ಜುಮಲಾಪೂರ ರೈತನ ಮೆಣಸಿನಕಾಯಿ ಬೆಳೆ. ವಿಪರೀತ ಮಳೆ. ರೋಗ ಬಂದು. ಸಂಪೂರ್ಣ ಕೊಳೆ……

Spread the love

ಜುಮಲಾಪೂರ ರೈತನ ಮೆಣಸಿನಕಾಯಿ ಬೆಳೆ. ವಿಪರೀತ ಮಳೆ. ರೋಗ ಬಂದು. ಸಂಪೂರ್ಣ ಕೊಳೆ……

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಜುಮಲಾಪೂರ ಗ್ರಾಮದ  ನಿಂಗಪ್ಪ ತಂ ರಾಮಣ್ಣ ಬಂಗಾಳಿಗಿಡ  ಎನ್ನುವ ರೈತನ ಹೊಲದಲ್ಲಿ    2 ರಿಂದ 3 ಎಕರೆ  ಜಮೀನಿನಲ್ಲಿ ಒಂದುವರೆ ಲಕ್ಷ ರೂ ಖರ್ಚು ಮಾಡಿ ಬೆಳೆದಿದ್ದ. ಮೆಣಸಿನಕಾಯಿ ಬೆಳೆ ಸಂಪೂರ್ಣವಾಗಿ  ವಿಪರೀತ ಮಳೆಯಿಂದ ಹಾಗೂ ರೋಗದಿಂದ  ಕೊಳೆತು ಹೋಗಿದೆ. ಸತತವಾಗಿ 2 ತಿಂಗಳಿಂದ ಮಗುವಂತೆ ಜೊಪಾನ ಮಾಡಿ ಅದಕ್ಕೆ ಗೊಬ್ಬರ ಕಿಟ ಕ್ರಿಮಿನಾಶಕ ಸಿಂಪರಣೆ ಮಾಡುತ್ತ. ಸ್ವಲ್ಪರ ಮಟ್ಟಿಗೆ ಆದಾಯ ಸಿಗಬಹುದು ಎನ್ನುವ  ಆಸೆ ಇಟ್ಟುಕೊಂಡಿದ್ದ ರೈತನಿಗೆ  ತಲೆ ಮೇಲೆ ಮೊಡ ಕಳಚಿ ಬಿದ್ದಂತಾಗಿದೆ.  ದಿನವಿಡಿ ಸುರಿಯುತ್ತಿರುವ ಮಳೆಗೆ ರೈತರು ಕಂಗಾಲಾಗಿದ್ದಾರೆ. ಬೆಳೆದ ಬೆಳೆ ನಿರಿಗೆ ನೆನೆದು ಕೊಳೆತು ಹೋಗುತ್ತಿದೆ. ಹವಾಮಾನದ ವೈಪರೀತ್ವಕ್ಕೆ ಸಿಲುಕಿ ಹಲವಾರು ರೋಗಗಳಿಗೆ ತುತ್ತಾಗಿದೆ. ಹಾಗಾಗಿ ರೈತ ಕಷ್ಟ ಪಟ್ಟು ಬೆಳೆದ ಬೆಳೆಗೆ ವರುಣರಾಜ ನೆ  ಖಳನಾಯಕನಾಗಿರುವದು ರೈತನ ದುರದೃಷ್ಟಕರ ಹಾಗಾಗಿ ಸಂಭಂದಿಸಿದ ಅಧಿಕಾರಿಗಳು ಸಂಕಷ್ಟದಲ್ಲಿರುವ ರೈತರ ಬಾಳಿಗೆ ಬೆಳಕು ನಿಡಬೇಕು.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *