ಸಾಹಿತ್ಯ ಸಹಜವಾಗಿ ಗ್ರಹಿಸುವಂತಿರಬೇಕು- ರಾಗಂ.

Spread the love

ಸಾಹಿತ್ಯ ಸಹಜವಾಗಿ ಗ್ರಹಿಸುವಂತಿರಬೇಕು- ರಾಗಂ.

ಹುಮನಾಬಾದ : ಸಾಹಿತ್ಯವನ್ನು ಪ್ರೀತಿ ಮೂಲಕ ಆರಾಧಿಸಬೇಕು ಅದು ಸಹಜವಾಗಿಯೇ ಸಾಹಿತ್ಯವನ್ನು ಗ್ರಹಿಸಬೇಕು. ಮಕ್ಕಳು,ವಿಧ್ಯಾರ್ಥಿಗಳಗಳನ್ನು  ಘಟ್ಟಿಗೊಳಿಸುವ ಕೆಲಸ ಸಾಹಿತ್ಯ ಮಾಡಬೇಕು ಎಂದು ಸಾಹಿತಿ,ಪ್ರಾಧ್ಯಾಪಕ, ವಿಮರ್ಶಕ ಡಾ.ರಾಜಶೇಖರ ಮಠಪತಿ(ರಾಗಂ) ಅವರು ಹೇಳಿದರು. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಭರವಸೆಗಳ ಕೋಶ,ಕನ್ನಡ- ಇಂಗ್ಲೀಷ- ಹಿಂದಿ ವಿಭಾಗಗಳ ಸಹಯೋಗದಲ್ಲಿ ಸಾಹಿತ್ಯವನ್ನು ಗ್ರಹಿಸುವ ಬಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಖಲಿಮ್ ಗಿಬ್ರಾನ್, ಓಶೋ, ಬಸವ, ಬುದ್ಧ, ಮುಂತಾದ ಚಿಂತಕರ ಗ್ರಹಿಕೆಗಳು ಮಹತ್ವ ಪಡೆದಿವೆ. ಅವು ಕಾಲಕಾಲಕ್ಕೆ ಪ್ರಸ್ತುತವಾಗಿವೆ.ಅರವತ್ತರಷ್ಟು  ರಾಷ್ಟ್ರಗಳಲ್ಲಿ ಆಂಗ್ಲ ಭಾಷೆಯನ್ನು ಬಳಸುವುದಿಲ್ಲ. ಹಾಗಾಗಿ ನಮಗೆ ಸೂಕ್ತವಾದ,ಅತಿ ಅವಶ್ಯಕತೆ ಇರುವ ಭಾಷೆಯನ್ನು ಕಲಿಯಬೇಕು.ಆಸಕ್ತಿ,ನೋಡುವ ದೃಷ್ಟಿಕೋನ  ಬದಲಾದಾಗ ಸಾಹಿತ್ಯ ಗ್ರಹಿಕೆಯಾಗುತ್ತದೆಂದರು.ಅಧ್ಯಕ್ಷತೆ ಪ್ರಾಂಶುಪಾಲ ಡಾ.ವೀರಣ್ಣ ತುಪ್ಪದ ವಹಿಸಿ ಮಾತನಾಡಿದ ಅವರು, ಸಾಹಿತ್ಯವೆನ್ನುವುದು ಮಕ್ಕಳಲ್ಲಿ ಭಾವನೆ ಅರಳಿಸಬಾರದು,ಕೆರಳಿಸಬಾರದೆಂದರು ಕನ್ನಡ ವಿಭಾಗದಂತೆ ಎಲ್ಲಾ ವಿಭಾಗಗಳಲು ಇಂತಹ ಕಾರ್ಯ ನಿರ್ವಹಿಸಬೇಕೆಂದರು. ಡಾ.ಜಯದೇವಿ ಗಾಯಕವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರಮುಖರಾದ ಡಾ.ಅರುಣಕುಮಾರ ನರೋಣಕರ್, ರಾಜಕುಮಾರ ಟಿ,  ಎಚ್ .ಕಾಶೀನಾಥ ರೆಡ್ಡಿ, ಬಸವರಾಜ ದಯಾಸಾಗರ, ಉಮೇಶ ಮಠದ, ಕಲಾವಿದ ಸಿದ್ರಾಮ ವಾಘಮಾರೆ, ಡಾ.ರವಿ ನಾಯಕ, ಡಾ.ಶಾಂತ ಕುಮಾರ ಬನಗುಂಡಿ, ಡಾ. ಸಂಜುಕುಮಾರ, ಡಾ.ವೆಂಕಟ ಜಾಧವ, ಡಾ.ಬಾಬುರಾವ ಚಿಮಕೋಡ್, ಡಾ.ಸಂಗೀತಾ ಹಿರೇಮಠ, ಡಾ.ಕುಪೇಂದ್ರ, ಡಾ.ವಿಜಯಕುಮಾರ ಎಖ್ಖೇಳಿ, ಆಶ್ವೀನಿ ರಾಮಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಐಕ್ಯುಎಸಿ ಸಂಚಾಲಕಿ ಪ್ರೊ.ಪ್ರೇಮಲತಾ ಮುನ್ನೋಳಿ ಸ್ವಾಗತಿಸಿದರು. ಡಾ.ರಾಜಾಬಾಯಿ ನಿರೂಪಿಸಿದರು, ದಿಲೀಪ ಪತಂಗೆ ವಂದಿಸಿದರು.

ವರದಿ – ಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *