ಹಿಂದು ಸಂಘಟನೆ ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣ:ಆರೋಪ ಸ್ಥಾನದಲ್ಲಿದ್ದ 9 ಮಂದಿ ಖುಲಾಸೆ..

Spread the love

ಹಿಂದು ಸಂಘಟನೆ ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣ:ಆರೋಪ ಸ್ಥಾನದಲ್ಲಿದ್ದ 9 ಮಂದಿ ಖುಲಾಸೆ..

ಕಳೆದ ಐದು ವರ್ಷಗಳ ಹಿಂದೆ ಅಂದರೆ ಆಗಸ್ಟ್  14ರ ರಾತ್ರಿ ಅಖಂಡ ಭಾರತ ಸಂಕಲ್ಪ ಯಾತ್ರೆ ನಂತರ ಆಟವನ್ನು ಬಾಡಿಗೆ ಪಡೆಯುವ ನೆಪದಲ್ಲಿ ಗುಡ್ಡೆಹೊಸೂರು ಸಮೀಪದಲ್ಲಿ ಸಂಘಟನೆ ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆ ಸಂಬಂಧ ಆರೋಪ ಎದುರಿಸುತ್ತಿದ್ದ 9 ಮಂದಿಗೆ ಮಡಿಕೇರಿ ಸೂಕ್ತ ಸಾಕ್ಷ್ಯಾಧಾರವಿಲ್ಲದೆ ಮಡಿಕೇರಿ ಜಿಲ್ಲಾ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ.  ಬಾಡಿಗೆ ನೆಪದಲ್ಲಿ ಆಟೋ ಹತ್ತಿದ್ದ ದುಷ್ಕರ್ಮಿಗಳು ಗುಡ್ಡೆಹೊಸೂರುವಿನ ತಿರುವಿನಲ್ಲಿ ಕತ್ತು ಸೀಳಿ ಹೊಟ್ಟೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು, ಘಟನೆ ಸಂಭವಿಸುತ್ತಿದ್ದಂತೆ ಕೊಡಗು ಜಿಲ್ಲೆಯಾದ್ಯಂತ ವ್ಯಾಪಕ ಪ್ರತಿಭಟನೆ, 144 ಸೆಕ್ಷನ್ ಸಹ ಜಾರಿಯಾಗಿತ್ತು.ಇದೇ ಸಮಯದಲ್ಲಿ ರಾಜ್ಯದ ವಿವಿಧೆಡೆ ಸಹ ಕೆಲವು ಹಿಂದು ಸಂಘಟನೆ ಕಾರ್ಯಕರ್ತರ ಹತ್ಯೆ ನಡೆದಿದ್ದ ಹಿನ್ನಲೆಯಲ್ಲಿ ಕೊಡಗಿನಲ್ಲೂ ಪ್ರವೀಣ್ ಪೂಜಾರಿ ಹತ್ಯೆಯ ಪ್ರಕರಣ ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು. ಪ್ರಕರಣ ಸಂಬಂಧ ಆರೋಪವನ್ನು ಎದುರಿಸುತ್ತಿದ್ದ ಒಂಬತ್ತು ಮಂದಿಯ ಪರ ವಾದ ಮಾಡಿದ ವಕೀಲರಾದ ಅಬುಬೂಕರ್ ಟಿ.ಹೆಚ್.ಎ ಯಾವುದೇ ಸಾಕ್ಷಿ ಆಧಾರವಿಲ್ಲ ಎಂದು ನ್ಯಾಯಾಲಯದ ಎದುರು ವಿಚಾರ ಮಂಡಿಸಿದ್ದು ತನ್ನ ಕಕ್ಷಿದಾರರು ನಿರ್ದೋಷಿಗಳೆಂದು ಸಾಭೀತುಪಡಿಸುವಲ್ಲಿ ಯಶಸ್ವಿಯಾದರು.ಪ್ರವೀಣ್ ಪೂಜಾರಿ ಪರ ವಾದ ಮಂಡಿಸಿದ ಸರ್ಕಾರಿ ಪರ ವಕೀಲರ ಬಳಿ ಸಹ ಸೂಕ್ತ ಸಾಕ್ಷಿಗಳು ಇಲ್ಲದ ಕಾರಣ ನ್ಯಾಯಾಧೀಶರು ಆರೋಪಿ ಸ್ಥಾನದಲ್ಲಿರುವ 8 ಮಂದಿ, ಮತ್ತು ಪರಾರಿಯಾಗಿರುವ ಒಬ್ಬರು ಆರೋಪ ಮುಕ್ತ ಎಂದು ಆದೇಶಿಸಿದ್ದಾರೆ.

ವರದಿ- ಮಹೇಶ ಶರ್ಮಾ

Leave a Reply

Your email address will not be published. Required fields are marked *