಾಗೃತಿ ಮೂಡಿಸಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುಮಾರು 3800ಕಿಲೋ ಮೀಟರ್ ಸೈಕಲ್ ಯಾತ್ರೆ ಕೈಗೊಂಡಿರುವ ಹುಬ್ಬಳ್ಳಿ ಹೆಸ್ಕಾಂನ ಪೊಲೀಸ್ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಮತ್ತು ಇಂಜನಿಯರ್ ಪ್ರಶಾಂತ್ ಹಿಪ್ಪರಗಿರವರು ಬೆಂಗಳೂರಿಗೆ ತಲುಪಿದ್ದು ಅವರ ಸಾಹಸ ಮತ್ತು ಸಾಮಾಜಿಕ ಕಳಕಳಿಯನ್ನ ಪ್ರಶಂಶಿಸಿ ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ಅಭಿನಂದಿಸಿ ಸನ್ಮಾನಿಸಿದರು,  ಸಮಾಜದಲ್ಲಿ ಮಾದಕ ವ್ಯಸನವನ್ನು ಹೋಗಲಾಡಿಸುವುದು ನಮ್ಮೆಲ್ಲರ ಸಾಮಾಜಿಕ ಹೊಣೆಗಾರಿಕೆಯಾಗಿದ್ದು ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಸಮಾಜದಲ್ಲಿ ನಮ್ಮ ಕುಟುಂಬದ ಸದಸ್ಯರು ಮಾದಕ ವ್ಯಸನಕ್ಕೆ ಬಲಿಯಾಗದಂತೆ ತಡೆಯುವುದರ ಜೊತೆಗೆ ಇತರರು ಈ ಚಟಕ್ಕೆ ಬಲಿಯಾಗದಂತೆ ಮಾಡುವ ಮಹತ್ವದ ಹೊಣೆಗಾರಿಕೆ ನಮ್ಮ ಮೇಲಿದೆ, ಸಾರ್ವಜನಿಕರಿಗೆ ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಮಹತ್ತರ ಸಾಹಸಕ್ಕೆ ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಕೈ ಹಾಕಿರುವುದು ದೇಶದಲ್ಲೇ ಪ್ರಥಮ ಎಂದು ಸಿಜಿಸಿ ಮೋಹನ್ ಕುಮಾರ್ ದಾನಪ್ಪನವರು ತಿಳಿಸಿದರು….

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *