ಜುಮಲಾಪುರ ಕೋವಿಡ್ ನಿಯಮ ಪಾಲಿಸುತ್ತ ಕೆಲಸ ಮಾಡಿ   ಗ್ರಾ ಪಂ ಅಭಿವೃದ್ಧಿ ಅಧಿಕಾರಿ ನಾಗೇಶ್ ಅಳಿಗನೂರ

Spread the love

ಜುಮಲಾಪುರ ಕೋವಿಡ್ ನಿಯಮ ಪಾಲಿಸುತ್ತ ಕೆಲಸ ಮಾಡಿ   ಗ್ರಾ ಪಂ ಅಭಿವೃದ್ಧಿ ಅಧಿಕಾರಿ ನಾಗೇಶ್ ಅಳಿಗನೂರ

ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಪಾಲಿಸುತ್ತಾ, ಕೆಲಸ ನಿರ್ವಸಿ, ಸರ್ಕಾರದ ಆಸ್ತಿ ಆಸ್ತಿ ರಚನೆಯ ಬಗ್ಗೆ ಯೋಚಿಸಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾಗೇಶ ಅಳಿಗನೂರ ಹೇಳಿದರು ಅವರು ಸಮೀಪದ ಜುಮಲಾಪೂರ ಗ್ರಾಮದ ಸಾರ್ವಜನಿಕರಿಗೆ ನೀಡಿರುವ  ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ,  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ದುಡಿಯೋಣ ಬಾ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡುವ ಉದ್ದೇಶದಿಂದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಈ ಅಭಿಯಾನವನ್ನು ಪ್ರಾರಂಭಿಸಿದ್ದು, ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಕಾಮಗಾರಿಗಳ ಬೇಡಿಕೆ, ಕೂಲಿ ಬೇಡಿಕೆಗಳನ್ನು ಸಲ್ಲಿಸಲು ಒಳ್ಳೆಯ ಅವಕಾಶ ನೀಡಿದ್ದಾರೆ. ಅದರಂತೆ ಗ್ರಾಮ ಪಂಚಾಯತಿಯ ಎಲ್ಲಾ ಗ್ರಾಮಗಳಲ್ಲಿ ಈಗಾಗಲೇ 2020-21 ನೇ ಸಾಲಿನಲ್ಲಿ ನಾಲಾ ಸುಧಾರಣೆ,ಕೆರೆ ಹೂಳೆತ್ತುವುದು ಸೇರಿದಂತೆ ಇನ್ನಿತರ ಅನೇಕ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, 2021-22 ನೇ ಸಾಲಿನಲ್ಲಿ ಅಂದರೆ ಇದೇ ಏಪ್ರಿಲ್-ಮೇ ನಿಂದ ಎಲ್ಲಾ ಗ್ರಾಮಗಳಲ್ಲಿ ಬದು ನಿರ್ಮಾಣ,ಕೃಷಿಹೊಂಡಗಳಂತಹ ಜಲಮೂಲಗಳ ಸಂರಕ್ಷಣಾ,ಶಾಲಾ ಆವರಣ ಅಭಿವೃದ್ಧಿ, ಶಾಲಾ ಮಕ್ಕಳ. ಶೌಚಾಲಯ,ಬೀಸಿಯೂಟ ಕೋಣಿ ಸೇರಿದಂತೆ ಇತರೆ ಕಾಮಗಾರಿ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.  ನಂತರ ಕೂಲಿಕಾರರ ಹತ್ತಿರ ಸಂಚರಿಸಿ ಕೋವಿಡ್-19 ಬಗ್ಗೆ ಪ್ರಚಾರ ಮಾಡಿ, ಕೂಲಿ ಕಾಮಗಾರಿಗಳ ಬೇಡಿಕೆಗಳನ್ನು ಸಂಗ್ರಹಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯತಿಯ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

 

 

Leave a Reply

Your email address will not be published. Required fields are marked *